Mouthwash Side Effects : ಪ್ರತಿದಿನ ಮೌತ್‌ವಾಶ್ ಬಳಸ್ತೀರಾ.. ಹಾಗಿದ್ರೆ ನಿಮ್ಗೆ ಅಪಾಯ ಕಟ್ಟಿಟ್ಟ ಬುತ್ತಿ...!
ಅನೇಕ ಜನರು ಬಾಯಿಯ ಆರೈಕೆಗಾಗಿ ಹಲ್ಲುಜ್ಜುವುದರ ಜೊತೆಗೆ ಮೌತ್‌ವಾಶ್ ಅನ್ನು ಬಳಸುತ್ತಾರೆ. ಆದರೆ, ಇಂತಹ ಮೌತ್ ವಾಶ್ ಗಳನ್ನು ಬಳಸುವುದರಿಂದ ಹಲವು ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿದೆ. ಹಾಗಾಗಿ ಇವುಗಳ ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಆದರೆ ಈಗ ನಾವು ಮೌತ್ ವಾಶ್ ಅನ್ನು ಹೇಗೆ ಬಳಸಬೇಕೆಂದು ತಿಳಿಯೋಣ.
Mouthwash Side Effects : ಅನೇಕ ಜನರು ಬಾಯಿಯ ಆರೈಕೆಗಾಗಿ ಹಲ್ಲುಜ್ಜುವುದರ ಜೊತೆಗೆ ಮೌತ್‌ವಾಶ್ ಅನ್ನು ಬಳಸುತ್ತಾರೆ. ಆದರೆ, ಇಂತಹ ಮೌತ್ ವಾಶ್ ಗಳನ್ನು ಬಳಸುವುದರಿಂದ ಹಲವು ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿದೆ. ಹಾಗಾಗಿ ಇವುಗಳ ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಆದರೆ ಈಗ ನಾವು ಮೌತ್ ವಾಶ್ ಅನ್ನು ಹೇಗೆ ಬಳಸಬೇಕೆಂದು ತಿಳಿಯೋಣ.
ಮೌತ್‌ವಾಶ್ ಅಡ್ಡಪರಿಣಾಮಗಳು
ಒಣ ಬಾಯಿ : ಪ್ರತಿದಿನ ಮೌತ್ ವಾಶ್ ಬಳಸಿದರೆ ಬಾಯಿ ಒಣಗುವ ಸಮಸ್ಯೆ ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಮೌತ್ ವಾಶ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಇರುತ್ತದೆ. ಇದರಿಂದ ಬಾಯಿ ಒಣಗುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ
ಕಿರಿಕಿರಿ ಸಮಸ್ಯೆ : ಮೌತ್ ವಾಶ್ ನಿಂದಾಗಿ ಕೆಲವರಿಗೆ ಬಾಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಇದರ ಜೊತೆಗೆ, ಅತಿಯಾದ ಮೌತ್‌ವಾಶ್ ಬಳಕೆಯು ಬಾಯಿಯ ಉರಿಯೂತಕ್ಕೆ ಕಾರಣವಾಗುತ್ತದೆ. ಹಾಗಾಗಿ ಇವುಗಳನ್ನು ಅತಿಯಾಗಿ ಬಳಸಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು.
ಕ್ಯಾನ್ಸರ್ ಅಪಾಯ : ಮೌತ್‌ವಾಶ್ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಹಾಗಾಗಿ ಇವುಗಳ ಅತಿಯಾದ ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಬಹಳಷ್ಟು ಸಂಶ್ಲೇಷಿತ ಅಂಶಗಳನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ಅಪಾಯವನ್ನು ತರುವ ಸಾಧ್ಯತೆಯಿದೆ. ಹಾಗಾಗಿ ಇವುಗಳನ್ನು ಅತಿಯಾಗಿ ಬಳಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹಲ್ಲುಗಳಲ್ಲಿ ಕಲೆ ಸಮಸ್ಯೆ : ಮೌತ್‌ವಾಶ್ ಬಳಸುವ ಅನೇಕ ಜನರು ತಮ್ಮ ಹಲ್ಲುಗಳಿಗೆ ಕಲೆ ಆಗುವ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದರೆ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಲು ಈ ಮೌತ್ ವಾಶ್ ಬಳಸುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.