Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ

Benefits of Cinnamon: ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಒಂದು ವರದಾನಕ್ಕೆ ಸಮಾನ ಎಂದರೆ ತಪ್ಪಾಗಲಾರದು.  

Written by - Nitin Tabib | Last Updated : Oct 28, 2022, 05:26 PM IST
  • ಪ್ರತಿ ಮನೆಯಲ್ಲೂ ದಾಲ್ಚಿನ್ನಿ ಇರುತ್ತದೆ.
  • ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮೆ ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ.
  • ದಾಲ್ಚಿನ್ನಿ ಮಾತ್ರವಲ್ಲ, ದಾಲ್ಚಿನ್ನಿ ನೀರು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ title=
Cinnamon Water Benefits

Benefits of Cinnamon in Diabetes: ಪ್ರತಿ ಮನೆಯಲ್ಲೂ ದಾಲ್ಚಿನ್ನಿ ಇರುತ್ತದೆ. ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮೆ ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ. ದಾಲ್ಚಿನ್ನಿ ಮಾತ್ರವಲ್ಲ, ದಾಲ್ಚಿನ್ನಿ ನೀರು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ನೀರು ಒಂದು ರಾಮಬಾಣ ಔಷಧಿ. ಅಂತಹ ಪರಿಸ್ಥಿತಿಯಲ್ಲಿ, ನೀವು ದಾಲ್ಚಿನ್ನಿಯನ್ನು ಹೇಗೆ ಸೇವಿಸಬೇಕು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಮಧುಮೇಹ ಕಾಯಿಲೆ ಇರುವವರಿಗೆ ದಾಲ್ಚಿನ್ನಿ ನೀರು ಹೇಗೆ ಪ್ರಯೋಜನಕಾರಿ?
ದಾಲ್ಚಿನ್ನಿ ಒಂದು ಸಣ್ಣ ಮಸಾಲೆ ಅಲ್ಲ. ದಾಲ್ಚಿನ್ನಿ ಆರೋಗ್ಯದ ಖಜಾನೆಯಾಗಿದೆ. ಇದು ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಇದರೊಂದಿಗೆ ನೀರು ಮತ್ತು ದಾಲ್ಚಿನ್ನಿ ಸಂಯೋಜನೆಯಿಂದ ತಯಾರಾಗುವ ಪೇಯ ತುಂಬಾ ಒಳ್ಳೆಯ ಪಾನೀಯವಾಗಿದೆ, ಇದು ದೇಹದಲ್ಲಿರುವ ಎಲ್ಲಾ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಇದರ ಪ್ರಯೋಜನಗಳು ಇಲ್ಲಿಗೆ ಮುಗಿಯುವುದಿಲ್ಲ. ದಾಲ್ಚಿನ್ನಿ ನೀರು ದೇಹದಲ್ಲಿ ಬೆಳೆಯುತ್ತಿರುವ ಅನಗತ್ಯ ಕೊಬ್ಬನ್ನು ಸಹ ಸುಡುತ್ತದೆ. ಇದರೊಂದಿಗೆ, ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಆಲ್ಝೈಮರ್ನಂತಹ ಕಾಯಿಲೆಗಳನ್ನು ಸಹ ತೆಗೆದುಹಾಕುತ್ತದೆ.

ದಾಲ್ಚಿನ್ನಿ ಸಕ್ಕರೆಯನ್ನು ಹೇಗೆ ನಿಯಂತ್ರಿಸುತ್ತದೆ?
>> ದಾಲ್ಚಿನ್ನಿಯಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ಗುಣಪಡಿಸುತ್ತದೆ.
>> ಇದರಲ್ಲಿರುವ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
>> ಆಹಾರದಲ್ಲಿ ಇರುವ ಮತ್ತು ರಕ್ತಕ್ಕೆ ಸೇರುವ ಸಕ್ಕರೆಯ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ.
>> ಮಧುಮೇಹಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳನ್ನು ಸಹ ಇದು ಗುಣಪಡಿಸುತ್ತದೆ.

ಇದನ್ನೂ ಓದಿ-Men Health Tips: ಪುರುಷರಲ್ಲಿ ಕ್ಯಾನ್ಸರ್ ನಿವಾರಣೆಯಿಂದ ಹಿಡಿದು ಹಲವು ಶಾರೀರಿಕ ಸಮಸ್ಯೆಗಳಿಗೆ ರಾಮಬಾಣ ಕೇಸರಿ

ದಾಲ್ಚಿನ್ನಿ ನೀರನ್ನು ಹೇಗೆ ತಯಾರಿಸಬೇಕು?
ದಾಲ್ಚಿನ್ನಿ ನೀರನ್ನು ತಯಾರಿಸಲು, ನೀವು ಒಂದು ಪಾತ್ರೆಯಲ್ಲಿ 1 ಲೀಟರ್ ನೀರನ್ನು ಹಾಕಿ ಮತ್ತು ಅದರಲ್ಲಿ 1 ಇಂಚಿನವರೆಗೆ ದಾಲ್ಚಿನ್ನಿ ತುಂಡು ಸೇರಿಸಿ. ಈಗ ರಾತ್ರಿಯಿಡೀ ಹಾಗೆಯೇ ಬಿಡಿ. ನೀವು ಅದರಲ್ಲಿ ಕೆಲವು ನಿಂಬೆ ತುಂಡುಗಳನ್ನು ಸಹ ಹಾಕಬಹುದು. ಮರುದಿನ ನಿಮಗೆ ಬಾಯಾರಿಕೆಯಾದಾಗ ಈ ನೀರನ್ನು ಕುಡಿಯಿರಿ. ಇದರೊಂದಿಗೆ ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ ಸೇವಿಸಬಹುದು. ಇದನ್ನು ಮಾಡಲು, ನೀವು ಕೇವಲ ಎರಡು ಲೋಟ ನೀರು ತೆಗೆದುಕೊಂಡು ಅದನ್ನು ಕುದಿಸಬೇಕು. ನಂತರ ಆ ನೀರಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಅದನ್ನು ಪ್ರತಿದಿನ ಕುಡಿಯಬಹುದು. ಮಧುಮೇಹವಿದ್ದರೆ ಇದರ ಪ್ರಯೋಜನವನ್ನು ನೀವು ಖಂಡಿತವಾಗಿ ಪಡೆಯುವಿರಿ.

ಇದನ್ನೂ ಓದಿ-Belly Fat Reduce Tips: ಒಂದೇ ವಾರದಲ್ಲಿ ಆರೋಗ್ಯಕರವಾಗಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News