Fact check : ನಿಂಬೆರಸ ಮೂಗಿಗೆ ಹಾಕುವುದರಿಂದ ಕರೋನಾ ವೈರಸ್ ಸಾಯುತ್ತಾ? ಸತ್ಯಾಸತ್ಯತೆ ತಿಳಿಯಿರಿ

ಮೂಗಿಗೆ ಎರಡು ಮೂರು ಹನಿ ಲಿಂಬೆ ರಸ ಬಿಟ್ಟರೆ ಕರೋನಾ ವೈರಸ್  ಖತಂ ಆಗುತ್ತದೆ ಎಂಬುದು ಕೆಲವರ ವಾದವಾಗಿತ್ತು. ಈ  ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ, ಟೀವಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.   

Written by - Ranjitha R K | Last Updated : May 3, 2021, 05:46 PM IST
  • ಕರೋನಾ ಕಾಲದಲ್ಲಿ ಸಿಕ್ಕ ಸಿಕ್ಕ ಮನೆಮದ್ದುಗಳನ್ನು ಬಳಸಲು ಹೋಗಬೇಡಿ
  • ಲಿಂಬೆ ರಸ ಮೂಗಿಗೆ ಬಿಟ್ಟರೆ ಕರೋನಾ ಖತಂ ಆಗುತ್ತೆ ಅನ್ನೋದು ಸತ್ಯವೋ.?ಸುಳ್ಳೋ..?
  • ಇದರ ಬಗ್ಗೆ ಪಿಐಬಿ ಮಾಡಿದ ಸತ್ಯಶೋಧನೆಯಿಂದ ಬಹಿರಂಗವಾದ ಸತ್ಯ ಯಾವುದು.?
Fact check : ನಿಂಬೆರಸ ಮೂಗಿಗೆ ಹಾಕುವುದರಿಂದ ಕರೋನಾ ವೈರಸ್ ಸಾಯುತ್ತಾ? ಸತ್ಯಾಸತ್ಯತೆ ತಿಳಿಯಿರಿ title=
ಲಿಂಬೆ ರಸ ಮೂಗಿಗೆ ಬಿಟ್ಟರೆ ಕರೋನಾ ಖತಂ ಆಗುತ್ತೆ ಅನ್ನೋದು ಸತ್ಯವೋ.?ಸುಳ್ಳೋ..? (file photo)

ನವದೆಹಲಿ : ಕರೋನಾ ಮಹಾಮಾರಿಯಿಂದ ಬಚಾವ್ ಆಗಲು ಲಕ್ಷಾಂತರ ಜನ  ಅನೇಕ ಮನೆ ಮದ್ದುಗಳನ್ನು (Home remedies) ಬಳಸುತ್ತಿದ್ದಾರೆ. ಸಿಕ್ಕ ಸಿಕ್ಕ ಮನೆ ಮದ್ದುಗಳನ್ನು ಬಳಸುತ್ತಿದ್ದಾರೆ. ಇದು ತಪ್ಪು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಅಪಾಯ ಉಂಟಾಗಬಹುದು.  ಅಂಥ ಒಂದು ಉದಾಹರಣೆ ಮೂಗಿಗೆ ನಿಂಬೆ ರಸ (Lemon therapy) ಬಿಡುವ ಮನೆ ಮದ್ದು.

ಬೇರೆ ಬೇರೆ ಕಾರಣಕ್ಕೆ ಕರ್ನಾಟಕದಲ್ಲಿ (Karnataka) ಇದು ಇತ್ತೀಚೆಗೆ ಬಹಳ ಚರ್ಚೆಯಲ್ಲಿತ್ತು.  ಮೂಗಿಗೆ ಎರಡು ಮೂರು ಹನಿ ಲಿಂಬೆ ರಸ (Lemon juice) ಬಿಟ್ಟರೆ ಕರೋನಾ ವೈರಸ್ (Coronavirus) ಖತಂ ಆಗುತ್ತದೆ ಎಂಬುದು ಕೆಲವರ ವಾದವಾಗಿತ್ತು. ಈ  ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ,(Social media)  ಟೀವಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.  ಇದು ಸತ್ಯವೇ..? ಹೀಗೆ ಮಾಡಿದರೆ ಕರೋನಾ ವೈರಸ್ ಸಾಯುತ್ತದೆಯೇ..? ಇದರ ಸತ್ಯ ಶೋಧನೆಯ ದಾರಿಯಲ್ಲಿ ಸಾಗಿದಾಗ ನಮಗೆ ಗೊತ್ತಾಗಿದ್ದು ಇಷ್ಟು..

