ಬೆಳಗ್ಗೆ ಬೇಗ ಎದ್ದರೆ ಎಷ್ಟೊಂದು ಆರೋಗ್ಯ ಲಾಭ ಇದೆ ಗೊತ್ತಾ..?

ಬೆಳಗ್ಗಿನ ಹೊತ್ತಿನಲ್ಲಿ ವಾತಾವರಣದಲ್ಲಿ ಅತ್ಯಂತ ಹೆಚ್ಚು ಆಕ್ಸಿಜನ್  ಇರುತ್ತದೆ. ಜೊತೆಗೆ ಗಾಳಿ ಕೂಡಾ ಶುದ್ಧವಾಗಿರುತ್ತದೆ. ಇದನ್ನು ಉಸಿರಾಡಿದರೆ ನ್ಯಾಚುರಲ್ಲಾಗಿ ನವಚೈತನ್ಯ ಮೂಡುತ್ತದೆ.

Written by - Ranjitha R K | Last Updated : May 23, 2021, 10:06 AM IST
  • ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದರೆ ದಾರಿದ್ರ್ಯ ಇರುವುದಿಲ್ಲ
  • ಸೂರ್ಯಮೂಡುವ ಮೊದಲೇ ನಿಮ್ಮ ದಿನ ಶುರುವಾಗಲಿ.
  • ಬೆಳಗ್ಗೆ ಬೇಗ ಏಳುವುದರ ಹೆಲ್ತ್ ಲಾಭ ಇಲ್ಲಿದೆ ಓದಿ.!
ಬೆಳಗ್ಗೆ ಬೇಗ ಎದ್ದರೆ ಎಷ್ಟೊಂದು ಆರೋಗ್ಯ ಲಾಭ ಇದೆ ಗೊತ್ತಾ..? title=
ಸೂರ್ಯಮೂಡುವ ಮೊದಲೇ ನಿಮ್ಮ ದಿನ ಶುರುವಾಗಲಿ. (file photo)

ನವದೆಹಲಿ : ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದರೆ ದಾರಿದ್ರ್ಯ ಇರುವುದಿಲ್ಲ ಎಂದು ವಾಸ್ತು ಪಂಡಿತರು ಹೇಳುತ್ತಾರೆ. ವೈಜ್ಞಾನಿಕವಾಗಿಯೂ ಅದು ಸರಿ. ಯಾಕೆಂದರೆ ಬೆಳಗ್ಗೆ ಬೇಗ ಎದ್ದರೆ ಹಲವು ಆರೋಗ್ಯ ಲಾಭಗಳಿವೆ (Health benefits) . ಹಾಗಾಗಿ, ಬೆಳಗ್ಗಿನ ಸಕ್ಕರೆ ನಿದ್ರೆಯನ್ನು ಮರೆತು ಬಿಡಿ. ಸೂರ್ಯಮೂಡುವ ಮೊದಲೇ ನಿಮ್ಮ ದಿನ ಶುರುವಾಗಲಿ. ಅದಕ್ಕೆ ಕಾರಣ ಇಲ್ಲಿದೆ ನೋಡಿ. 

1. ನವ ಚೈತನ್ಯ ಸಿಗುತ್ತದೆ:
ಬೆಳಗ್ಗಿನ ಹೊತ್ತಿನಲ್ಲಿ ವಾತಾವರಣದಲ್ಲಿ ಅತ್ಯಂತ ಹೆಚ್ಚು ಆಕ್ಸಿಜನ್ (Oxygen) ಇರುತ್ತದೆ. ಜೊತೆಗೆ ಗಾಳಿ ಕೂಡಾ ಶುದ್ಧವಾಗಿರುತ್ತದೆ. ಇದನ್ನು ಉಸಿರಾಡಿದರೆ ನ್ಯಾಚುರಲ್ಲಾಗಿ ನವಚೈತನ್ಯ ಮೂಡುತ್ತದೆ.

2. ಯಾವುದೇ ಟೆನ್ಶನ್ ಇಲ್ಲದೆ ಡೇ ಪ್ಲಾನ್ ಮಾಡಬಹುದು
ಬೇಗ ಎದ್ದರೆ ಬೇಕಾದಷ್ಟು ಟೈಂ ಸಿಗುತ್ತದೆ. ಹಾಗಾಗಿ, ಯಾವುದೇ ಅವಸರ, ಟೆನ್ಶನ್ ಇಲ್ಲದೇ ಡೇ ಪ್ಲಾನ್ ಮಾಡಬಹುದು.

