ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಕೂದಲಿಗೆ ಸಂಬಂಧಪಟ್ಟಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂದಲು ಉದುರುವುದು, ಒಣ ಕೂದಲು, ತಲೆಹೊಟ್ಟು, ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಾನಾ ಕಸರತ್ತುಗಳನ್ನು ಕೂಡಾ ಅನುಸರಿಸಿ ನೋಡುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನೂ ಖರ್ಚು ಮಾಡುತ್ತಾರೆ. ಇಷ್ಟಾದರೂ ಸ ಮಸ್ಯೆಗೆ ಪರಿಹಾರ ಸಿಗುತ್ತದೆ ಎಂದೇ ಹೇಳುವಂತಿಲ್ಲ. ಆದರೆ ಮನೆಯ ಹಿತ್ತಲಲ್ಲಿ ಸಿಗುವ ಈ ಎಲೆಯನ್ನು ಬಳಸಿ ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೌದು ನಾವಿಲ್ಲಿ ಕರಿಬೇವಿನ ಎಲೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಡುಗೆಯ ಘಮ ಹೆಚ್ಚಿಸಲು ಬಳಸುವ ಕರಿಬೇವು ಅನೇಕ ಔಷಧೀಯ ಗುಣಗಳನ್ನು ಕೂಡಾ  ಹೊಂದಿದೆ.     


COMMERCIAL BREAK
SCROLL TO CONTINUE READING

ಕೂದಲಿಗೆ ಕರಿಬೇವಿನ ಪ್ರಯೋಜನಗಳು  :
ಉದ್ದನೆಯ ಕೂದಲಿಗಾಗಿ :
ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕೂದಲಿನ ಬೆಳವಣಿಗೆಗೆ, ಕರಿಬೇವಿನ ಎಲೆಗಳೊಂದಿಗೆ ಮೆಂತ್ಯೆ ಮತ್ತು ನೆಲ್ಲಿಕಾಯಿಯನ್ನು  ಜೊತೆಯಾಗಿ ಬಳಸಿದರೆ ಅದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಒಂದು ಹಿಡಿ ಕರಿಬೇವಿನ ಎಲೆ ತೆಗೆದುಕೊಂಡರೆ ಅಷ್ಟೇ ಪ್ರಮಾಣದಲ್ಲಿ ಮೆಂತ್ಯೆ ಎಲೆಗಳನ್ನು ಕೂಡಾ ಬಳಸಬೇಕು. ಇದರ ಜೊತೆ ಒಂದು ನೆಲ್ಲಿಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಇಲ್ಲಿ ನೆಲ್ಲಿಕಾಯಿಯ ಬದಲು ನೆಲ್ಲಿಕಾಯಿ ಪುಡಿಯನ್ನು ಕೂಡಾ ಬಳಸಬಹುದು. ನೀವು ಇಲ್ಲಿ ಆಮ್ಲಾ ಪುಡಿಯನ್ನು ಸಹ ಬಳಸಬಹುದು. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು  ಕೂದಲಿಗೆ ಹಚ್ಚಿ ಅರ್ಧ ಗಂಟೆಯವರೆಗೆ ಹಾಗೆ ಬಿಡಿ. ನಂತರ ಕೂದಲನ್ನು  ತೊಳೆಯಿರಿ.


ಇದನ್ನೂ ಓದಿ : ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಸವಿದರೆ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು


ತಲೆಹೊಟ್ಟಿನ ಸಮಸ್ಯೆ ಪರಿಹಾರಕ್ಕೆ : 
ಕರಿಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಹೀಗಾಗಿ ಇದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಕರಿಬೇವಿನ ಸೊಪ್ಪನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬೇಕು. ಇದಕ್ಕಾಗಿ, ಒಂದು ಹಿಡಿ ಕರಿಬೇವಿನ ಎಲೆಗಳನ್ನು ಪುಡಿಮಾಡಿ ಅದಕ್ಕೆ 2 ಚಮಚ ಮೊಸರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಇದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ ತಲೆ ಹೊಟ್ಟಿನ  ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಸಿಗುತ್ತದೆ. 


ಕೂದಲು ಶುಷ್ಟವಾಗಿದ್ದರೆ : 
ಕೂದಲು ತುಂಬಾ ಒಣಗಿದ್ದರೆ, ಹಾನಿಗೊಳಗಾಗಿದ್ದು, ನಿರ್ಜೀವವಾಗಿದ್ದರೆ   ಕರಿಬೇವಿನ ಎಲೆಗಳನ್ನು ಬಳಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿ. ಕರಿಬೇವಿನ ಸೊಪ್ಪು ಬೆಂದ ಹಾಗೆ ಎಣ್ಣೆಯ ಬಣ್ಣ ಕೂಡಾ ಕಪ್ಪಾಗುವುದು. ನಂತರ ಗ್ಯಾಸ್ ಆಫ್ ಮಾಡಿ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಈ ಎಣ್ಣೆ ತಣ್ಣಗಾದ ನಂತರ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.  


ಇದನ್ನೂ ಓದಿ : Health Care Tips: ಪೋಷಕಾಂಶಗಳ ಆಗರವಾಗಿರುವ ಈ ತರಕಾರಿ ಚಳಿಗಾಲದ ಹಲವು ಕಾಯಿಲೆಗಳಿಗೆ ರಾಮಬಾಣ


ಕೂದಲು ಉದುರುವುದನ್ನು ತಡೆಯುತ್ತದೆ : 
ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಈ ಸಮಸ್ಯೆಯನ್ನು ನಿವಾರಿಸಲು ಕರಿಬೇವಿನ ಎಲೆಗಳನ್ನು ಬಳಸಬಹುದು. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ತೆಂಗಿನೆಣ್ಣೆಯೊಂದಿಗೆ ಬೇಯಿಸಿ ಅದಕ್ಕೆ ಮೆಂತ್ಯೆ ಕಾಳುಗಳನ್ನು ಸೇರಿಸಿ. ನಂತರ ಈ ಎಣ್ಣೆಯಿಂದ ನಿಮ್ಮ ನೆತ್ತಿಗೆ ವಾರಕ್ಕೊಮ್ಮೆ ಮಸಾಜ್ ಮಾಡಿ. ಮಸಾಜ್ ಮಾಡಿದ ಒಂದರಿಂದ ಒಂದೂವರೆ ಗಂಟೆಗಳ ನಂತರ ಕೂದಲನ್ನು ತೊಳೆಯಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.