Mint Tea Benefits: ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಪುದೀನ ಚಹಾ

Mint Tea Benefits: ನಮ್ಮಲ್ಲಿ ಕೆಲವರಿಗೆ ಆಗಾಗಾ ಚಹಾ ಸೇವಿಸುವ ಅಭ್ಯಾಸ ಇರುತ್ತದೆ. ಆದಾಗ್ಯೂ, ಬೇಸಿಗೆಯಲ್ಲಿ ಅವರು ಚಹಾ ಸೇವನೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ, ಕೆಲವು ವಿಶೇಷ ಚಹಾ ಬೇಸಿಗೆಯಲ್ಲಿ ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡಬಹುದು. 

Written by - Yashaswini V | Last Updated : May 9, 2022, 01:06 PM IST
  • ಬೇಸಿಗೆಯಲ್ಲಿ ಪುದೀನಾ ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೆ
  • ಪುದೀನ ಎಲೆಗಳು ವಿಟಮಿನ್-ಎ, ವಿಟಮಿನ್-ಸಿ ಮತ್ತು ಬಿ-ಕಾಂಪ್ಲೆಕ್ಸ್, ಫಾಸ್ಫರಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತವೆ
  • ಜೊತೆಗೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ
Mint Tea Benefits: ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಪುದೀನ ಚಹಾ  title=
Mint Tea Benefits

ಪುದೀನಾ ಚಹಾದ ಪ್ರಯೋಜನಗಳು:   ಬೇಸಿಗೆಯಲ್ಲಿ, ಕೆಲವರು ಚಹಾದಿಂದ ದೂರ ಓಡುತ್ತಾರೆ. ಚಹಾ ಬದಲಿಗೆ ತಂಪು ಪಾನೀಯವನ್ನು ಕುಡಿಯುವುದು ಉತ್ತಮ ಎಂದು ಅವರು ಭಾವಿಸುತ್ತಾರೆ. ಆದರೆ ಅಂತಹ ಜನರು ಇನ್ನು ಮುಂದೆ ಚಹಾದಿಂದ ಓಡಿಹೋಗುವ ಅಗತ್ಯವಿಲ್ಲ. ಆದರೆ, ಬೇಸಿಗೆಯಲ್ಲಿ ಸಾಮಾನ್ಯ ಚಹಾ ಬದಲು ಪುದೀನಾ ಚಹಾ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ಬೇಸಿಗೆಯಲ್ಲಿ ಪುದೀನಾ ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನೀವು ಪುದೀನಾ ಚಹಾವನ್ನು ಸಹ ಕುಡಿಯಬಹುದು. ಇದರೊಂದಿಗೆ ಬಳಲಿಕೆಯು ಸಹ ಹೋಗುತ್ತದೆ. ಹಾಗಾದರೆ ಈ ಚಹಾವನ್ನು ಹೇಗೆ ತಯಾರಿಸುವುದು ಮತ್ತು ಅದರ ಪ್ರಯೋಜನಗಳೇನು ಎಂದು ತಿಳಿಯೋಣ. 

ಇದನ್ನೂ ಓದಿ- Vitamin D Deficiency: ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಪುದೀನ ಚಹಾವನ್ನು ಹೇಗೆ ತಯಾರಿಸುವುದು ?
ಮೊದಲು ನೀವು 6-7 ಪುದೀನ ಎಲೆಗಳನ್ನು ತೊಳೆಯಿರಿ. ಇದರ ನಂತರ, ಸ್ಟೋವ್ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರನ್ನು ಬಿಸಿ ಮಾಡಿ. ಅದನ್ನು ಕುದಿಸಿದ ನಂತರ, ಅದಕ್ಕೆ ಈ ಎಲೆಗಳನ್ನು ಸೇರಿಸಿ. ಸ್ವಲ್ಪ ಸಮಯದ ನಂತರ ಗ್ಯಾಸ್ ಅನ್ನು ಆಫ್ ಮಾಡಿ, ಪಾತ್ರೆಯನ್ನು ಸಮಯದವರೆಗೆ ಮುಚ್ಚಿ. ನಂತರ ನೀವು ಅದನ್ನು ಫಿಲ್ಟರ್ ಮಾಡಿ ಕುಡಿಯಬಹುದು.  

ಪುದೀನ ಚಹಾ ಸೇವನೆಯಿಂದಾಗುವ ಪ್ರಯೋಜನಗಳಿವು:
1. ದೇಹ ತಂಪಾಗುತ್ತದೆ :

ಪುದೀನಾ ಚಹಾ ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಪುದೀನ ಎಲೆಗಳು ವಿಟಮಿನ್-ಎ, ವಿಟಮಿನ್-ಸಿ ಮತ್ತು ಬಿ-ಕಾಂಪ್ಲೆಕ್ಸ್, ಫಾಸ್ಫರಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತವೆ, ಜೊತೆಗೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.

ಇದನ್ನೂ ಓದಿ- Moringa Leaves For Diabetes: ಮಧುಮೇಹ, ಹೃದಯ ಕಾಯಿಲೆಗಳಿಂದ ದೂರವಿರಲು ಸಹಕಾರಿ ಈ ಸೊಪ್ಪು

2. ಶಾಖದಿಂದ ಉಂಟಾಗುವ ತಲೆನೋವು ಕೂಡ ದೂರವಾಗುತ್ತದೆ: 
ಬೇಸಿಗೆಯಲ್ಲಿ, ಹೆಚ್ಚಿನ ಜನರು ತಲೆನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈ ಚಹಾವನ್ನು ಸೇವಿಸಿದರೆ, ನೀವು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಅಂದರೆ ಇದರಿಂದ ನಿಮ್ಮ ತಲೆನೋವು ದೂರವಾಗುತ್ತದೆ. ಅದೇ ಸಮಯದಲ್ಲಿ, ಆಯಾಸ ಮತ್ತು ದೌರ್ಬಲ್ಯದಿಂದಲೂ ಪರಿಹಾರ ದೊರೆಯಲಿದೆ.

3. ತೂಕ ಕೂಡ ಕಡಿಮೆಯಾಗುತ್ತದೆ:
ತೂಕವನ್ನು ಕಡಿಮೆ ಮಾಡುವಲ್ಲಿ ತೊಡಗಿರುವವರು ಈ ಚಹಾವನ್ನು ಸಹ ಸೇವಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ಪುದೀನಾದಲ್ಲಿನ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆ. ಆದ್ದರಿಂದ ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News