ಇದನ್ನೂ ಓದಿ : Black Fungus : ಬ್ಲಾಕ್ ಫಂಗಸ್‌ ಗಾಳಿಯ ಮೂಲಕ ಶ್ವಾಸಕೋಶ ಪ್ರವೇಶಿಸುತ್ತೆ: AIIMS ವೈದ್ಯ

3. ಬ್ರೇಕ್ ಫಾಸ್ಟ್ ಆರಾಮದಲ್ಲಿ ಮಾಡಬಹುದು.
ನಿಮ್ಮ ದೇಹಕ್ಕೆ ಶೇ. 50ರಷ್ಟು ಶಕ್ತಿ ಬೆಳಗ್ಗಿನ ಬ್ರೇಕ್ ಫಾಸ್ಟ್‍ನಲ್ಲಿ (Breakfast) ಸಿಗುತ್ತದೆ. ಯಾರು ಬ್ರೇಕ್‍ಫಾಸ್ಟ್ ಮಾಡುವುದಿಲ್ಲವೋ, ಅಥವಾ ಗಬಗಬ ಬ್ರೇಕ್ ಫಾಸ್ಟ್ ತಿನ್ನುತ್ತಾರೆ ಅವರಲ್ಲಿ ಆ ದಿನಕ್ಕೆ ಬೇಕಾದಷ್ಟು ಶಕ್ತಿ ದೇಹದಲ್ಲಿ ಸೃಷ್ಟಿಯಾಗುವುದಿಲ್ಲ. ಬೇಗ ಎದ್ದರೆ ಎಲ್ಲಾ ಕೆಲಸ ಬೇಗ ಮುಗಿಯುತ್ತದೆ. ಆರಾಮದಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಕಚೇರಿ ಸೇರಿಕೊಳ್ಳಬಹುದು.

4 ರಾತ್ರಿ ಬೇಗ ಮತ್ತು ಒಳ್ಳೇ ನಿದ್ರೆ ಬರುತ್ತೆ.
ರಾತ್ರಿ ಬೇಗ ನಿದ್ರೆ ಬರಲ್ಲ, ಹಾಗಾಗಿ ಬೆಳಗ್ಗೆ ಬೇಗ ಏಳಲು ಆಗಲ್ಲ. ಇದು ಸಮಸ್ಯೆ. ಒಮ್ಮೆ ನೀವು ಬೇಗ ಏಳುವ ಅಭ್ಯಾಸ ಮಾಡಿಬಿಟ್ಟರೆ ರಾತ್ರಿ ನಿಮಗೆ ಗೊತ್ತಿಲ್ಲದಂತೆ ಬೇಗ ನಿದ್ರೆ ಬಂದು ಬಿಡುತ್ತದೆ. ದೇಹಾಯಾಸದ ಕಾರಣ ಬೇಗ ಗಾಢ ನಿದ್ದೆಗೆ ಜಾರಿ ಬಿಡುತ್ತೀರಿ. ಇದು ಆರೋಗ್ಯಕ್ಕೆ (Good for health) ಹಿತಕಾರಿ.

ಇದನ್ನೂ ಓದಿ : Beauty Benefits of Chikoo: ಉತ್ತಮ ಚರ್ಮ, ಕೂದಲಿಗಾಗಿ ಬಳಸಿ ಸಪೋಟಾ ಮಾಸ್ಕ್

5. ದಿನಾ ವ್ಯಾಯಾಮ ಮಾಡಬಹುದು
ಬೇಗ ಎದ್ದರೆ ಯಾವುದೇ ಅವಸರ ಇಲ್ಲದೇ ವ್ಯಾಯಾಮ (Exercise) ಮಾಡಬಹುದು. ವ್ಯಾಯಾಮ ದೇಹಕ್ಕೆ ಬಹಳ ಮುಖ್ಯ. ವ್ಯಾಯಾಮ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.  

6. ಮೂಡ್ ಚೆನ್ನಾಗಿರುತ್ತದೆ. 
ಬೇಗ ಏಳುವವರ ಮನಸ್ಸಿನಲ್ಲಿ ಸಕರಾತ್ಮಕ ಯೋಚನೆ ಇರುತ್ತದೆ. ಒಂದು ಸ್ಟಡಿ ಪ್ರಕಾರ ಬೆಳಗ್ಗೆ ಬೇಗ ಎದ್ದರೆ ನೀವು ದಿನವಿಡೀ ಖುಷಿಯಾಗಿರುತ್ತೀರಿ.

ಇದನ್ನೂ ಓದಿ : ಆರೋಗ್ಯದಿಂದ ಇರಬೇಕಾದರೆ ಈ ಸಮಯದೊಳಗೆ ಮುಗಿದಿರಲಿ ಭೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News