Pre Marriage Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ (Would-Be) ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Marriage Tips For Would-Be : ಸಾಮಾನ್ಯವಾಗಿ ನಮ್ಮ ಭಾರತದಂತಹ ದೇಶದಲ್ಲಿ ವಿವಾಹವನ್ನು (Marriage) ಒಂದು ಪವಿತ್ರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಅದು ಚಿರಕಾಲ ಉಳಿಯಬೇಕಾದ ಸಂಬಂಧ, ತರಾತುರಿಯಲ್ಲಿ ಮದುವೆಯಾಗುವುದು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಯೆಸ್ ಎಂದು ಹೇಳುವುದು ಸರಿಯಲ್ಲ. ಮತ್ತೊಂದೆಡೆ, ಮದುವೆ, ಅದು ಪ್ರೇಮ ವಿವಾಹವಾಗಿರಲಿ (Love Marriage) ಅಥವಾ ಅರೆಂಜ್ ಮ್ಯಾರೇಜ್ (Arrenge Marriage) ಆಗಿರಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು (Things To Ask Your Would-Be Before Marriage) ಮತ್ತು ಮುಂಚಿತವಾಗಿ ಎಲ್ಲವನ್ನೂ ಚರ್ಚಿಸಬೇಕು. ಮದುವೆಗೆ ಮುನ್ನ ನೀವು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಯಾವ ವಿಷಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
ಇದನ್ನೂ ಓದಿ-Astro Tips: ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವೃತ್ತಿ ಮತ್ತು ಹಣದ ಬಗ್ಗೆ ಚರ್ಚಿಸಿ: ನೀವು ಮದುವೆಯಾಗಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಹಣಕಾಸಿನ ವಿಷಯಗಳ ಬಗ್ಗೆ ಮಾತನಾಡಿ. ಇದಲ್ಲದೆ, ವೃತ್ತಿಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.
ಕುಟುಂಬ ಯೋಜನೆ ಕುರಿತು ಚರ್ಚಿಸಿ: ವಿವಾಹದ ಮೊದಲು ನಿಮ್ಮ ಸಂಗಾತಿಯೊಂದಿಗೆ ಕುಟುಂಬ ಯೋಜನೆಯ ಕುರಿತು ಚರ್ಚಿಸುವುದು ತುಂಬಾ ಮುಖ್ಯ ಮತ್ತು ಇದು ನಾಚಿಕೆಪಟ್ಟುಕೊಳ್ಳುವ ವಿಷಯ ಅಲ್ಲ. ಎಷ್ಟು ಮಕ್ಕಳು ಬೇಕು, ಅವರನ್ನು ಹೇಗೆ ಬೆಳೆಸಬೇಕು, ಮಕ್ಕಳ ನಡುವೆ ಎಷ್ಟು ಅಂತರವಿರಬೇಕು ಇತ್ಯಾದಿಗಳನ್ನು ಚರ್ಚಿಸುವುದು ಯಾವುದಕ್ಕೂ ಉತ್ತಮ.
ಸ್ವಭಾವ-ಪ್ರಕೃತಿಯ ಬಗ್ಗೆ ಚರ್ಚಿಸಿ: ಮದುವೆಗೆ ಮೊದಲು ಪರಸ್ಪರರ ಪ್ರಕೃತಿ ಮತ್ತು ಸ್ವಭಾವದ ಬಗ್ಗೆ ಚರ್ಚೆ ನಡೆಯಬೇಕು. ಏಕೆಂದರೆ ಮದುವೆಯ ನಂತರ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಸಂಗಾತಿಯ ಅಭ್ಯಾಸಗಳನ್ನು ನೀವು ತಿಳಿದಿದ್ದರೆ, ನಂತರ ಸಂಬಂಧವು ಉತ್ತಮವಾಗಿರುತ್ತದೆ.
ಕೆಲಸ ಮತ್ತು ಸಮಯದ ಬಗ್ಗೆ ಚರ್ಚಿಸಿ: ಮದುವೆಯ ನಂತರ ಉದ್ಯೋಗ ಮತ್ತು ಸಮಯದ ಸಮಸ್ಯೆ ಬಂದಾಗಲೆಲ್ಲಾ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಭಾವಿ ಸಂಗಾತಿಯ ಕೆಲಸ, ಶಿಫ್ಟ್ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಚರ್ಚಿಸಿಕೊಳ್ಳುವುದು ಯಾವುದಕ್ಕೂ ಉತ್ತಮ.
ಕೆಲಸ ಮತ್ತು ಸಮಯದ ಬಗ್ಗೆ ಚರ್ಚಿಸಿ: ಮದುವೆಯ ನಂತರ ಉದ್ಯೋಗ ಮತ್ತು ಸಮಯದ ಸಮಸ್ಯೆ ಬಂದಾಗಲೆಲ್ಲಾ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಭಾವಿ ಸಂಗಾತಿಯ ಕೆಲಸ, ಶಿಫ್ಟ್ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಚರ್ಚಿಸಿಕೊಳ್ಳುವುದು ಯಾವುದಕ್ಕೂ ಉತ್ತಮ.