ನವದೆಹಲಿ: ಬದಲಾಗುತ್ತಿರುವ ವಾತಾವರಣದಲ್ಲಿ ಜನರು ಸೀತ-ಕೆಮ್ಮನ್ನು ನಿರ್ಲಕ್ಷಿಸುತ್ತಾರೆ. ಇವು ಕಡಿಮೆ ರೋಗ ನಿರೋಧಕ ಶಕ್ತಿಯ ಲಕ್ಷಣಗಳಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಜನರು ಹಲವಾರು ರೋಗಗಳಿಂದ ದೂರ ಇರುತ್ತಾರೆ. ಜೊತೆಗೆ ಅವರಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕೂಡ ಹೆಚ್ಚಾಗಿರುತ್ತದೆ. ಇದಕ್ಕಾಗಿ ಆರೋಗ್ಯಕರ ಲೈಫ್ ಸ್ಟೈಲ್ ಹೊಂದಿರುವುದು ಅತ್ಯಾವಶ್ಯಕವಾಗಿದೆ. ಕೆಲ ಆಹಾರ ಪದಾರ್ಥಗಳ ಸೇವನೆಯಿಂದ ಕೂಡ ನೀವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಈ ಕೆಳಗೆ ಸೂಚಿಸಲಾಗಿರುವ ಕೆಲ ಆಹಾರಗಳು ನೈಸರ್ಗಿಕವಾಗಿ ಇಮ್ಯೂನಿಟಿಯನ್ನು ಬೂಸ್ಟ್ ಮಾಡುತ್ತವೆ.


COMMERCIAL BREAK
SCROLL TO CONTINUE READING

1. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಹೇರಳ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ಸ್ ಗಳಿರುತ್ತವೆ. ಇವು ನಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೊತೆಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೂಡ ಶರೀರಕ್ಕೆ ಒದಗಿಸುತ್ತವೆ.


2. ಹಸಿ ಶುಂಟಿ
ಹಸಿ ಶುಂಟಿಯಲ್ಲಿರುವ ಒಂದು ತತ್ವ ಕೆಮ್ಮು, ಗಂಟಲಿನ ಕಿರಿಕಿರಿ ಹಾಗೂ ಉರಿಯೂತದ ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ ಇದು ಶರೀರದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನೂ ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಇದೂ ಕೂಡ ಒಂದು ಪರಿಣಾಮಕಾರಿ ಆಹಾರ.


3. ಅಣಬೆ
ಶರೀರದ ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ವಿಶ್ವಾದ್ಯಂತ ಜನರು ಮಶ್ರೂಮ್ ಅಂದರೆ ಅಣಬೆಯ ಸೇವನೆ ಮಾಡುತ್ತಾರೆ. ನಿತ್ಯ 30 ಗ್ರಾಂ ಅಣಬೆ ಸೇವನೆ ನಿಮ್ಮ ಶರೀರವನ್ನು ಹಲವು ರೋಗಗಳಿಂದ ದೂರ ಇಡುತ್ತದೆ.


4. ಅರಿಶಿಣ
ಉರಿಯೂತ ಹಾಗೂ ಸೋಂಕಿನಿಂದ ಬಚಾವಾಗಲು ದಶಕಗಳಿಂದ ಅರಿಶಿಣದ ಉಪಯೋಗ ಮಾಡಲಾಗುತ್ತಿದೆ. ಅರಿಶಿಣದಲ್ಲಿ ಕರ್ಕ್ಯೂಮಿನ್ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂಬುದು ಪ್ರಾಚೀನ ಔಷಧಿಗಳಿಂದ ಸಾಬೀತಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ಸ್ ಗಳು ಇರುತ್ತವೆ. ಕ್ಯಾನ್ಸರ್ ಹಾಗೂ ಅಲ್ಜೈಮರಸ್ ರೋಗ ನಿವಾರಣೆಗೂ ಕೂಡ ಇದು ಪರಿಣಾಮಕಾರಿ ಎನ್ನಲಾಗಿದೆ.


