ಬೆಳಗಿನ ಬೇನೆಗೆ  ಮನೆಮದ್ದು: ನಿಮಗೂ ಬೆಳಿಗ್ಗೆ ಎದ್ದ ಬಳಿಕ ಸುಸ್ತು, ದಣಿವು, ಬಲಹೀನತೆ ಕಾಡುತ್ತಿದೆಯೇ? ಇದು ನಿಮ್ಮ ದಿನಚರಿಯ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಮನೆಮದ್ದುಗಳ ಸಹಾಯದಿಂದ ನಿಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು. ಹಾಗಿದ್ದರೆ ಬೆಳಗಿನ ಬೇನೆಯಿಂದ ಪರಿಹಾರ ಪಡೆಯಲು ಅನುಸರಿಸಬೇಕಾದ ಸಲಹೆಗಳನ್ನು ತಿಳಿಯಿರಿ...


COMMERCIAL BREAK
SCROLL TO CONTINUE READING

ನಿಮ್ಮ ಮಲಗುವ ಸಮಯ ಮತ್ತು ಏಳುವ ಸಮಯದ ಬಗ್ಗೆ ನಿಗಾವಹಿಸಿ:
ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮೊದಲನೆಯದಾಗಿ, ನೀವು ಮಲಗುವ ಮತ್ತು ಏಳುವ ಸಮಯವನ್ನು ನಿರ್ಧರಿಸಿ. ನಿಗದಿತ ಸಮಯದಲ್ಲಿ ಮಲಗಲು ಪ್ರಯತ್ನಿಸಿ, ಇದರಿಂದ ನೀವು ಸಾಕಷ್ಟು ನಿದ್ರೆ ಪಡೆಯಬಹುದು. ಅಪೂರ್ಣ ಅಥವಾ ಹಸಿ ನಿದ್ರೆಯನ್ನು ನಿಮ್ಮ ಬೆಳಗಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಲು ಪ್ರಯತ್ನಿಸಿ. ಇದು ನಿದ್ರೆಯ ಚಕ್ರ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. 


ಇದನ್ನೂ ಓದಿ- Cholesterol Reduce Tips: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸರಳ ಮನೆಮದ್ದು


ಬೆಳಗ್ಗೆ ಎದ್ದ ತಕ್ಷಣ ಅರ್ಧ ಲೀಟರ್ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ :
ಬೆಳಗ್ಗೆ ಎದ್ದ ತಕ್ಷಣ ಸುಮಾರು ಅರ್ಧ ಲೀಟರ್ ಉಗುರುಬೆಚ್ಚನೆಯ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ದೇಹವು ಹೈಡ್ರೇಟೆಡ್ ಆಗಿ ಉಳಿಯುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ತಾಜಾ ಆದ ನಂತರ, ನೀವು ವಾಕಿಂಗ್ ಇಲ್ಲವೇ, ಜಾಗಿಂಗ್‌ಗೆ ಹೋಗಿ. ನಿತ್ಯ ಸುಮಾರು 20-30 ನಿಮಿಷಗಳ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮುಖ ಮತ್ತು ದೇಹವನ್ನು ತಾಜಾವಾಗಿರಿಸುತ್ತದೆ. 


ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಆಹಾರವನ್ನು ಸೇವಿಸಿ:
ಸ್ನಾನದ ನಂತರ ನೀವು ಉಪಹಾರ ಸೇವಿಸಬೇಕು. ಬೆಳಗಿನ ಉಪಾಹಾರದಲ್ಲಿ ಪ್ರೊಟೀನ್ ಯುಕ್ತ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಇವುಗಳನ್ನು ತಿನ್ನುವುದರಿಂದ ನೀವು ದಿನವಿಡೀ ಚೈತನ್ಯದಿಂದ ಇರುತ್ತೀರಿ. ಇದರೊಂದಿಗೆ ನಿಮ್ಮ ಮೂಡ್ ಕೂಡ ಉತ್ಸಾಹದಿಂದ ಕೂಡಿರುತ್ತದೆ.


ಇದನ್ನೂ ಓದಿ-   ನಿಂಬೆ ರಸವನ್ನು ಈ ವಿಧಾನದಲ್ಲಿ ಸೇವಿಸಿದರೆ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತದೆ


ಕರಿಬೇವಿನ ಎಲೆಯ ದ್ರಾವಣವನ್ನೂ ಸೇವಿಸಬಹುದು:
ಉತ್ತಮ ಪ್ರಯೋಜನಗಳಿಗಾಗಿ, ನೀವು ಬೆಳಿಗ್ಗೆ ನೀರಿನಲ್ಲಿ ಕರಿಬೇವಿನ ಎಲೆಗಳು, ನಿಂಬೆ ಮತ್ತು ಸಕ್ಕರೆಯನ್ನು ಬೆರೆಸಿ ಮತ್ತು ಅದರ ರಸವನ್ನು ತಯಾರಿಸಿದ ನಂತರ ಕುಡಿಯಬಹುದು. ಇದರ ಸೇವನೆಯಿಂದ ಬೆಳಗಿನ ಬೇನೆ ದೂರವಾಗುತ್ತದೆ. ನೀವು ಪ್ರತಿದಿನ ಈ ರೀತಿಯ ಒಂದು ಲೋಟ ದ್ರಾವಣವನ್ನು ಸೇವಿಸಿದರೆ, ಅದರ ಪರಿಣಾಮವು ನಿಮ್ಮ ಇಡೀ ದೇಹದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಧ್ಯಯನದ ಪ್ರಕಾರ, ದಿನಕ್ಕೆ 2 ಗ್ರಾಂ ಅಂದರೆ 8-10 ಕರಿಬೇವಿನ ಎಲೆಗಳನ್ನು ಸೇವಿಸಬಹುದು. ನೀವು ಬಯಸಿದರೆ, ನೀವು ಕರಿಬೇವಿನ ಎಲೆಯ ಚಹಾವನ್ನು ಸಹ ಸೇವಿಸಬಹುದು. ಇದು ಬೆಳಗಿನ ಆಯಾಸವನ್ನು ನಿವಾರಿಸುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.