ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ..

Men's health tips : ಕಳಪೆ ಆಹಾರ ಪದ್ದತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿ ದೌರ್ಬಲ್ಯ ಮತ್ತು ಆಯಾಸವನ್ನು ಎದುರಿಸಬೇಕಾಗುತ್ತಿದೆ. ಆ ಸಂದರ್ಭದಲ್ಲಿ, ಪುರುಷರು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಆದ್ದರಿಂದ ಪುರುಷರ ಉತ್ತಮ ಆರೋಗ್ಯಕ್ಕೆ ಯಾವ ಆಹಾರಗಳು ಅತ್ಯಗತ್ಯ ಎಂದು ನಾವು ನಿಮಗೆ ತಿಳಿಸುತ್ತೇವೆ.. ಬನ್ನಿ

Written by - Krishna N K | Last Updated : May 7, 2023, 08:57 PM IST
  • ಉತ್ತಮ ಆಹಾರ ಪದ್ದತಿಯಿಂದ ಹೇಗೆ ಸದೃಡ ದೇಹ ಪಡೆಯಬಹುದು
  • ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ.
  • ಸಧೃಡ ಆರೋಗ್ಯಕ್ಕೆ ಈ ಕೆಳಗೆ ನೀಡಲಾದ ಆಹಾರ ಸೇವಿಸಿ.
ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ.. title=

Men's health : ಒತ್ತಡ, ಬಿಡುವಿಲ್ಲದ ಕೆಲಸಗಳ ನಡುವೆ ಕಳೆಪೆ ಆಹಾರ ಪದ್ದತಿಯಿಂದಾಗಿ ಪುರುಷರು ಚಿಕ್ಕವಯಸ್ಸಿಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಏಕೆಂದರೆ, ನಮ್ಮ ಸಮಾಜದಲ್ಲಿ ಪುರುಷರು ಅನೇಕ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಒತ್ತಡದ ಜೀವನ ಎದುರಿಸಬೇಕಾಗುತ್ತದೆ. ಇದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅನೇಕ ಕಾಯಿಲೆಗಗಳಿಗೆ ಗುರಿಯಾಗುತ್ತಿದ್ದಾರೆ.. ಇದೀಗ ಉತ್ತಮ ಆಹಾರ ಪದ್ದತಿಯಿಂದ ಹೇಗೆ ಸದೃಡ ದೇಹ ಪಡೆಯಬಹುದು ಅಂತ ಹೇಳುತ್ತೇವೆ.. ಕೇಳಿ..

ಹಾಲಿನ ಉತ್ಪನ್ನ : ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿರುತ್ತವೆ. ಅದಕ್ಕಾಗಿಯೇ ಹಾಲಿನ ಉತ್ಪನ್ನಗಳನ್ನು ದಿನನಿತ್ಯ ಸೇವಿಸುವ ಆಹಾರದ ಒಂದು ಭಾಗವಾಗಿ ಸ್ಥಾನಮಾನವನ್ನು ನೀಡಲಾಗಿದೆ. ಹಾಲು ಮತ್ತು ಅದರ ಉತ್ಪನ್ನಗಳು ಪುರುಷರ ದೇಹವನ್ನು ಬಲಪಡಿಸುತ್ತವೆ. ಅಲ್ಲದೆ, ಮೊಸರು, ಹೊಟ್ಟೆ ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. 

ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್‌ ಲಕ್ಷಣ ತಿಳಿದಿಯೇ...! ಹಾಗಿದ್ದರೇ ಈ ಸುದ್ದಿ ಓದಿ

ಕೊಬ್ಬಿನ ಮೀನು : ಇತ್ತೀಚಿನ ದಿನಗಳಲ್ಲಿ ಅನೇಕ ಪುರುಷರು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ನೀವು ಎಣ್ಣೆಯುಕ್ತ ಮೀನುಗಳನ್ನು ನಿಮ್ಮ ನಿಯಮಿತ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಒಣ ಹಣ್ಣುಗಳು: ಒಣ ಹಣ್ಣುಗಳು ಆರೋಗ್ಯಕರ ಪ್ರೋಟೀನ್, ಫೈಬರ್ ಹೊಂದಿರುತ್ತವೆ, ಇವು ದೇಹವನ್ನು ಬಲಪಡಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿ, ವಾಲ್‌ನಟ್ಸ್, ಪಿಸ್ತಾ ಮತ್ತು ಗೋಡಂಬಿಯಂತಹ ಡ್ರೈ ಪ್ರೂಟ್ಸ್‌ ತಿನ್ನುವುದು ಉತ್ತಮ.

ಇದನ್ನೂ ಓದಿ: Study: ಅಧಿಕ ಸೆಕ್ಸ್ ಡ್ರೈವ್ ಹೊಂದಿರುವ ಪುರುಷರು ಹೆಚ್ಚು ಕಾಲ ಬದುಕುತ್ತಾರಂತೆ...ಅಧ್ಯಯನದಲ್ಲಿ ಅಂಶ ಬಹಿರಂಗ!

ಮೊಟ್ಟೆಗಳು : ಮೊಟ್ಟೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಅದಕ್ಕಾಗಿಯೇ ಹೆಚ್ಚಿನ ಆಹಾರ ತಜ್ಞರು ಬೆಳಗಿನ ಉಪಾಹಾರಕ್ಕಾಗಿ ಅವುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಈ ಸೂಪರ್‌ಫುಡ್‌ನಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಲುಟೀನ್ ಇರುತ್ತದೆ. ಇದು ಪುರುಷರ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಹಣ್ಣುಗಳು ಮತ್ತು ತರಕಾರಿಗಳು : ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕರ ಆಹಾರ ಪದಾರ್ಥಗಳ ವರ್ಗದಲ್ಲಿ ಬಹು ಮುಖ್ಯವಾದವು. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಅಲ್ಲದೆ, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್‌ನ್ನು ತೆಗೆದುಹಾಕುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News