Home Remedies: ಕೇವಲ ಎರಡೇ ದಿನದಲ್ಲಿ Dark Circle ಹೋಗಲಾಡಿಸಲು ಇದನ್ನು ಟ್ರೈ ಮಾಡಿ
Dark Circle Home Remedies: ಈ ಮನೆಮದ್ದುಗಳನ್ನು ಬಳಸಿ ನೀವು ಕೇವಲ ಎರಡು ದಿನಗಳಲ್ಲಿ ನಿಮ್ಮ ಕಣ್ಣ ಸುತ್ತಲಿನ ಡಾರ್ಕ್ ಸರ್ಕಲ್ ತೆಗೆದುಹಾಕಬಹುದು.
Dark Circle Home Remedies: ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದು ಆಕೆಯ ಕಣ್ಣು. ಆದರೆ ಅತಿಯಾದ ಒತ್ತಡ ಹಾಗೂ ನಿದ್ರಾಹೀನತೆಯ ತೊಂದರೆ ಇದ್ದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪಗಾಗುತ್ತದೆ. ಇದನ್ನು ಡಾರ್ಕ್ ಸರ್ಕಲ್ ಎನ್ನುತ್ತಾರೆ. ಹಲವು ಬಾರಿ ಇದು ಬಹಳ ಕೆಟ್ಟದಾಗಿ ಕಾಣುತ್ತದೆ. ಹಾಗಾಗಿಯೇ ಮಹಿಳೆಯರು ಇದನ್ನು ಹೋಗಲಾಡಿಸಲು ಹಲವು ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಇಂದು ನಾವು ನಿಮಗೆ ಕೆಲವು ಮನೆ ಮದ್ದುಗಳನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಬಳಸಿ ಕೇವಲ ಎರಡೇ ದಿನದಲ್ಲಿ ನೀವು ನಿಮ್ಮ ಕಣ್ಣ ಸುತ್ತಲಿನ ಡಾರ್ಕ್ ಸರ್ಕಲ್ ತೆಗೆದುಹಾಕಬಹುದು.
ಬಾದಾಮಿ ಎಣ್ಣೆ- ಒಂದು ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ. ರಾತ್ರಿಯಲ್ಲಿ ಮಲಗುವ ಮೊದಲು ಅದನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ. ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ಮುಖವನ್ನು ತೊಳೆಯಿರಿ.
ಇದನ್ನೂ ಓದಿ - Weight Loss Trick: ಈ ರೀತಿ ಆಹಾರ ಸೇವಿಸಿದರೆ ತೂಕ ಇಳಿಸಿಕೊಳ್ಳುವುದು ತುಂಬಾ ಸುಲಭ
ಆಪಲ್ ಸೈಡರ್ ವಿನೆಗರ್- ಒಂದು ಚಮಚ ಆಪಲ್ ಸೈಡರ್ ವಿನೆಗರ್ ತೆಗೆದುಕೊಳ್ಳಿ. ಅದರಲ್ಲಿ ಹತ್ತಿಯನ್ನು ಮುಳುಗಿಸಿ ಡಾರ್ಕ್ ವಲಯಗಳಲ್ಲಿ ಹಚ್ಚಿ. ಸ್ವಲ್ಪ ಸಮಯದವರೆಗೆ ಒಣಗಲು ಬಿಡಿ, ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿ ಅನ್ವಯಿಸಿ.
ಸೌತೆಕಾಯಿ - ಮೊದಲಿಗೆ ಸೌತೆಕಾಯಿ (Cucumber) ಸಿಪ್ಪೆಯನ್ನು ತೆಗೆದು ಅದನ್ನು ಕತ್ತರಿಸಿ. ಬಳಿಕ ಅದನ್ನು ತಣ್ಣಗಾಗಲು ಫ್ರಿಜ್ ನಲ್ಲಿಡಿ. ಇದರ ನಂತರ, ಇದನ್ನು 15 ರಿಂದ 20 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಉತ್ತಮ ಫಲಿತಾಂಶಗಳಿಗಾಗಿ, ಇದನ್ನು ದಿನಕ್ಕೆ 2 ಬಾರಿ ಬಳಸಿ.
ಇದನ್ನೂ ಓದಿ - Neem Leaves Benefits:ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ಬೇವಿನ ಎಲೆ ಸೇವಿಸಿ, ಕಾಯಿಲೆಗಳಿಗೆ ಹೇಳಿ ಬೈ, ಬೈ
ಜೇನುತುಪ್ಪ- ಜೇನುತುಪ್ಪವನ್ನು (Honey) ಹತ್ತಿ ಉಣ್ಣೆಯಲ್ಲಿ ನೆನೆಸಿ. ಬಳಿಕ ಅದನ್ನು ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಿರಿ. ನಂತರ ಕೈಗಳಿಂದ ಲಘುವಾಗಿ ಮಸಾಜ್ ಮಾಡಿರಿ. 20 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಟೊಮೆಟೊ ಮತ್ತು ನಿಂಬೆ- ಟೊಮೆಟೊ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಅದರಲ್ಲಿ ಹತ್ತಿಯನ್ನು ಅಡ್ಡಿ ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಮುಖ ತೊಳೆಯಿರಿ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಕಣ್ಣ ಸುತ್ತಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.