ಖರ್ಜೂರ ಪುರುಷರಿಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅವುಗಳನ್ನು ಅತ್ಯುತ್ತಮ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಪುರುಷರ ದುರ್ಬಲತೆಯ ಸಮಸ್ಯೆಯನ್ನು ಖರ್ಜೂರ ಸೇವನೆಯಿಂದ ನಿವಾರಿಸಬಹುದು ಎಂದು ಆಫ್ರಿಕಾದ ಜನರು ಹೇಳುತ್ತಾರೆ. ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಯುತ್ತಿದೆ. ಆದ್ದರಿಂದ ಪುರುಷರ ಖರ್ಜೂರ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ನಾವು ನಿಮಗೆ ತಿಳಿಸುತ್ತವೆ ಈ ಕೆಳೆಯಗೆ ಓದಿ ..


COMMERCIAL BREAK
SCROLL TO CONTINUE READING

ಮೆದುಳಿಗೆ ಪ್ರಯೋಜನಕಾರಿ ಖರ್ಜೂರ : 


ಖರ್ಜೂರ ಸೇವನೆಯು ಮಾನವರ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಖರ್ಜೂರ(Dates Benefits) ಸೇವಿಸುವವರಲ್ಲಿ ಯೋಚಿಸುವ ಸಾಮರ್ಥ್ಯವು ಉತ್ತಮವಾಗಿ ಕಂಡುಬಂದಿದೆ ಮತ್ತು ಅಲ್ಜ್ಹ್ಈಮೇರ್ ಕಾಯಿಲೆಯ  ಅಂತಹ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.


ಇದನ್ನೂ ಓದಿ : Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು


ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ರಾಮ ಬಾಣ ಖರ್ಜೂರ : 


ಹೆಚ್ಚಿನ ಸಂಖ್ಯೆಯ ಆಂಟಿ-ಆಕ್ಸಿಡೆಂಟ್‌ಗಳು ಖರ್ಜೂರದಲ್ಲಿ ಕಂಡುಬರುತ್ತವೆ. ಇದು ಸೋಂಕಿನ ವಿರುದ್ಧ ಹೋರಾಡುವಲ್ಲಿ ನಮ್ಮ ದೇಹವನ್ನು ಬಲಪಡಿಸುತ್ತದೆ. ದೇಹದಲ್ಲಿ ಕಂಡುಬರುವ ಸ್ವತಂತ್ರ ರಾಡಿಕಲ್ಗಳು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತವೆ. ಈ ಆಕ್ಸಿಡೇಟಿವ್ ಒತ್ತಡವು ಕ್ಯಾನ್ಸರ್(Cancer), ಮಧುಮೇಹ, ಹೃದಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಖರ್ಜೂರದಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡದ ಪ್ರಕ್ರಿಯೆಯನ್ನು ತಡೆಯುತ್ತದೆ, ಇದು ದೇಹದಲ್ಲಿ ಕ್ಯಾನ್ಸರ್ ಇತ್ಯಾದಿಗಳನ್ನು ತಡೆಯುತ್ತದೆ.


ಇದನ್ನೂ ಓದಿ : Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ


ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಖರ್ಜೂರ:


ಖರ್ಜೂರ ಬಳಕೆಯಿಂದ ನಮ್ಮ್ ದೇಹ ಚರ್ಮ(Skin Shine)ವು ಹೊಳೆಯುತ್ತದೆ  ಮತ್ತು ಮೃದುವಾಗಿರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅಲ್ಲದೆ, ಖರ್ಜೂರ ಬಳಕೆಯಿಂದ ಯಂಗ್ ಆಗಿ ಕಾಣಲು ತುಂಬಾ ಸಹಾಯಕವಾಗಿದೆ.


ಇದನ್ನೂ ಓದಿ : Tomato Juice : ಕೊರೋನಾದಿಂದ ರಕ್ಷಿಸಲು-ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಟೊಮೆಟೊ ಜ್ಯೂಸ್!


ದೇಹದ ಬೊಜ್ಜು ತಡೆಯುತ್ತದೆ ಖರ್ಜೂರ : 


ಖರ್ಜೂರದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಈ ನಾರಿನ ಅಂಶವು ದೇಹದಲ್ಲಿ ಕಂಡು ಬರುವ ಮಧುಮೇಹ(Diabetes), ಬೊಜ್ಜು ಮತ್ತು ಹೃದಯದ ಸಮಸ್ಯೆಗಳಿಂದ ರಕ್ಷಿಸುತ್ತವೆ. ಇದಲ್ಲದೆ, ಈ ನಾರಿನ ಅಂಶವು ಜೀರ್ಣಕ್ರಿಯೆಯಿಂದ ಉಂಟಾಗುವ ಮಲಬದ್ಧತೆ, ಹುಣ್ಣು ಮತ್ತು ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತವೆ. ಖರ್ಜೂರ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಎ, ವಿಟಮಿನ್ ಬಿ 6, ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಇತ್ಯಾದಿ ಅಂಶಗಳು ಕಂಡುಬರುತ್ತವೆ, ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ.


ಇದನ್ನೂ ಓದಿ : Fact check : ನಿಂಬೆರಸ ಮೂಗಿಗೆ ಹಾಕುವುದರಿಂದ ಕರೋನಾ ವೈರಸ್ ಸಾಯುತ್ತಾ? ಸತ್ಯಾಸತ್ಯತೆ ತಿಳಿಯಿರಿ


ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ : 


ಖರ್ಜೂರ ಬಳಕೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ, ಆದರೆ ಖರ್ಜೂರದಲ್ಲಿ ಹೆಚ್ಚು ಸಕ್ಕರೆ ಇದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಖರ್ಜೂರವನ್ನ ನಿಯಮಿತವಾಗಿ ಸೇವಿಸಿ. ಪ್ರತಿದಿನ 5 ಖರ್ಜೂರಗಳನ್ನ ಮಾತ್ರ ಸೇವಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.