Sweet Dishes For Diabetic Patient : ಮಧುಮೇಹ  ರೋಗಿಗಳು ಸಿಹಿ ತಿಂಡಿಯನ್ನು ತಿನ್ನುವಂತಿಲ್ಲ.  ಸಿಹಿತಿಂಡಿಗಳು ಮಧುಮೇಹ ರೋಗಿಗಳಿಗೆ ವಿಷದಂತೆ ಕೆಲಸ ಮಾಡುತ್ತದೆ.   ಏಕೆಂದರೆ ಮಧುಮೇಹಿಗಳು ರಕ್ತದ ಸಕ್ಕರೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಆದರೆ ಸಿಹಿ ತಿಂಡಿಗಳ ಸೇವನೆಯಿಂದ ರಕ್ತದ ಸಕ್ಕರೆ ಹೆಚ್ಚಾಗುವ ಭಯವಿರುತ್ತದೆ. ರಕ್ತದ ಸಕ್ಕರೆ ಹೆಚ್ಚಾದರೆ ಆರೋಗ್ಯವನ್ನು ಹದಗೆಡಿಸುತ್ತದೆ. ಯಾರ ದೇಹದಲ್ಲಿ ರಕ್ತದ ಸಕ್ಕರೆ ಅಧಿಕವಾಗಿರುತ್ತದೆಯೋ ಅಂಥಹ ರೋಗಿಗಳನ್ನು ಶುಗರ್ ಪೇಷೆಂಟ್ ಎಂದೂ ಕರೆಯುವುದು ಇದೇ ಕಾರಣಕ್ಕೆ. 


COMMERCIAL BREAK
SCROLL TO CONTINUE READING

ಮಧುಮೇಹಿಗಳಿಗೆ ಸಿಹಿ ತಿನಿಸು ತಿನ್ನುವ ಹಂಬಲ ಕೂಡಾ ಹೆಚ್ಚು. ಹಂಬಲ, ಬಯಕೆ ಎಷ್ಟೇ ಇದ್ದರೂ ಇವರು ಸಿಹಿ ತಿನಿಸು ತಿನ್ನುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬಹಳಷ್ಟು ಸಾರಿ ಮಧುಮೇಹಿಗಳು ತಮ್ಮ ಇಚ್ಚೆಯನ್ನು ಅದುಮಿಟ್ಟು ಕೊಳ್ಳಬೇಕಾಗುತ್ತದೆ. ಆದರೆ, ಮಧುಮೇಹ ರೋಗಿಗಳ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸದ ಕೆಲವು ಆಹಾರ ಮತ್ತು ಪಾನೀಯಗಳ ಪಾಕವಿಧಾನಗಳಿವೆ. ಇವುಗಳನ್ನು ಸೇವಿಸಿದರೆ ಡಯಾಬಿಟೀಸ್ ರೋಗಿಗಳ ರಕತದಲ್ಲಿನ ಸಕ್ಕರೆಯಲ್ಲಿ ಏರು ಪೇರಾಗುವುದಿಲ್ಲ.   


ಇದನ್ನೂ ಓದಿ : Health Care Tips: ಮಧುಮೇಹಿಗಳಿಗೆ ಇಲ್ಲಿವೆ ಕೆಲ ಸೂಪರ್ ಡ್ರಿಂಕ್ ಗಳು


ಮಧುಮೇಹಿಗಳು ಈ ಸಿಹಿ ತಿನಿಸುಗಳನ್ನು ತಿನ್ನಬಹುದು
1.  ಗ್ರೀನ್ ಕರ್ಡ್  (Green Curd ) : 
ಗ್ರೀನ್ ಕರ್ಡ್ ಮಧುಮೇಹಿಗಳಿಗೆ  ಸಿಹಿತಿಂಡಿಗಳಿಗೆ ಉತ್ತಮ ಪರ್ಯಾಯವಾಗಿದೆ. ಸಿಹಿ ತಿನ್ನಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ, ಈ ಮೊಸರಿನಲ್ಲಿ ಬೆರಿ ಹಣ್ಣು, ಸೇಬು ಹಣ್ಣು,  ಒಣ ಹಣ್ಣುಗಳು ಸೇರಿದಂತೆ ಕೆಲವು ಹಣ್ಣುಗಳನ್ನು ಬೆರೆಸಿ ಸೇವಿಸಬಹುದು. ಹೀಗೆ  ಗ್ರೀನ್ ಕರ್ಡ್ ಜೊತೆಗೆ ಹಣ್ಣುಗಳನ್ನು ಬೆರೆಸಿ ತಿನ್ನುವುದರಿಂದ  ನಿಮ್ಮ ಸಿಒಹಿ ತಿನ್ನುವ ಬಯಕೆ ಈಡೇರುವುದಲ್ಲದೆ ರಕ್ತದ ಸಕ್ಕರೆಯ ಮಟ್ಟ  ಹೆಚ್ಚಾಗುವುದೂ ಇಲ್ಲ. 


