ನವದೆಹಲಿ: Centres Letter To States - ಒಂದೆಡೆ ದೇಶಾದ್ಯಂತ ಕೊರೊನಾ ವೈರಸ್(Coronavirus) ನ ಎರಡನೇ ಅಲೆ ಅಬ್ಬರ ಆರಂಭವಾಗಿರುವ ಬೆನ್ನಲ್ಲೇ ಇನ್ನೊಂದೆಡೆ ಹೋಳಿ ಹಾಗೂ ಈದ್ ಹಬ್ಬಗಳೂ ಕೂಡ ಆಗಮಿಸುತ್ತಿವೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದು ಹಲವು ನಿರ್ದೇಶನಗಳನ್ನು ನೀಡಿದೆ ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಕಟುವಾಗಿ ಪಾಲಿಸಲು ಸೂಚಿಸಿದೆ. ಹಬ್ಬಗಳ ಅವಧಿಯಲ್ಲಿ ಜನ ಸಂದಣಿಯನ್ನು ನಿಯಂತ್ರಣದಲ್ಲಿ ಇಡಬೇಕು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯುವಿಕೆಯನ್ನು ಸುನಿಶ್ಚಿತಗೊಳಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ-Holi 2021: ರಾಶಿಗನುಗುಣವಾಗಿ ಯಾವ ರಾಶಿಯವರಿಗೆ ಯಾವ ಬಣ್ಣ ಶುಭ ತಿಳಿಯಿರಿ
ಈ ಕುರಿತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಹಬ್ಬಗಳ ಅವಧಿಯಲ್ಲಿ ಜನಸಂದಣಿಗಳ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಅವುಬಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಿ. ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮಾರ್ಗಸೂಚಿಗಳನ್ನು(Covid-19 Protocols) ಹೊರಡಿಸಿ ಎಂದು ಸೂಚಿಸಿದ್ದಾರೆ. " ದೇಶ ಪ್ರಸ್ತುತ ಮಹತ್ವದ ತಿರುವಿನಿಂದ ಹಾಯುತ್ತಿದೆ. ಏಕೆಂದರೆ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊವಿಡ್ 19 (Covid-19) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸ್ಥಿತಿಯ ಪರಾಮರ್ಶೆ ನಡೆಸಿ ಕೇಂದ್ರ ಗ್ರಹ ಸಚಿವಾಲಯ ಮಾರ್ಚ್ 23 ರಂದು ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಟೆಸ್ಟ್ ಟ್ರ್ಯಾಕ್ ಹಾಗೂ ಟ್ರೀಟ್ ಪ್ರೋಟೋಕಾಲ್ ಗಳನ್ನು ಕಠಿಣ ರೂಪದಲ್ಲಿ ಜಾರಿಗೆ ತರಲು ಸೂಚಿಸಲಾಗಿತ್ತು" ಎಂದು ಭಲ್ಲಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ-Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ
ಇದಲ್ಲದೆ ಮುಂಬರುವ ಹೋಳಿ ಹಬ್ಬ (Holi), ಶಬ್-ಎ-ಬಾರಾತ್, ಬೆಳೆಗಳಿಗೆ ಸಂಬಂಧಿಸಿದ ಹಬ್ಬಗಳು, ಈಸ್ಟರ್, ಈದ್-ಉಲ್-ಫಿತ್ರ್ (Eid-Ul-Fitr) ಇತ್ಯಾದಿಗಳ ವೇಳೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಜನ ಸಂದಣಿ ನಿಯಂತ್ರಿಸಬೇಕು ಹಾಗೂ ಕೊರೊನಾ ನಿಯಮಗಳಾಗಿರುವ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯುವಿಕೆಯನ್ನು ಸುನಿಶ್ಚಿತಗೊಳಿಸಬೇಕು. ಈ ಸಂಬಂಧ ಆರೋಗ್ಯ ಸಚಿವಾಲಯ ಕೂಡ ಪತ್ರ ಬರೆದಿದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
Union Home Secretary Ajay Bhalla writes to all states and Union Territories to take necessary measures in view of upcoming festivals. #COVID19 pic.twitter.com/3oVLRUVDYr
— ANI (@ANI) March 26, 2021
ಇದನ್ನೂ ಓದಿ-Tips To Remove Holi Colour: ಬಟ್ಟೆಯಿಂದ ಹೋಳಿ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.