Cucumber Peel Benefits: ಸೌತೆಕಾಯಿ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನೊಮ್ಮೆ ಓದಿ
Cucumber Peel Benefits: ಇಂದು ನಾವು ಸೌತೆಕಾಯಿ ಸಿಪ್ಪೆಯೊಂದಿಗೆ ಫೇಸ್ ಪ್ಯಾಕ್ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಲಿದ್ದೇವೆ, ಇದು ನಿಮ್ಮ ದೇಹವನ್ನು ತಂಪಾಗಿಸುವುದು ಮಾತ್ರವಲ್ಲ ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ.
Cucumber Peel Benefits: ತರಕಾರಿ ಮತ್ತು ಹಣ್ಣುಗಳ ಸಿಪ್ಪೆಗಳಿಂದಲೂ ಹಲವು ರೀತಿಯ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿರಬಹುದು. ಆದರೂ ಸಾಮಾನ್ಯವಾಗಿ ತರಕಾರಿಗಳನ್ನು ಬಳಸುವಾಗ ನಾವು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಇದನ್ನು ತಪ್ಪದೇ ಓದಿ.
ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುವ ತರಕಾರಿಗಳಲ್ಲಿ ಸೌತೆಕಾಯಿ (Cucumber) ಕೂಡ ಒಂದು. ಸೌತೆಕಾಯಿ ನಮ್ಮ ದೇಹವನ್ನು ತಂಪಾಗಿಸುತ್ತದೆ. ಅಷ್ಟೇ ಅಲ್ಲ ಅದರ ಸಿಪ್ಪೆಯೂ ನಮಗೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ಸೌತೆಕಾಯಿ ಸಿಪ್ಪೆಗಳು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇಂದು ನಾವು ಸೌತೆಕಾಯಿ ಸಿಪ್ಪೆಯೊಂದಿಗೆ ಫೇಸ್ ಪ್ಯಾಕ್ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಲಿದ್ದೇವೆ, ಇದು ನಿಮ್ಮ ದೇಹವನ್ನು ತಂಪಾಗಿಸುವುದು ಮಾತ್ರವಲ್ಲ ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ - ಬೇಸಿಗೆಯಲ್ಲಿ ಲೆಮನ್ ಟೀ ಯಾಕೆ ಕುಡಿಯಬೇಕು..? ಇಲ್ಲಿದೆ 4 ಕಾರಣ.!
ಸೌತೆಕಾಯಿ ಸಿಪ್ಪೆ ಫೇಸ್ ಪ್ಯಾಕ್ ಮಾಡುವುದು ಹೇಗೆ?
ಸೌತೆಕಾಯಿ ಫೇಸ್ ಪ್ಯಾಕ್ ಮಾಡಲು, ಮೊದಲು ಸೌತೆಕಾಯಿಯನ್ನು ಸಿಪ್ಪೆಯನ್ನು ತೆಗೆಯಿರಿ. ನಂತರ ಸಿಪ್ಪೆಯನ್ನು ಮಿಕ್ಸಿಯಲ್ಲಿ ರುಬ್ಬಿರಿ. ಅದನ್ನು ಒಂದು ಬಟ್ಟಲಿನಲ್ಲಿ ಇರಿಸಿ. ಈಗ ಇದಕ್ಕೆ 2 ಟೀ ಚಮಚ ಜೇನುತುಪ್ಪ ಸೇರಿಸಿ. ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಅದನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ನಿಮ್ಮ ಮುಖವನ್ನು ತೊಳೆಯಿರಿ.
ಸೌತೆಕಾಯಿ ಸಿಪ್ಪೆ ಫೇಸ್ ಪ್ಯಾಕ್ನ ಪ್ರಯೋಜನಗಳು:-
ಡಾರ್ಕ್ ಸರ್ಕಲ್ ನಿಂದ ಪರಿಹಾರ- ಡಾರ್ಕ್ ಸರ್ಕಲ್ ತೆಗೆದುಹಾಕುವಲ್ಲಿ ಈ ಫೇಸ್ ಪ್ಯಾಕ್ (Face Pack) ಉತ್ತಮ ಪರಿಣಾಮವನ್ನು ಬೀರಲಿದೆ. ಈ ಪ್ಯಾಕ್ ಅನ್ವಯಿಸುವ ಮೂಲಕ, ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ.
ಇದನ್ನೂ ಓದಿ - Onion Benefits: ಪ್ರತಿದಿನ ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗುವುದರಿಂದ ಆಗುವ ಪ್ರಯೋಜನ ತಿಳಿದರೆ ಅಚ್ಚರಿಗೊಳ್ಳುತ್ತೀರಿ
ಟ್ಯಾನಿಂಗ್ ಕಡಿಮೆಯಾಗುತ್ತದೆ - ಸೌತೆಕಾಯಿ ಸಿಪ್ಪೆಗಳಿಂದ ಮಾಡಿದ ಫೇಸ್ ಪ್ಯಾಕ್ ನಿಮ್ಮ ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ಮೆಲನಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಟ್ಯಾನಿಂಗ್ ಅನ್ನು ಸಹ ತೆಗೆದುಹಾಕುತ್ತದೆ.
ಸೂಕ್ಷ್ಮ ಚರ್ಮಕ್ಕೆ ಪ್ರಯೋಜನಕಾರಿ - ಈ ಸೌತೆಕಾಯಿ ಫೇಸ್ ಪ್ಯಾಕ್ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ತುಂಬಾ ಪ್ರಯೋಜನಕಾರಿ. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.