Health Tips: ಕರಿಮೆಣಸು ಮತ್ತು ತುಪ್ಪದಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ

ಕರಿಮೆಣಸು ಮತ್ತು ತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇವುಗಳಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆಯೂ ಇದೆ. ಇವುಗಳನ್ನು ಬಳಸುವುದರಿಂದ ನಮ್ಮ ದೇಹವು ಬಹಳಷ್ಟು ಪ್ರಯೋಜನ ಪಡೆಯುತ್ತದೆ.

Written by - Puttaraj K Alur | Last Updated : Jan 16, 2022, 06:51 AM IST
  • ಕರಿಮೆಣಸು ಮತ್ತು ತುಪ್ಪದಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ
  • ಕರಿಮೆಣಸು ಮತ್ತು ತುಪ್ಪದ ಮಿಶ್ರಣವು ಮೆದುಳನ್ನು ಚುರುಕುಗೊಳಿಸುತ್ತದೆ
  • ಮಧುಮೇಹ, ಯಕೃತ್ತು, ಹೃದಯಾಘಾತ, ಕ್ಯಾನ್ಸರ್ & ಮೂಳೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ
Health Tips: ಕರಿಮೆಣಸು ಮತ್ತು ತುಪ್ಪದಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ title=
ಕರಿಮೆಣಸು ಮತ್ತು ತುಪ್ಪದ ಆರೋಗ್ಯಕಾರಿ ಪ್ರಯೋಜನಗಳು

ನವದೆಹಲಿ: ನಮ್ಮ ಅಡುಗೆಮನೆಯಲ್ಲಿ ಮನೆಮದ್ದುಗಳ ಭಂಡಾರವೇ ಇದೆ. ಇವುಗಳನ್ನು ಬಳಸುವುದರಿಂದ ಅನೇಕ ರೋಗಗಳಿಂದ ನಾವು ಮುಕ್ತಿ ಪಡೆಯಬಹುದು. ಮನೆಮದ್ದುಗಳ ಬಳಕೆಯಿಂದ ವೈದ್ಯರಿಂದಲೇ ದೂರವಿರಬಹುದು. ಅಡುಗೆ ಮನೆಯಲ್ಲಿ ಸಿಗುವ ಇಂತಹ ಅನೇಕ ವಸ್ತುಗಳ ಪ್ರಯೋಜನಗಳ ಬಗ್ಗೆ ನಮಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಈ ವಸ್ತುಗಳ ಪೈಕಿ ಕರಿಮೆಣಸು ಮತ್ತು ತುಪ್ಪ(Ghee and Balck Pepper Benefits) ಕೂಡ ಇವೆ. ಈ ಎರಡೂ ವಸ್ತುಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇವುಗಳಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆ ಇದೆ. ಹಾಗಾದರೆ ಕರಿಮೆಣಸು ಮತ್ತು ತುಪ್ಪದ ಪ್ರಯೋಜನಗಳೇನು ಎಂದು ತಿಳಿಯಿರಿ.

ಕಪ್ಪು ಮೆಣಸು ಮತ್ತು ತುಪ್ಪದ ಪ್ರಯೋಜನಗಳು

ಮೆದುಳು ಚುರುಕುಗೊಳ್ಳುತ್ತದೆ 

ಕರಿಮೆಣಸು ಮತ್ತು ತುಪ್ಪದ ಮಿಶ್ರಣ(Ghee and Balck Pepper Benefits)ವು ಮೆದುಳನ್ನು ಚುರುಕುಗೊಳಿಸುತ್ತದೆ. ವಾಸ್ತವವಾಗಿ ಕರಿಮೆಣಸು ಮತ್ತು ತುಪ್ಪದಲ್ಲಿರುವ ಅಂಶವು ಕರ್ಕ್ಯುಮಿನ್ ಅನ್ನು ತ್ವರಿತವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೆದುಳಿನ ನರಗಳು ಬಲಗೊಳ್ಳುತ್ತವೆ ಮತ್ತು ಮೆದುಳಿನ ಆಲೋಚನಾ ಶಕ್ತಿ ಮತ್ತು ನೆನಪಿನ ಶಕ್ತಿಯು ಬಲಗೊಳ್ಳುತ್ತದೆ.

ಇದನ್ನೂ ಓದಿ: Benefits of Tomato in Diabetes: ಮಧುಮೇಹದಲ್ಲಿ ಟೊಮೇಟೊ ತಿನ್ನಬೇಕೇ ಅಥವಾ ಬೇಡವೇ? ತಜ್ಞರ ಉತ್ತರ ತಿಳಿಯಿರಿ

DNA ರಕ್ಷಿತವಾಗಿದೆ

ಪ್ರಸ್ತುತ ಮಾಲಿನ್ಯ, ಔಷಧಗಳ ಅತಿಯಾದ ಬಳಕೆ ಮತ್ತು ಆಹಾರದ ಅಡಚಣೆಯಿಂದಾಗಿ ಮಾನವನ ಡಿಎನ್ಎ ಹಾನಿಗೊಳಗಾಗುತ್ತಿದೆ. ಈ ಹಾನಿಯನ್ನು ತಡೆಗಟ್ಟಲು ತುಪ್ಪ ಮತ್ತು ಕರಿಮೆಣಸಿನ(Black Pepper) ಸೇವನೆಯು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ.

ಅನೇಕ ರೋಗಗಳಿಗೆ ರಾಮಬಾಣ

ಕರಿಮೆಣಸು ಮತ್ತು ತುಪ್ಪದ ಸೇವನೆ(Ghee)ಯು ಮಧುಮೇಹ, ಯಕೃತ್ತು, ಮೂತ್ರಪಿಂಡದ ಸಮಸ್ಯೆ, ಹೃದಯಾಘಾತ, ಕ್ಯಾನ್ಸರ್ ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಊತ, ಮೊಣಕಾಲು ನೋವು ಮತ್ತು ಕೀಲು ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ: Moong Sprouts Benefits : ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮೊಳಕೆ ಕಾಳು : ಆರೋಗ್ಯಕ್ಕಿದೆ ಈ 5 ಅದ್ಭುತ ಪ್ರಯೋಜನಗಳು

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News