5. ಹುಳಿ ಹಣ್ಣುಗಳು
ದೇಹದಲ್ಲಿ ಬಿಳಿ ರಕ್ತಕಣಗಳ ವೃದ್ಧಿಗೆ ವಿಟಮಿನ್ ಸಿ ಸೇವನೆ ಉತ್ತಮ ಎನ್ನಲಾಗುತ್ತದೆ. ದೇಹದಲ್ಲಿ ವಿಟಮಿನ್ ಸಿ ಪ್ರಮಾಣವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಹುಳಿ ಹಣ್ಣುಗಳಾಗಿರುವ ಕಿತ್ತಳೆ, ದ್ರಾಕ್ಷಿಹಣ್ಣುಗಳ ಸೇವನೆ ಹೆಚ್ಚಾಗಿ ಮಾಡಬೇಕು. ಇವು ನೈಸರ್ಗಿಕವಾಗಿ ನಿಮ್ಮ ಶರೀರದಲ್ಲಿ ವಿಟಮಿನ್ ಸಿ ಅನ್ನು ಹೆಚ್ಚಿಸುತ್ತವೆ.


6. ಬ್ರೋಕೊಲಿ
ಹಸಿರು ತರಕಾರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಇರುತ್ತವೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ಸ್ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ. ಇದರ ಸೇವೆನೆಯಿಂದ ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.


7. ಪಾಲಕ್
ಪೌಷ್ಟಿಕ ತತ್ವ ಗಳ ಆಗರವಾಗಿರುವ ಈ ಸೊಪ್ಪಿನ ತರಕಾರಿಯನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಫೊಲೇಟ್ ಅಂಶ ಶರೀರದಲ್ಲಿ ಹೊಸ ಕೋಶಗಳಲ್ಲಿರುವ DNA ಅನ್ನು ರಕ್ಷಿಸುತ್ತದೆ. ಇದರಲ್ಲಿರುವ ಫೈಬರ್, ಕಬ್ಬಿಣಾಂಶ, ಆಂಟಿ ಆಕ್ಸಿಡೆಂಟ್ ತತ್ವಗಳು ಹಾಗೂ ವಿಟಮಿನ್ ಸಿ ಶರೀರದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ.


8. ಬಾದಾಮ್
ನಿತ್ಯ 8-10 ನೆನೆಸಿಟ್ಟ ಬಾದಾಮ್ ಗಳ ಸೇವನೆಯಿಂದ ಶೆರೀರದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಜೊತೆಗೆ ಇದರಿಂದ ನಿಮ್ಮ ಮೆದುಳನ್ನು ನೀವು ಒತ್ತಡದಿಂದ ಮುಕ್ತವಾಗಿಸಬಹುದು. ಇದರಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಇ ಅಂಶ ಇರುತ್ತದೆ. ಇದು ವಿಷಾಣುಗಳನ್ನು ಹಾಗೂ ಕ್ಯಾನ್ಸರ್ ಯುಕ್ತ ಕೋಶಗಳನ್ನು ನಷ್ಟ ಪಡಿಸುವಲ್ಲಿ ಸಹಾರಿಯಾಗಿದೆ.


ರೋಗ ನಿರೋಧಕ ಕ್ಷಮತೆ ಹೆಚ್ಚಿಸಲು ಕೆಲ ಸಲಹೆಗಳು
ಸಾಕಷ್ಟು ನಿದ್ರೆ ಮಾಡಿ
ಸಕ್ಕರೆ ಸೇವನೆಯಿಂದ ದೂರ ಇರಿ
ಸೊಪ್ಪಿನ ತರಕಾರಿ ಸೇವಿಸಿ.
ಧೂಪ್ ಬಳಕೆ ಉತ್ತಮ
ಹೇರಳ ಪ್ರಮಾಣದಲ್ಲಿ ಶುದ್ಧ ನೀರನ್ನು ಸೇವಿಸಿ.
ಮತ್ತು ಬರಿಸುವ ಪದಾರ್ಥಗಳ ಸೇವನೆಯಿಂದ ದೂರ ಇರಿ