ಕರ್ಕಾಟಕ ರಾಶಿ

  • May 17, 2024, 23:11 PM IST
1 /5

ಈ ರಾಜಯೋಗದಿಂದ 3 ರಾಶಿಯ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಇದರಿಂದ ಕೆಲವರು ಶ್ರೀಮಂತರಾಗಬಹುದು. ಈ ವಿಪರೀತ ರಾಜಯೋಗದಿಂದ ಯಾವ ರಾಶಿಯವರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ ಎಂಬುದರ ಬಗ್ಗೆ ತಿಳಿಯಿರಿ.

2 /5

ಈ ಮಂಗಳಕರ ಸಮಯದಲ್ಲಿ ಗುರುದೇವ ಕರ್ಕಾಟಕ ರಾಶಿಯ 11ನೇ ಮನೆಯಲ್ಲಿ ಸಾಗಲಿದ್ದು, ಈ ರಾಶಿಯ ಜನರ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕೆಲವರಿಗೆ ಹೊಸ ಆದಾಯದ ಮೂಲಗಳು ಹುಟ್ಟುವ ಸಾಧ್ಯತೆ ಇದೆ. ಕೆಲಸ ಮಾಡುವ ಜನರು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಮುನ್ನಡೆಯುವ ಅವಕಾಶಗಳೂ ಇರುತ್ತವೆ. ಮುಖ್ಯವಾಗಿ ಗುರುವಿನ ಕೃಪೆಯಿಂದ ನವವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಶ್ರೀಮಂತರಾಗುವ ಸಾಧ್ಯತೆ ಕೂಡ ಇದೆ.

3 /5

ಈ ಸಮಯದಲ್ಲಿ ಗುರು ತುಲಾ ರಾಶಿಯ 8ನೇ ಮನೆಗೆ ತೆರಳಿದ್ದು, ಈ ರಾಶಿಯ ಸ್ಥಳೀಯರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಗುರುವಿನ ಕೃಪೆಯಿಂದ ಉತ್ತಮ ಐಷಾರಾಮಿ ಜೀವನ ನಡೆಸುತ್ತಾರೆ. ದುಡಿಯುವ ಜನರ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ವೃತ್ತಿಪರವಾಗಿ ಅದೃಷ್ಟದ ಬೆಂಬಲವಿರಲಿದೆ. ಇದರಿಂದ ಕೆಲಸದಲ್ಲಿ ಬೆಳವಣಿಗೆ ಮತ್ತು ಲಾಭವನ್ನು ಪಡೆಯುತ್ತಾರೆ.

4 /5

ಗುರುದೇವ ವೃಷಭ ರಾಶಿಯ 6ನೇ ಮನೆಗೆ ತೆರಳಿದ್ದಾನೆ. ಈ ಕಾರಣದಿಂದ ಈ ರಾಶಿಯವರು ಮುಂದಿನ ಒಂದು ವರ್ಷದವರೆಗೆ ಅನಿರೀಕ್ಷಿತ ಹಣವನ್ನು ಪಡೆಯುತ್ತವೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುತ್ತದೆ. ಬೇರೆಡೆ ಸಿಲುಕಿರುವ ಹಣವು ಈ ಸಮಯದಲ್ಲಿ ಬರುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದ್ದು, ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ. ಕೆಲವರಿಗೆ ಹೊಸ ವಾಹನ ಅಥವಾ ಆಸ್ತಿ ಖರೀದಿಗೆ ಅವಕಾಶ ದೊರೆಯಲಿದೆ. 

5 /5

ಒಟ್ಟಾರೆ ಹೇಳಬೇಕೆಂದರೆ ವಿಪರೀತ ರಾಜಯೋಗದಿಂದ ಈ ಮೂರು ರಾಶಿಯವರು ಹಲವಾರು ಲಾಭಗಳನ್ನು ಪಡೆಯಲಿದ್ದಾರೆ. ಅದೃಷ್ಟವು ಈ ರಾಶಿಯವರ ಕೈಹಿಡಿಯಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಂದುಕೊಂಡ ಕೆಲಸಗಳು ಆಗುತ್ತವೆ. ಅದೃಷ್ಟದ ಬೆಂಬಲದಿಂದ ಈ ಮೂರು ರಾಶಿಯವರಿಗೂ ಶ್ರೀಮಂತಿಕೆ ಬರಲಿದೆ.