Dangerous Combination With Honey: ಜೇನುತುಪ್ಪದ ಜೊತೆ ಮರೆತೂ ಕೂಡ ಈ ಆಹಾರಗಳನ್ನು ಸೇವಿಸಲೇಬಾರದಂತೆ
Dangerous Combination With Honey: ಜೇನುತುಪ್ಪದ ಜೊತೆಗೆ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ ಎಂದು ನಿಮಗೆ ತಿಳಿದಿದೆಯೇ?
Dangerous Combination With Honey- ಜೇನುತುಪ್ಪವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜೇನುತುಪ್ಪವನ್ನು ಸಕ್ಕರೆಗೆ ಉತ್ತಮ ಬದಲಿ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲಿ ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ಉಲ್ಲೆಖಿಸಲಾಗಿದೆ. ಜೇನುತುಪ್ಪವು ರುಚಿಯಲ್ಲಿ ಅತ್ಯುತ್ತಮವಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.
ವಿಟಮಿನ್ ಎ, ಬಿ, ಸಿ, ಸೋಡಿಯಂ, ರಂಜಕ, ಅಯೋಡಿನ್, ಕಬ್ಬಿಣ, ಕ್ಯಾಲ್ಸಿಯಂ ಜೇನುತುಪ್ಪದಲ್ಲಿ ಹೇರಳವಾಗಿವೆ. ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ಕೆಲವು ಆಹಾರಗಳೊಂದಿಗೆ ಜೇನುತುಪ್ಪ ಸೇವನೆ ತುಂಬಾ ಹಾನಿಕಾರಕವಾಗಿದೆ. ಹೌದು, ಜೇನುತುಪ್ಪದ ಜೊತೆ ಕೆಲವು ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಜೇನುತುಪ್ಪವನ್ನು ಯಾವ ಆಹಾರಗಳೊಂದಿಗೆ ಸೇವಿಸಬಾರದು ಎಂಬುದನ್ನು ತಪ್ಪದೇ ತಿಳಿಯಿರಿ...
ಇದನ್ನೂ ಓದಿ- ಮೊಡವೆಯಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು..!
ಬೆಚ್ಚಗಿನ ಆಹಾರಗಳೊಂದಿಗೆ ಜೇನುತುಪ್ಪವನ್ನು ಸೇವಿಸಬೇಡಿ- ದೇಹದ ಉಷ್ಣತೆಯನ್ನು ಹೆಚ್ಚಿಸುವ ಆಹಾರಗಳೊಂದಿಗೆ ಜೇನುತುಪ್ಪವನ್ನು (Honey) ಎಂದಿಗೂ ತಿನ್ನಬಾರದು. ಏಕೆಂದರೆ ದೇಹದ ಉಷ್ಣತೆಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳಲ್ಲಿ ಜೇನುತುಪ್ಪವೂ ಒಂದು. ಹಾಗಾಗಿ ಬೆಚ್ಚಗಿನ ಆಹಾರ ಪದಾರ್ಥಗಳೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ಉದರ ಸಂಬಂಧಿತ ಸಮಸ್ಯೆಗಳು ಕಂಡು ಬರಬಹುದು.
ಮೂಲಂಗಿಯೊಂದಿಗೆ ಜೇನುತುಪ್ಪ ಸೇವಿಸಬೇಡಿ- ಜೇನುತುಪ್ಪ ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸಬೇಡಿ. ಈ ಎರಡನ್ನು ಸೇವಿಸುವಾಗ ಕನಿಷ್ಠ ಒಂದರಿಂದ ಎರಡು ಗಂಟೆಗಳ ಅಂತರವನ್ನು ಇರಿಸಿ.
ಇದನ್ನೂ ಓದಿ- Raisin Water With Lemon: ಒಣದ್ರಾಕ್ಷಿ ನೀರನ್ನು ನಿಂಬೆರಸ ಬೆರೆಸಿ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ
ಚಹಾ-ಕಾಫಿಯೊಂದಿಗೆ ಜೇನುತುಪ್ಪ ಸೇವಿಸಬೇಡಿ- ಚಹಾ ಅಥವಾ ಕಾಫಿ (Coffee)ಯೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಇದರ ಜೊತೆಗೆ ಆತಂಕ ಮತ್ತು ಉದ್ವೇಗದಂತಹ ಸಮಸ್ಯೆಗಳೂ ಉಂಟಾಗುವ ಸಾಧ್ಯತೆ ಇದೆ.
ಹಾಲು ಮತ್ತು ಜೇನುತುಪ್ಪ- ಅನೇಕ ಜನರು ಹಾಲಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುತ್ತಾರೆ. ನೀವೂ ಕೂಡ ಹೀಗೆ ಮಾಡುತ್ತಿದ್ದರೆ ಎರಡರ ಪ್ರಮಾಣವೂ ಸಮನಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಹಾಲು-ಜೇನು ಎರಡನ್ನೂ ಮಿಶ್ರಣ ಮಾಡಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕ.
(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.