Harmful Foods For Bone Health: ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಭರಿತ ಆಹಾರಗಳ ಸೇವನೆ ತುಂಬಾ ಅಗತ್ಯ. ಆದರೆ, ನಿತ್ಯ ನಮ್ಮ ಆಹಾರದಲ್ಲಿ ನಾವು ಅತಿಯಾಗಿ ತೆಗೆದುಕೊಳ್ಳುವ ಕೆಲವು ಆಹಾರಗಳು ಮೂಳೆಗಳಿಗೆ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ಆರೋಗ್ಯಕರ ಶರೀರಕ್ಕೆ ಮೂಳೆಗಳನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಇದಕ್ಕಾಗಿ, ಆಹಾರ ಪಾನೀಯಗಳ ಬಗ್ಗೆಯೂ ಸರಿಯಾಗಿ ನಿಗಾವಹಿಸಬೇಕು. ವೈದ್ಯರ ಪ್ರಕಾರ, ಕೆಲವು ಆಹಾರಗಳ ಸೇವನೆ ಮೂಳೆಗಳ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮೂಳೆಗಳನ್ನು ದುರ್ಬಲಗೊಳಿಸುವ ಆಹಾರಗಳು ಯಾವುವು? ಯಾವ ಆಹಾರಗಳ ಸೇವನೆಯಿಂದ ಮೂಳೆಗಳು ಹಾನಿಗೊಳಗಾಗುತ್ತವೆ ಎಂಬುದನ್ನೂ ತಿಳಿಯೋಣ... 


ಈ ಆಹಾರಗಳ ಸೇವನೆ ನಿಮ್ಮ ಮೂಳೆಗಳಿಗೆ ಮಾರಕವಾಗಬಹುದು, ಎಚ್ಚರ!
ಸೋಡಿಯಂ ಭರಿತ ಆಹಾರ: 

ಉಪ್ಪಿಲ್ಲದೆ ಆಹಾರ ರುಚಿಸುವುದಿಲ್ಲ. ಹಾಗಂತ ಅತಿಯಾದ ಉಪ್ಪು ಭರಿತ ಆಹಾರಗಳ ಸೇವನೆ ನಿಮ್ಮ ಮೂಳೆಗಳನ್ನು ಹಾನಿಗೊಳಿಸಬಹುದು. ಅತಿಯಾದ ಸೋಡಿಯಂ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವುದರ ಜೊತೆಗೆ ಅದು ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. 


ಇದನ್ನೂ ಓದಿ- High Cholesterol ಅನ್ನು ಒಂದೇ ವಾರದಲ್ಲಿ ನಿಯಂತ್ರಿಸುತ್ತೆ ಈ ಆಹಾರಗಳು


ಕಾರ್ಬೊನೇಟೆಡ್ ಡ್ರಿಂಕ್ಸ್: 
ಇತ್ತೀಚಿನ ದಿನಗಳಲ್ಲಿ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ನಮ್ಮಲ್ಲಿ ಹಲವರು ಆಗಾಗ್ಗೆ ಕಾರ್ಬೊನೇಟೆಡ್ ಡ್ರಿಂಕ್ಸ್ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಕಾರ್ಬೊನೇಟೆಡ್ ಪಾನೀಯಗಳು ಆಮ್ಲವನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಆಮ್ಲೀಯತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭದಲ್ಲಿ ಕಾಲ್ಸಿಯಂ ಮೂಳೆಗಳಿಂದ ಹೊರಬರುತ್ತದೆ ಇದು ಮೂಳೆಗಳನ್ನು ಹಾನಿಗೊಳಿಸುತ್ತದೆ. 


ಸಿಹಿ ಆಹಾರಗಳು:
ಸಿಹಿ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರೂರುತ್ತದೆ. ಆದರೆ, ಅತಿಯಾದ ಸಿಹಿ ಪದಾರ್ಥಗಳ ಸೇವನೆ ನಿಮ್ಮ ಮೂಳೆಗಳ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೌದು, ಅತಿಯಾದ ಸಕ್ಕರೆ ಸೇವನೆಯಿಂದ ಮೂಳೆಗಳ ಸಾಂದ್ರತೆ ಕಾಡಿಮಾಗುತ್ತಡ್. ಅದರಲ್ಲೂ ಆಸ್ಟಿಯೊಪೊರೋಸಿಸ್ ಸಮಸ್ಯೆ ಇರುವವರಲ್ಲಿ ಈ ಅಪಾಯ ಇನ್ನೂ ಹೆಚ್ಚು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Weight Loss Drinks: ನಿತ್ಯ ಈ ಪಾನೀಯ ಸೇವಿಸುತ್ತಾ ಬಂದರೆ ಸುಲಭವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್


ಕೆಫಿನ್: 
ಕೆಫಿನ್ ಆರೋಗ್ಯಕ್ಕೆ ಪ್ರಯೋಜನಕಾರಿ. ಅತ್ಯುತ್ತಮ ಮೈಂಡ್ ರಿಫ್ರೇಶ್ ಎಂಬುದರಲ್ಲಿ ಎರಡನೇ ಮಾತಿಲ್ಲ. ಹಾಗಂತ ಇದನ್ನು ಅತಿಯಾಗಿ ಸೇವಿಸಿದರೆ ಅದು ನಿಮ್ಮ ಮೂಳೆಗಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