 

ಇದನ್ನೂ ಓದಿ : Health Tips: ಬೇಸಿಗೆಯಲ್ಲಿ ದೇಸಿ ತುಪ್ಪ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಲಿಂಬೆ ರಸದ ಹಿಂದಿನ ಸತ್ಯ  ಏನು ಗೊತ್ತಾ..?
 ಈ ಲಿಂಬೆ ರಸ ಪ್ರಯೋಗದ ಹಿಂದಿನ ಒಂದು ವೈರಲ್ ವಿಡಿಯೋದ (Viral video) ಸತ್ಯಾಸತ್ಯತೆಯನ್ನು ಪಿಐಬಿ ಚೆಕ್ ಮಾಡಿದೆ. ಈ ವೈರಲ್ ವಿಡಿಯೋದಲ್ಲಿ ಹೇಳಿರುವುದು ಸಂಪೂರ್ಣ ಸುಳ್ಳು  ಎಂದು ಪಿಐಬಿ ಹೇಳಿದೆ. ಲಿಂಬೆ ರಸ ಮೂಗಿನ ಹೊರಳೆಗಳಿಗೆ ಹಾಕಿಕೊಂಡರೆ ಕರೋನಾ (COVID-19) ಖತಂ ಆಗುತ್ತದೆ ಅನ್ನೋದಕ್ಕೆ ಯಾವುದೇ ಪ್ರಮಾಣ ಇಲ್ಲ ಎಂದು ಪಿಐಬಿ ಹೇಳಿದೆ.  ಹಾಗಾಗಿ ಇಂಥ ಖತರ್ನಾಕ್ ಪ್ರಯೋಗಗಳಿಗೆ ಮುಂದಾಗುವ ಮೊದಲು ಯೋಚನೆ ಮಾಡುವುದು ಅತ್ಯಗತ್ಯ. 

ಪಿಐಬಿ ಅಂದರೆ ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ ಇಂಥ ಹಲವು ಮನೆ ಮದ್ದುಗಳ (Home remedies) ಹಿಂದಿನ ಸತ್ಯಾಸತ್ಯತೆಗಳನ್ನು ಈ ಹಿಂದೆ ಜಗಜ್ಜಾಹೀರು ಮಾಡಿದೆ. ಈ ಹಿಂದೆ, ಅಜ್ವಾನ್, ಕರ್ಪೂರ, ಲವಂಗ ಮತ್ತು ನೀಲಗಿರಿ ತೈಲವನ್ನು ಸುತ್ತಿ ಗಂಟು ಮಾಡಿ ಅದನ್ನು ಅಘ್ರಾಣಿಸುತ್ತಿದ್ದರೆ  ದೇಹದಲ್ಲಿ ಆಕ್ಸಿಜನ್ ಲೆವೆಲ್ ಏರಿಕೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸತ್ಯ ಶೋಧನೆ ಮಾಡಿದಾಗ ಅದೊಂದು ಸುಳ್ಳು ಮಾಹಿತಿ ಎಂಬುದು ದೃಢಪಟ್ಟಿತ್ತು. ಹಾಗಾಗಿ, ಕರೋನಾ  ಕಾಲದಲ್ಲಿ ವಿಚಾರವಂತರಾಗಿರಿ. ಯಾರೋ ಏನೋ ಹೇಳಿದರು ಅಂತ ಏನೋ ಮಾಡಲು ಹೋಗಬೇಡಿ.  

ಇದನ್ನೂ ಓದಿ : ಕರೋನಾ ಕಾಲದಲ್ಲಿ ಅಮೃತ ಸಮಾನ ಈ ಅಮೃತ ಬಳ್ಳಿ ಜ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News