ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಲೆಕ್ಕಕಿಂತ ಹೆಚ್ಚು ನಿದ್ದೆ ಬರುವುದು !
Excessive Sleepiness:ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ. ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ.
Excessive Sleepiness : ನಿಮಗೂ ದಿನವಿಡೀ ಮಲಗಿಕೊಂಡೇ ಇರಬೇಕು ಅನ್ನಿಸುತಿದೆಯೇ? ಕುಳಿತಲ್ಲಿಯೇ ನಿದ್ದೆ ಆವರಿಸಿ ಬಿಡುತ್ತದೆಯೇ ? ಹಾಗಿದ್ದರೆ ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು.ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾದರೆ ಪದೇ ಪದೇ ನಿದ್ದೆ ಬರುತ್ತದೆ.ನಮ್ಮ ದೇಹದಲ್ಲಿ ಹಲವಾರು ಜೀವಸತ್ವಗಳಿವೆ. ನಿಮ್ಮ ನಿದ್ರೆಯ ಮೇಲೆ ಇದು ಒಂದಲ್ಲ ಒಂದು ರೀತಿಯಲ್ಲಿ ಇದು ಪರಿಣಾಮ ಬೀರುತ್ತದೆ.ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ. ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ.
ವಿಟಮಿನ್ ಬಿ 12 :
ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ, ವ್ಯಕ್ತಿ ಬಹಳ ನಿದ್ದೆ ಮಾಡಲು ಪ್ರಾರಂಭಿಸುತ್ತಾನೆ. ವಿಟಮಿನ್ ಬಿ 12 ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಈ ಜೀವಕೋಶಗಳು ನಮ್ಮ ದೇಹದಲ್ಲಿ ಆಮ್ಲಜನಕ ಮತ್ತು ಪೋಷಕಾಂಶಗಳ ಉತ್ತಮ ಹರಿವನ್ನು ಒದಗಿಸುತ್ತವೆ.ಅಂತಹ ಪರಿಸ್ಥಿತಿಯಲ್ಲಿ, ವಿಟಮಿನ್ ಬಿ 12 ಕೊರತೆಯಾದರೆ ಅದು ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ತುಂಬಾ ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ.ಬೀನ್ಸ್ ಮತ್ತು ಬಟಾಣಿಗಳಂತಹ ವಸ್ತುಗಳಿಂದ ವಿಟಮಿನ್ ಬಿ 12 ಅನ್ನು ಪೂರೈಸಬಹುದು.
ಇದನ್ನೂ ಓದಿ : ಒಂದು ಲೋಟ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗುತ್ತೆ! ಯಾವ ಔಷಧಿಯೂ ಬೇಕಿಲ್ಲ!
ವಿಟಮಿನ್ ಡಿ :
ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ, ಅತಿಯಾಗಿ ನಿದ್ದೆ ಬರುತ್ತದೆ.ಇದರ ಕೊರತೆಯು ನಿಮ್ಮ ಮೂಳೆಗಳು, ಚರ್ಮ ಮತ್ತು ಕೂದಲಿನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ.ಬದಲಿಗೆ,ಇದು ಆಯಾಸ ಮತ್ತು ಸೋಮಾರಿತನವನ್ನು ಕೂಡಾ ಉಂಟುಮಾಡುತ್ತದೆ. ವಿಟಮಿನ್ ಡಿ ಕೊರತೆ ಹೋಗಲಾಡಿಸಲು ಮೊಟ್ಟೆ, ಮೀನು ಮತ್ತು ಹಾಲನ್ನು ಸೇವಿಸಬಹುದು.
ವಿಟಮಿನ್ ಸಿ :
ದೇಹದಲ್ಲಿ ವಿಟಮಿನ್ ಸಿ ಕೊರತೆಯಿಂದಾಗಿ ಸ್ನಾಯುಗಳ ಪರಿಣಾಮ ಬೀರುತ್ತವೆ. ಇದು ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ.ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತದೆ.ಈ ಕೊರತೆ ನೀಗಿಸಲು ಸಿಟ್ರಸ್ ಹಣ್ಣುಗಳು, ನಿಂಬೆ ಮುಂತಾದ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.
ಐರನ್ ಕೊರತೆ :
ಜೀವಸತ್ವಗಳ ಜೊತೆಗೆ, ಕೆಲವು ಖನಿಜಗಳ ಕೊರತೆ ಎದುರಾದರೂ ಯು ರೋಗಿಗಳಲ್ಲಿ ಅತಿಯಾದ ನಿದ್ರೆಗೆ ಕಾರಣವಾಗಬಹುದು.ದೇಹದಲ್ಲಿ ಐರನ್ ಕೊರತೆ ಎದುರಾದರೆ ಬಹಳಷ್ಟು ಆಯಾಸ, ದೌರ್ಬಲ್ಯ ಮತ್ತು ಸೋಮಾರಿತನ ಕಾಡುತ್ತದೆ. ಐರನ್ ಕೊರತೆ ನೀಗಿಸಲು ಬೀಟ್ರೂಟ್,ದಾಳಿಂಬೆ, ಧಾನ್ಯಗಳನ್ನು ಸೇವಿಸಬೇಕು.
ಇದನ್ನೂ ಓದಿ : ಕೆಮಿಕಲ್ ಹಾಕಿ ಹಣ್ಣಾಗಿಸಿದ ಮಾವನ್ನು ಗುರುತಿಸುವ ಸುಲಭ ಉಪಾಯ ಇದು !
ಮೆಗ್ನೀಸಿಯಮ್ ಕೊರತೆ :
ಅನೇಕ ಬಾರಿ, ಮೆಗ್ನೀಸಿಯಮ್ ಕೊರತೆಯಿಂದಾಗಿ, ರೋಗಿಗಳು ತುಂಬಾ ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ.ದೇಹದಲ್ಲಿ ಈ ಚಿಹ್ನೆ ಕಾಣಿಸುತ್ತಿದ್ದರೆ ಆಹಾರದಲ್ಲಿ ಮೆಗ್ನೀಸಿಯಮ್ ಅನ್ನು ಸೇರಿಸಿ.ಇದಕ್ಕಾಗಿ ಬೀಜಗಳು,ಬಾದಾಮಿ,ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇರಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.