Walnuts On Empty Stomach: ನಮಗೆಲ್ಲ ಬೆಳಗ್ಗೆ ಕಾಫಿ, ಟೀ ಕುಡಿಯುವ ಅಭ್ಯಾಸವಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳ ಬದಲಿಗೆ ಡ್ರೈ ಫ್ರೂಟ್ಸ್‌ಗಳಿಂದ ಪ್ರಾರಂಭಿಸಿದರೆ, ನೀವು ಆರೋಗ್ಯವಾಗಿರುತ್ತೀರಿ. ಅದರಲ್ಲೂ ರಾತ್ರಿ ಮಲಗುವ ಮುನ್ನ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಲಾಭಗಳು ಸಿಗುತ್ತವೆ.  


COMMERCIAL BREAK
SCROLL TO CONTINUE READING

ಪ್ರತಿದಿನ ಬೆಳಿಗ್ಗೆ ನೆನೆಸಿದ ವಾಲ್ ನಟ್ಸ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ನೆನೆಸಿ ತಿನ್ನುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದ್ವಿಗುಣಗೊಳ್ಳುತ್ತವೆ. ಪ್ರತಿದಿನ ಬೆಳಗ್ಗೆ ಇವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ನಾರಿನಂಶ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. 


ಇದನ್ನೂ ಓದಿ: ಈ ಹಣ್ಣುಗಳನ್ನು ತಿಂದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ..! 


ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಹಸಿವಿನ ಸಂಕಟವನ್ನು ತಡೆಯುತ್ತದೆ. ತೂಕ ಹೆಚ್ಚಾಗುವ ಭಯವಿರುವುದಿಲ್ಲ. ಏಕೆಂದರೆ ನಾರಿನಂಶವನ್ನು ಸೇವಿಸುವುದರಿಂದ ಹೊಟ್ಟೆಯು ಹೆಚ್ಚು ಕಾಲ ತುಂಬಿದ ಅನುಭವವಾಗುತ್ತದೆ. ಅದರಲ್ಲೂ ಈ ರೀತಿ ನೆನೆಸಿದ ವಾಲ್ ನಟ್ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದಿನವಿಡೀ ಕ್ರಿಯಾಶೀಲರಾಗಿರುತ್ತೀರಿ.


ನೆನೆಸಿದ ವಾಲ್ ನಟ್ಸ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ವಾಲ್‌ನಟ್ಸ್ ಅನ್ನು ಚಿಕ್ಕವರು ಅಥವಾ ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ತಿನ್ನಬಹುದು. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಕೆಲವರಿಗೆ ಹಾರ್ಟ್ ಬ್ಲಾಕ್ ಆಗಿರುತ್ತದೆ. ವಾಲ್ ನಟ್ಸ್ ಹೃದಯದ ಬ್ಲಾಕ್‌ಗಳನ್ನು ಕ್ಲಿಯರ್‌ ಮಾಡಿ, ರಕ್ತ ಪರಿಚಲನೆ ಸುಧಾರಿಸುತ್ತದೆ.


ಇದನ್ನೂ ಓದಿ: ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ, ಈ ರೀತಿ ಬಳಸಿದರೆ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗೋದು ಖಚಿತ ! 


ವಾಲ್ ನಟ್ಸ್ ಜೀರ್ಣಾಂಗ ವ್ಯವಸ್ಥೆಗೆ ವಿಶೇಷವಾಗಿ ಒಳ್ಳೆಯದು. ನಿದ್ರಾಹೀನತೆಯು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ನೀವು ನಿಮ್ಮ ಆಹಾರದಲ್ಲಿ ವಾಲ್‌ನಟ್ಸ್ ಅನ್ನು ಸೇವಿಸಿದರೆ ಒತ್ತಡ ಮತ್ತು ಆತಂಕವನ್ನು ತೊಡೆದುಹಾಕುತ್ತೀರಿ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ನೆನೆಸಿದ ವಾಲ್ ನಟ್ಸ್ ಸೇವಿಸಬೇಕು.  


ವಾಲ್ ನಟ್ಸ್ ಫೈಬರ್, ಮೆಗ್ನೀಸಿಯಮ್, ಕಬ್ಬಿಣ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಅದರಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ವಿಶೇಷವಾಗಿ ಹೆಚ್ಚಾಗಿರುತ್ತವೆ. ಇದಲ್ಲದೆ, ವಾಲ್ ನಟ್ಸ್ ತಾಮ್ರ ಮತ್ತು ರಂಜಕವನ್ನು ಸಹ ಹೊಂದಿರುತ್ತದೆ. ಇದೊಂದು ರೀತಿಯಲ್ಲಿ ಪೋಷಕಾಂಶಗಳ ಗಣಿ ಎಂದೇ ಹೇಳಬೇಕು. ಮಧುಮೇಹದಿಂದ ಬಳಲುತ್ತಿರುವವರು ವಾಲ್ ನಟ್ಸ್ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದು ಶುಗರ್‌ ಕಂಟ್ರೋಲ್‌ ಮಾಡುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.