2. ಓಟ್ ಮೀಲ್ :
ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ಉಪಾಹಾರದಲ್ಲಿ ಓಟ್ ಮೀಲ್ ಅನ್ನು ತಿನ್ನಲು ಶಿಫಾರಸು ಮಾಡಲಾಗುತ್ತದೆ. ಆದರೆ ಇದು ಸಿಹಿ ಖಾದ್ಯವಲ್ಲ.  ಆದರೆ ಓಟ್ಸ್ ನಲ್ಲಿ ಸ್ವಲ್ಪ ಸಿಹಿಯನ್ನು ತರಲು, ದಾಲ್ಚಿನ್ನಿ, ತೆಂಗಿನಕಾಯಿ ಪುಡಿ ಮತ್ತು ಹಿಸುಕಿದ ಬಾಳೆಹಣ್ಣು ಬೆರೆಸಬಹುದು. ಇದರಿಂದ ಓಟ್ಸ್ ಗೆ ಸಿಹಿ ರುಚಿ ಬರುತ್ತದೆ. ಇದನ್ನೂ ಮಧುಮೇಹ ರೋಗಿಗಳು ಆರಾಮಾಗಿ ಸೇವಿಸಬಹುದು. 


ಇದನ್ನೂ ಓದಿ : ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ..


3. ಡಾರ್ಕ್ ಚಾಕೊಲೇಟ್:
ಚಾಕೊಲೇಟ್ ರುಚಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ, ಮಕ್ಕಲಿನದ ಮುದುಕರವರೆಗೆ ಚಾಕಲೇಟ್ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಮಧುಮೇಹ ರೋಗಿಗಳು ಚಾಕಲೇಟ್ ನಿಂದ ದೂರ ಉಳಿಯಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಚಾಕಲೇಟ್ ನಲ್ಲಿರುವ ಸಕ್ಕರೆ ಅಂಶದಿಂದಾಗಿ ಆರೋಗ್ಯ ಮತ್ತಷ್ಟು ಹದಗೆಡುವ ಅಪಾಯವಿರುತ್ತದೆ.  ಆದರೆ ಮಧುಮೇಹ ರೋಗಿಗಳು ಸಕ್ಕರೆ ಮುಕ್ತ ಡಾರ್ಕ್ ಚಾಕೊಲೇಟ್ ಅನ್ನು ತಿನ್ನಬಹುದು. ಇದರಲ್ಲಿ ಮೆಗ್ನೀಸಿಯಮ್, ಸತು, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್ ಗಳಿರುತ್ತವೆ. ಹಾಗಾಗಿ ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಲ್ಲವು. 


4. ಚಿಯಾ  ಸೀಡ್ಸ್ ಪುಡಿಂಗ್  :
ಚಿಯಾ ಬೀಜಗಳನ್ನು ಸಾಮಾನ್ಯವಾಗಿ ತರಕಾರಿ ಬೀಜಗಳು ಎಂದು ಕರೆಯಲಾಗುತ್ತದೆ. ಅವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಈ ಬೀಜಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಮಧುಮೇಹ ರೋಗಿಗಳು ಚಿಯಾ ಬೀಜಗಳ ಸಹಾಯದಿಂದ ಸಕ್ಕರೆ ಮುಕ್ತ ಪುಡಿಂಗ್ ಅನ್ನು ತಯಾರಿಸಬಹುದು ಮತ್ತು ತಿನ್ನಬಹುದು.


ಇದನ್ನೂ ಓದಿ : Breast Cancer: ಸ್ತನ ಕ್ಯಾನ್ಸರ್‌ ಲಕ್ಷಣ ತಿಳಿದಿಯೇ...! ಹಾಗಿದ್ದರೇ ಈ ಸುದ್ದಿ ಓದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.