Spice To Control Diabetes In Few Minutes : ಧಾವಂತದ ಇಂದಿನ ಬದುಕಿನಲ್ಲಿ ತಪ್ಪು ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯಿಂದ, ಮಧುಮೇಹ ರೋಗಿಗಳ ಸಂಖ್ಯೆ ಕೂಡ ವೇಗವಾಗಿ ಹೆಚ್ಚಾಗುತ್ತಿದೆ. ಇದು ದೇಹವನ್ನು ಒಳಗಿನಿಂದ ವೀಕ್ ಮಾಡುವ ಒಂದು ಕಾಯಿಲೆಯಾಗಿದೆ. ಮಧುಮೇಹದ (Diabetes) ವಿಷಯದಲ್ಲಿ, ಮೇದೋಜ್ಜೀರಕ ಗ್ರಂಥಿ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ, ಇದರಿಂದಾಗಿ ರೋಗಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಒಮ್ಮೆ ಮಧುಮೇಹ ಅದನ್ನು ನೀವು ಬುಡಸಮೇತ ಕಿತ್ತೋಗೆಯಲು ಸಾಧ್ಯವಿಲ್ಲ. ಔಷಧಿಗಳು ಮತ್ತು ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಇದನ್ನು ನಿರ್ವಹಿಸಬಹುದು. ಇದಲ್ಲದೆ, ಕೆಲವು ಮನೆಮದ್ದುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ (Blood Sugar Level) ಮಟ್ಟವನ್ನು ಸಹ ನೀವು ನಿಯಂತ್ರಿಸಬಹುದು. ಅಡುಗೆಮನೆಯಲ್ಲಿರುವ ಕೆಲವು ಸಾಂಭಾರ ಪದಾರ್ಥಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುತ್ತವೆ (Chakra Moggu For Diabetes). ಈ ಸಾಂಭಾರ ಪದಾರ್ಥಗಳಲ್ಲಿ ಚಕ್ರಮಗ್ಗಿ ಕೂಡ ಒಂದು  ಹೌದು, ಇದು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ, ಮಧುಮೇಹದಲ್ಲಿ ಚಕ್ರಮಗ್ಗಿ ಸೇವನೆ, ಪ್ರಯೋಜನ ಮತ್ತು ಸೇವಿಸುವ ವಿಧಾನ ತಿಳಿದುಕೊಳ್ಳೋಣ ಬನ್ನಿ, (Health News In Kannada)


COMMERCIAL BREAK
SCROLL TO CONTINUE READING

ಮಧುಮೇಹ ಇರುವವರಿಗೆ ಚಕ್ರಮಗ್ಗಿ ಹೇಗೆ ಪ್ರಯೋಜನಕಾರಿಯಾಗಿದೆ? (Star Anise Health Benefits)
ಸಾಮಾನ್ಯವಾಗಿ ಭಾರತೀಯ ಆಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸಾಂಭಾರ ಪದಾರ್ಥಗಳಲ್ಲಿ ಚಕ್ರಮಗ್ಗಿ ಕೂಡ ಒಂದು ಮತ್ತು ಇದನ್ನು ಗರಂ ಮಸಾಲಾ ತಯಾರಿಸಲು ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ಆ್ಯಂಟಿ ಫಂಗಲ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಅನೆಥೋಲ್ ಎಂಬ ಸಂಯುಕ್ತವು ಇದರಲ್ಲಿ ಕಂಡುಬರುತ್ತದೆ, ಇದು ಸಕ್ಕರೆಯ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದಲ್ಲದೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ (Insulin Secretion) ಹೆಚ್ಚುತ್ತದೆ. ಇದು ಸಕ್ಕರೆಯ ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದರ ನಿಯಮಿತ ಸೇವನೆಯು ಮಧುಮೇಹದ ಸಂಕೇತಗಳನ್ನು ಸಾಕಷ್ಟು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ-Marriage Tips: ವಿವಾಹಕ್ಕೆ ಸಿದ್ಧರಾಗಿದ್ದೀರಾ? ಹಾಗಾದರೆ ಭಾವೀ ಸಂಗಾತಿಗೆ ಚಾಚು ತಪ್ಪದೆ ಈ ವಿಷಯಗಳನ್ನು ಕೇಳಿ!


ಮಧುಮೇಹ ಇರುವವರು ಚಕ್ರಮಗ್ಗಿಯನ್ನು ಹೇಗೆ ಸೇವಿಸಬೇಕು (Star Anise For Diabetes Control)
ಮಧುಮೇಹವನ್ನು ನಿಯಂತ್ರಿಸಲು, ನೀವು ಚಕ್ರಮಗ್ಗಿಯ (Chakra Phool For Diabetes) ನೀರನ್ನು ಸೇವಿಸಬಹುದು. ಇದಕ್ಕಾಗಿ ಬಾಣಲೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ. ಅದಕ್ಕೆ ಚಕ್ರಮಗ್ಗಿಯನ್ನು ಹಾಕಿ ಕುದಿಸಿ. ನಂತರ ಈ ನೀರನ್ನು ಸೋಸಿ ಮತ್ತು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. 


ಇದನ್ನೂ ಓದಿ-Bathing Tips: ಈ ಮೂರು ಕೆಲಸ ಮಾಡಿದ ಬಳಿಕ ಸ್ನಾನ ಮಾಡಬೇಡಿ, ಇಲ್ದಿದ್ರೆ ಶರೀರ...!
.
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