Drinks For Reducing Weight: ದೇಹ ಸರಿಯಾದ ಆಕಾರದಲ್ಲಿರಬೇಕು, ಬಳಕುವ ಬಳ್ಳಿಯಂತೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೆಚ್ಚಿನ ಬೊಜ್ಜು ಹೊಂದಿರುವ ಜನರು ಇದೇ ಕಾರಣಕ್ಕೆ ತೂಕವನ್ನು ಕಳೆದುಕೊಳ್ಳಲು ಬಯಸುತ್ತಾರೆ. ಆದರೆ ತೂಕ ಕಳೆದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಕೂಡಾ ಎದುರಾಗುತ್ತದೆ. ಇದಕ್ಕಾಗಿ ಅವರು ಸರಿಯಾದ ಡಯಟ್ ಚಾರ್ಟ್ ಮತ್ತು ವ್ಯಾಯಾಮದ ದಿನಚರಿಯನ್ನು ಅನುಸರಿಸಬೇಕು. ಇಡೀ ದಿನದ ಓಡಾಟದ ನಂತರ, ಮತ್ತೆ ಜಿಮ್ಗೆ ಹೋಗಿ ಬೆವರು ಹರಿಸುವುದು, ವ್ಯಾಯಾಮ ಮಾಡುವುದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಅಂಥವರು ಸಣ್ಣಗಾಗಲು ಸಾಧ್ಯವಾಗುವುದಿಲ್ಲವೇ? ಖಂಡಿತಾ ಆಗುತ್ತದೆ. ಹಾಗಿದ್ದರೆ ಜಿಮ್ ಗೆ ಹೋಗದೆ ವ್ಯಾಯಾಮ ಮಾಡದೇ ತೂಕ ಕಳೆದುಕೊಳ್ಳುವುದು ಹೇಗೆ?
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ವಿಧಾನಗಳು :
ಬೆಲ್ಲಿ ಫ್ಯಾಟ್ ಅನ್ನು ಕಡಿಮೆ ಮಾಡಲು, ತೂಕ ನಷ್ಟಕ್ಕೆ ಸಹಾಯ ಮಾಡುವ ಕೆಲವು ಪಾನೀಯಗಳನ್ನು ಕುಡಿಯಬಹುದು. ಇದನ್ನು ಮೆಟಾಬಾಲಿಸಮ್ ಬೂಸ್ಟಿಂಗ್ ಡ್ರಿಂಕ್ಸ್ ಎಂದೂ ಕರೆಯುತ್ತಾರೆ. ಇದನ್ನು ನೀವು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ತೂಕ ನಷ್ಟದಲ್ಲಿ ಈ ಪಾನೀಯಗಳು ತುಂಬಾ ಪರಿಣಾಮಕಾರಿ ಕೆಲಸ ಮಾಡುತ್ತವೆ.
ಇದನ್ನೂ ಓದಿ : White Hair Problem: ಡೈ ಬಳಸದೆಯೇ ಈ ರೀತಿ ನಿಮ್ಮ ತಲೆಕೂದಲನ್ನು ಕಪ್ಪಾಗಿಸಿ!
1. ಸೋಂಪಿನ ನೀರು :
ಫೆನ್ನೆಲ್ ಅಥವಾ ಸೋಂಪ ನ್ನು ಸಾಮಾನ್ಯವಾಗಿ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಆದರೆ ಅದರ ಸೇವನೆ ಮೂಲಕ ತೂಕವನ್ನು ಕಳೆದುಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಇದಕ್ಕಾಗಿ ಒಂದು ಚಮಚ ಸೋಂಪನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯೇ ಹಾಕಿ ನೆನೆಯಲು ಬಿಡಿ. ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ನೀರನ್ನು ಕುಡಿಯಿರಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
2. ನಿಂಬೆ ರಸ ಮತ್ತು ಜೇನುತುಪ್ಪ:
ನಿಂಬೆ ಮತ್ತು ಜೇನುತುಪ್ಪದ ಸಂಯೋಜನೆಯು ಕೂಡಾ ತೂಕ ನಷ್ಟಕ್ಕೆ ಇರುವ ವಿಶಿಷ್ಟವಾದ ಮಾರ್ಗವೆಂದು ಪರಿಗಣಿಸಲಾಗಿದೆ. ಈ ಪಾನೀಯವನ್ನು ತಯಾರಿಸಲು, ಮೊದಲು ಒಂದು ಲೋಟ ನೀರನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು. ನಂತರ ಅದರಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ, ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಪಾನೀಯವನ್ನು ನಿತ್ಯ ಕುಡಿಯುತ್ತಾ ಬಂದರೆ ದೇಹದ ಕೊಬ್ಬು ಬೇಗ ಕರಗುತ್ತದೆ.
ಇದನ್ನೂ ಓದಿ : ಊಟದ ರೀತಿ ಈ ಥರ ಇದ್ದರೆ ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುವುದು ಡಯಾಬಿಟೀಸ್
3. ಒಮದ ಕಾಳಿನ ನೀರು :
ಒಮ ಕಾಳನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ನೀವು ಬಯಸಿದರೆ, ವೇಗವಾಗಿ ಹೆಚ್ಚುತ್ತಿರುವ ತೂಕವನ್ನು ಓಮ ಕಾಳಿನ ಮೂಲಕ ಕಡಿಮೆ ಮಾಡಬಹುದು. ಈ ಪಾನೀಯವನ್ನು ತಯಾರಿಸಲು, ಒಮ ಕಾಳನ್ನು ಹುರಿದು ಅದನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಕೂಡಲೇ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. ಈ ಪಾನೀಯವನ್ನು ನಿತ್ಯ ಸೇವಿಸುತ್ತಾ ಬಂದರೆ ಅತಿ ಕಡಿಮೆ ಸಮಯದಲ್ಲಿಯೇ ಬೊಜ್ಜು ಕರಗಿಸುವುದು ಸಾಧ್ಯವಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.