ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಾನವನ ಯಾಂತ್ರಿಕ ಜೀವನಶೈಲಿಯಿಂದಾಗಿ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಹಾಗಾಗಿ ಜನರು ತಮ್ಮ ಆರೋಗ್ಯದ ಮೇಲೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಹಾಗಿದ್ದರೆ ನಿಮ್ಮ ಹೃದಯ ಎಷ್ಟು ಆರೋಗ್ಯವಾಗಿದೆ ಎಂದು ತಿಳಿಯುವ ಕಾತುರ ನಿಮಗಿದೆಯೇ? ಹಾಗೆಯೇ ಕಾನ್ಸರ್ ನಂತಹ ಮಾರಕ ರೋಗದ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಈ ಟೆಸ್ಟ್ ಮೂಲಕ ಒಂದೇ ನಿಮಿಷದಲ್ಲಿ ನಿಮ್ಮ ಆರೋಗ್ಯ ಪರಿಶೀಲಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದು, ಹೃದಯಾಘಾತ, ಕ್ಯಾನ್ಸರ್ ಮತ್ತು ಒತ್ತಡದಂತಹ ಆರೊಗುಅ ಸಮಸ್ಯೆಗಳ ಸಾಧ್ಯತೆಯನ್ನು ಕೇವಲ ಒಂದು ವ್ಯಾಯಾಮದ ಮೂಲಕ ತಿಳಿಯುವುದು ಹೇಗೆ ಎಂಬುದನ್ನು ವಿವರಿಸಿದೆ. 


ಈ ಅಧ್ಯಯನದ ಪ್ರಕಾರ, ನೀವು ಎಷ್ಟು ವೇಗವಾಗಿ ಮೆಟ್ಟಿಲುಗಳನ್ನು ಹತ್ತುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿರ್ಧರಿತವಾಗುತ್ತದೆ. ಇದನ್ನು ನೀವು ಟ್ರೆಡ್ ಮಿಲ್ ಮೇಲೆ ಓಡುವ ಮೂಲಕವೂ ಪರೀಕ್ಷಿಸಿಕೊಳ್ಳಬಹುದು. ಒಂದು ನಿಮಿಷದಲ್ಲಿ ನೀವು ನಾಲ್ಕು ಅಂತಸ್ತಿನ ಕಟ್ಟಡದ ಮೆಟ್ಟಿಲುಗಳನ್ನು ಹತ್ತುತ್ತೀರಿ ಎಂದಾದರೆ ಅದು ನಿಮ್ಮ ಹೃದಯದ ಆರೋಗ್ಯವನ್ನು ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ಇನ್ಯಾವುದೋ ಖಾಯಿಲೆಗಳಿಂದ ನೀವು ಬೇಗ ಸಾವನ್ನಪ್ಪುವ ಸಾಧ್ಯತೆಯ ಬಗ್ಗೆಯೂ ಇದು ತಿಳಿಸುತ್ತದೆ. 


ನಿಗದಿತ ಸಮಯದಲ್ಲಿ ನೀವು ಮಹಡಿ ಮೆಟ್ಟಿಲುಗಳನ್ನು ಹತ್ತಿದ್ದೇ ಆದಲ್ಲಿ ನಿಮ್ಮ ಆರೋಗ್ಯ ಫಿಟ್ ಅಂಡ್ ಫೈನ್ ಆಗಿದೆ ಎಂದರ್ಥ. ಒಂದು ವೇಳೆ ನಿಮ್ಮಿಂದ ಅದು ಆಗದಿದ್ದಲ್ಲಿ, ನಿಮ್ಮ ಆರೋಗ್ಯದ ಮೇಲೆ ನೀವು ಕಾಳಜಿ ವಹಿಸುವುದು ಅಗತ್ಯ. ಹಾಗೆಯೇ ದೇಹದ ತೂಕ ಇಳಿಸಲು ರಕ್ತದೊತ್ತಡ ಸಹ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನಿತ್ಯ ವ್ಯಾಯಾಮ ಮಾಡಿ, ದೇಹದ ತೂಕ ಕಡಿಮೆ ಮಾಡಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ. ಇದರಿಂದ ಕ್ಯಾನ್ಸರ್ ಸಾಧ್ಯತೆಯೂ ಕಡಿಮೆಯಾಗುತ್ತದೆ.