ನವದೆಹಲಿ: ಐಐಟಿ ದೆಹಲಿ ವಿಶ್ವದ ಅಗ್ಗದ ಕರೋನಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಕೊರೋಶೋರ್ ಎಂದು ಹೆಸರಿಡಲಾಗಿದೆ. ದೆಹಲಿ ಮೂಲದ ನ್ಯೂಟೆಕ್ ಮೆಡಿಕಲ್ ಡಿವೈಸಸ್ ಸಹಯೋಗದೊಂದಿಗೆ ಈ ಕಿಟ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಕಿಟ್ ಅನ್ನು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ರಾಜ್ಯ ಸಚಿವ ಸಂಜಯ್ ಧೋತ್ರೆ ಬುಧವಾರ ಬಿಡುಗಡೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೇವಲ ರೂ.65೦ಕ್ಕೆ ನಡೆಯಲಿದೆ ತಪಾಸಣೆ
ಐಐಟಿ ದೆಹಲಿಯು ಕಿಟ್‌ನ ಬೆಲೆಯನ್ನು ರೂ.399 ನಿಗದಿಪಡಿಸಿದೆ. ಆದರೆ ನ್ಯೂಟೆಕ್ ಮೆಡಿಕಲ್ ಡಿವೈಸಸ್ ಕಂಪನಿ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ನಿಗದಿಪಡಿಸಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಕಿಟ್‌ಗೆ ಐಸಿಎಂಆರ್ ಮತ್ತು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅನುಮೋದನೆ ಪಡೆಯಲಾಗಿದೆ. ಐಐಟಿ ದೆಹಲಿ ಪ್ರಕಾರ, ಕಿಟ್‌ನ ವೆಚ್ಚದೊಂದಿಗೆ ಆರ್‌ಎನ್‌ಎ ಐಸೋಲೆಶನ್ ಹಾಗೂ ಲ್ಯಾಬ್ ಶುಲ್ಕ ಪ್ರತ್ಯೇಕವಾಗಿ ವಿಧಿಸಲಾಗುವುದು. ಇದೆಲ್ಲವನ್ನು ಸೇರಿಸಿದರೆ ತಪಾಸಣೆಗೆ ಒಟ್ಟು ರೂ.65೦ ವೆಚ್ಚವಾಗುವ ಸಾಧ್ಯತೆ ಇದೆ ಎಂದಿದೆ.


ICMRನ ಅಧಿಕೃತ ಲ್ಯಾಬ್ ನಲ್ಲಿ ಇದು ಲಭ್ಯವಿರಲಿದೆ
RT-PCR ಆಧಾರಿತ ಈ ಕೊರೊನಾ ಟೆಸ್ಟಿಂಗ್ ಕಿಟ್ ICMRನ ಅಧಿಕೃತ ಲ್ಯಾಬ್ ನಲ್ಲಿ ದೊರೆಯಲಿದೆ. ಇದರಿಂದ ಮಾಡಲಾಗುವ ತಪಾಸಣೆಯ ವೆಚ್ಚ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಟೆಸ್ಟಿಂಗ್ ಗಳಿಗಿಂತ ತುಂಬಾ ಕಡಿಮೆಯಾಗಿರಲಿದೆ ಎಂದು IIT ದೆಹಲಿ ಹೇಳಿದೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಟೆಸ್ಟಿಂಗ್ ಕಿಟ್ ಗಳ ಬೆಲೆ ರೂ.2400 ಗಳಷ್ಟು ಇದೆ, ಕೊರೋಶೋರ್ ಟೆಸ್ಟಿಂಗ್ ಕಿಟ್ ಬೆಲೆ 399 ರೂ.ಆಗಿದೆ. ಇತರೆ ಎಲ್ಲ ವೆಚ್ಚಗಳನ್ನು ಸೇರಿಸಿ ರೂ.65೦ ರಷ್ಟು ಆಗಲಿದೆ. ಮಾರುಕಟ್ಟೆಯಲ್ಲಿರುವ ಟೆಸ್ಟ್ ಗಳ ಫಲಿತಾಂಶ ಬರಲು ಒಂದು ದಿನದ ಕಾಲಾವಕಾಶ ಬೇಕು. ಆದರೆ, ಕೊರೋಶೋರ್ ಫಲಿತಾಂಶ ಕೇವಲ 85 ನಿಮಿಷಗಳಲ್ಲಿ ಮಾತ್ರ ಹೊರಬರುತ್ತದೆ.