ಮಧುಮೇಹಿಗಳು ಸೋಂಪನ್ನು ಈ ರೀತಿ ಸೇವಿಸಿದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ಮಧುಮೇಹದ ಸಮಸ್ಯೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣ ತಪ್ಪಿದರೆ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ, ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.
ನವದೆಹಲಿ : ಮಧುಮೇಹ (Diabetes) ಎನ್ನುವುದು ಈಗಿನ ಕಾಲ ಸಾಮಾನ್ಯ ಸಮಸ್ಯೆಯಾಗಿದೆ. ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ಒತ್ತಡ ಮತ್ತು ಇತರ ಹಲವು ಕಾರಣಗಳಿಂದ ಮಧುಮೇಹ ಉಂಟಾಗಬಹುದು. ಮಧುಮೇಹದ ಸಮಸ್ಯೆಯಲ್ಲಿ ರಕ್ತದಲ್ಲಿನ ಸಕ್ಕರೆಯ (Blood Sugar level) ಪ್ರಮಾಣ ನಿಯಂತ್ರಣ ತಪ್ಪಿದರೆ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ, ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಇದು ಕಿಡ್ನಿ ಸಂಬಂಧಿ ಸಮಸ್ಯೆಗಳನ್ನು (Kidney problems) ಉಂಟುಮಾಡುತ್ತದೆ ಮತ್ತು ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ, ಆಹಾರ ಮತ್ತು ಜೀವನಶೈಲಿಯಲ್ಲಿ (lifestyle) ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದಲ್ಲದೆ, ಕೆಲವು ಮನೆಮದ್ದುಗಳು ಕೂಡಾ ಈ ಸಮಸ್ಯೆಯಿಂದ ಹೊರ ಬರಲು ಸಹಾಯ ಮಾಡುತ್ತದೆ. ಸೋಂಪನ್ನು (Fennel benefits) ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : ಪಪ್ಪಾಯಿಯ ಪ್ರಯೋಜನ ತಿಳಿದೇ ಇದೆ.. ಆದರೆ ಅದರಿಂದಾಗುವ ಅನಾರೋಗ್ಯದ ಅರಿವಿದೆಯೇ?
ಮಧುಮೇಹ ರೋಗಿಗಳಿಗೆ ಸೋಂಪಿನ ಪ್ರಯೋಜನಗಳು :
ಸೋಂಪು ಫೈಬರ್, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣದಂತಹ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ, ಇದನ್ನು ಫೈಟೊಕೆಮಿಕಲ್ಸ್ ಎಂದು ಕರೆಯಲಾಗುತ್ತದೆ. ಈ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು (Blood sugar level) ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ.
ಸೋಂಪನ್ನು ಈ ರೀತಿ ಸೇವಿಸಿ :
ಸೋಂಪನ್ನು ಅನ್ನು ಹಸಿಯಾಗಿಯೇ ತಿನ್ನಬಹುದು. ಅಥವಾ ಮಸಾಲೆ ರೀತಿಯಲ್ಲಿಯೂ ಸೇವಿಸಬಹುದು. ಸೋಂಪಿನ ಎಣ್ಣೆ ಮತ್ತು ಅದರ ಬೀಜಗಳು ಎರಡೂ ಪ್ರಯೋಜನಕಾರಿಯಾಗಿದೆ (benefits of fennel seed). ಇದನ್ನು ಪಾನೀಯಗಳಲ್ಲಿಯೂ ಬಳಸಬಹುದು.
ಇದನ್ನೂ ಓದಿ : ಕುತ್ತಿಗೆ-ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಈ ಸುಲಭ ಉಪಾಯಗಳ ಮೂಲಕ ಪರಿಹಾರ ಪಡೆಯಿರಿ
ಮಧುಮೇಹ ರೋಗಿಗಳು ಸೋಂಪಿನ ಟೀ (fennel tea) ತಯಾರಿಸಿ ಕುಡಿಯಬಹುದು. ಇದಕ್ಕಾಗಿ, ಬಾಣಲೆಯಲ್ಲಿ 1 ಕಪ್ ನೀರು ಹಾಕಿ. ಅದನ್ನು ಬಿಸಿ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಶುಂಠಿ (ginger) ಸೇರಿಸಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಲು ಬಿಡಿ. ಸ್ವಲ್ಪ ಸಮಯದ ನಂತರ ಗ್ಯಾಸ್ ಅನ್ನು ಆಫ್ ಮಾಡಿ. ಈಗ ಅದನ್ನು ಒಂದು ಕಪ್ನಲ್ಲಿ ಫಿಲ್ಟರ್ ಮಾಡಿ ಮತ್ತು ಕುಡಿಯಿರಿ. ಇದು ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನ ನೀಡಲಿದೆ.
(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.