ಬೆಂಗಳೂರು : ಮಧುಮೇಹವು ದೇಹವು ಇನ್ಸುಲಿನ್ ಹಾರ್ಮೋನ್ ಅನ್ನು ಸರಿಯಾಗಿ ಉತ್ಪಾದಿಸಲು ಅಥವಾ ಬಳಸಲು ಸಾಧ್ಯವಾಗದ ಕಾಯಿಲೆಯಾಗಿದೆ.ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹ ಕಾಣಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಿರುವಾಗ ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಮಧುಮೇಹ ಬಂದಾಗ ಅನ್ನ ಸೇವಿಸಬಾರದು ಚಪಾತಿ ತಿನ್ನಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುವುದನ್ನು ಕೇಳಿರುತ್ತವೆ. ಆದರೆ ನೆನಪಿರಲಿ ಗೋಧಿ ಹಿಟ್ಟನ್ನು ಬಳಸಿ ಮಾಡುವ ಚಪಾತಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿ ಇರುವುದಿಲ್ಲ. ಗೋಧಿ ಹಿಟ್ಟಿಗೆ ಪರ್ಯಾಯವಾಗಿ ಈ ಹಿಟ್ಟುಗಳಿಂದ ಮಾಡುವ ಚಪಾತಿ ರೊಟ್ಟಿಗಳನ್ನು ಸೇವಿಸುವ ಮೂಲಕ ಡಯಾಬಿಟೀಸ್ ರೋಗಿಗಳು ತಮ್ಮ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು.   


ಇದನ್ನೂ ಓದಿ : ಈ ಕಾರಣಗಳಿಂದಲೇ ಹೆಣ್ಣು ಮಕ್ಕಳಿಗೆ Late Period ಕಾಣಿಸಿಕೊಳ್ಳುತ್ತದೆ ! ಸಮಸ್ಯೆಗೆ ಪರಿಹಾರವೂ ಬಹಳ ಸುಲಭ


 ಸಜ್ಜೆ ಹಿಟ್ಟು : 
 ಸಜ್ಜೆ ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಸಜ್ಜೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಲು ಅನುವು ಮಾಡುವುದಿಲ್ಲ. ಮಧುಮೇಹ ರೋಗಿಗಳು ಸಜ್ಜೆ ಹಿಟ್ಟಿನಿಂದ ಮಾಡಿದ ಚಪಾತಿ, ದೋಸೆಯನ್ನು ಯಾವ್ ಅಳುಕೂ ಇಲ್ಲದೆ ಸೇವಿಸಬಹುದು.


ಜೋಳದ ಹಿಟ್ಟು : 
ಜೋಳ ಕೂಡಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಿಟ್ಟು.  ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಫೈಬರ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ.


ರಾಗಿ ಹಿಟ್ಟು :
ರಾಗಿ ಹಿಟ್ಟು ಮಧುಮೇಹ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಾಗಿ ಹಿಟ್ಟಿನಿಂದ ತಯಾರಿಸಿದ ಚಪಾತಿ, ರೊಟ್ಟಿ, ದೋಸೆ ಅಥವಾ ಇಡ್ಲಿ ಮಧುಮೇಹ ರೋಗಿಗಳಿಗೆ ಆರೋಗ್ಯಕರ ಆಯ್ಕೆಯಾಗಿದೆ.


ಇದನ್ನೂ ಓದಿ : Health Tips: ನೀವು ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ..? ತಿಳಿಯಿರಿ


ಸೋಯಾ ಹಿಟ್ಟು : 
ಸೋಯಾ ಹಿಟ್ಟು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದರಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ.  ಜೀರ್ಣಕ್ರಿಯೆಯನ್ನು ಸುಧಾರಿಸಳು ಕೂಡಾ ಇದು ಸಹಾಯ ಮಾಡುತ್ತದೆ. 


ತೆಂಗಿನ ಹಿಟ್ಟು : 
ತೆಂಗಿನ ಹಿಟ್ಟು ಫೈಬರ್‌ನ ಉತ್ತಮ ಮೂಲವಾಗಿದ್ದು, ಕಡಿಮೆ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುತ್ತದೆ.ಇದು ಮಧುಮೇಹ ರೋಗಿಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ತೆಂಗಿನ ಹಿಟ್ಟನ್ನು ರೊಟ್ಟಿ, ಚಪಾತಿ ಅಥವಾ ಪ್ಯಾನ್‌ಕೇಕ್ ಮಾಡಲು ಬಳಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