Curry Leaves Benefits : ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು!
ಕರಿಬೇವಿನ ಎಲೆಯ ಸಹಾಯದಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇದು ನಿಮ್ಮನು ಮಧುಮೇಹ, ನರಶೂಲೆ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ರಕ್ಷಿಸಬಹುದು
ಕರಿಬೇವಿನ ಎಲೆಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿವೆ, ಇದರಿಂದಾಗಿ ಆಯುರ್ವೇದದಲ್ಲಿ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಆರೊಮ್ಯಾಟಿಕ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಸಿಟ್ರಸ್ನೊನಿಂದಾಗಿದೆ ಇದು ವಿಶಿಷ್ಟ ಪರಿಮಳ ಹೊಂದಿರುತ್ತದೆ. ಕರಿಬೇವು ಮೂಲತಃ ಭಾರತಕ್ಕೆ ಸೇರಿದ್ದು, ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ 5 ಶಕ್ತಿಯುತ ಪ್ರಯೋಜನಗಳು ನಿಮಗಾಗಿ..
1. ಆರೋಗ್ಯಕರ ಹೃದಯಕ್ಕೆ ಕರಿಬೇವಿನ ಎಲೆ :
ಕರಿಬೇವಿನ ಎಲೆ ಸೇವಿಸುವುದರಿಂದ ಹೃದಯ(Heart)ಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಸಂಶೋಧನೆ ಸಾಬೀತಾಗಿದೆ. ಸಂಶೋಧನೆಯ ಪ್ರಕಾರ, ಈ ಎಲೆಗಳಲ್ಲಿರುವ ಮಹಾನಿಂಬೈನ್ ಎಂಬ ದೊಡ್ಡ ಪ್ರಮಾಣದ ಆಲ್ಕಲಾಯ್ಡ್‌ಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Black Fungus: ಕೊವಿಡ್-19 ಒಂದು ಜಾಗತಿಕ ಮಹಾಮಾರಿ, ಆದರೆ Black Fungus ಮಾತ್ರ ಭಾರತದಲ್ಲಿಯೇ ಏಕೆ ವೇಗವಾಗಿ ಹರಡುತ್ತಿದೆ?
2. ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕರಿಬೇವಿನ ಎಲೆ :
ಕರಿಬೇವಿನ ಎಲೆಯ ಸಹಾಯದಿಂದ ರಕ್ತ(Blood)ದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇದು ನಿಮ್ಮನು ಮಧುಮೇಹ, ನರಶೂಲೆ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ರಕ್ಷಿಸಬಹುದು ಎಂದು ಪ್ರಾಣಿಗಳ ಮೇಲಿನ ಸಂಶೋಧನೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ : ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?
3. ಉರಿಯೂತ ಕಡಿಮೆ ಮಾಡಲು :
ಕರಿಬೇವಿನ ಎಲೆ(Curry Leaves) ಉರಿಯೂತದ ಗುಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಗುಣಲಕ್ಷಣಗಳು ಪ್ರೋಟೀನ್ ಅಥವಾ ಜೀನ್‌ಗಳಿಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಬೆಳಗ್ಗೆ ಬೇಗ ಎದ್ದರೆ ಎಷ್ಟೊಂದು ಆರೋಗ್ಯ ಲಾಭ ಇದೆ ಗೊತ್ತಾ..?
4. ತೂಕ ಇಳಿಕೆಗೆ ಕರಿಬೇವಿನ ಎಲೆ :
ಕರಿಬೇವಿನ ಎಲೆ ತಿನ್ನುವುದರಿಂದ ನಿಮ್ಮ ತೂಕ ಇಳಿಸಿಕೊಳ್ಳಲು(Weight Loss) ಸಹಾಯವಾಗುತ್ತದೆ. ಹೌದು, ಕರಿಬೇವಿನ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ತೂಕವನ್ನು ಪಡೆಯಬಹುದು.
ಇದನ್ನೂ ಓದಿ : Black Fungus : ಬ್ಲಾಕ್ ಫಂಗಸ್ ಗಾಳಿಯ ಮೂಲಕ ಶ್ವಾಸಕೋಶ ಪ್ರವೇಶಿಸುತ್ತೆ: AIIMS ವೈದ್ಯ
5. ಅತಿಸಾರಕ್ಕೆ ಕರಿಬೇವಿನ ಎಲೆ ಪರಿಹಾರ:
ಕರಿಬೇವಿನ ಎಲೆಗಳಲ್ಲಿರುವ ಕಾರ್ಬಜೋಲ್ ಅಂಶವು ಅದರ ಜೀವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೆಚ್ಚಿಸುತ್ತದೆ. ಇದು ನಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಪಿತ್ತ ದೋಷವನ್ನು ಸರಿಪಡಿಸುವ ಮೂಲಕ ಅತಿಸಾರವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.