Men Health : ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ, ಇದರಿಂದ ಜೀವನದಲ್ಲಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು. ವಿಶೇಷವಾಗಿ ಹೆಚ್ಚಾತಿರುವ ವಯಸ್ಸಿನಲ್ಲಿ ದೇಹವನ್ನು ಆರೋಗ್ಯವಂತ ಆಗಿರಿಸಿಕೊಳ್ಳುವುದು ತುಂಬಾ ಮುಖ್ಯ,  ಆದರೆ ಅನೇಕ ಪುರುಷರು ಹಾಗೂ ಮಹಿಳೆಯರು ವಯಸ್ಸಾದಂತೆ ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸುತ್ತಾರೆ. ಇಂತಹ ಜನರಲ್ಲಿ ಒಂದು ವೇಳೆ ನೀವೂ ಇದ್ದರೆ ಅನೇಕ ರೋಗಗಳಿಗೆ ನೀವು ಆಮಂತ್ರಣ ನೀಡುತ್ತಿರುವಿರಿ ಎಂಬುದನ್ನು ಮೊದಲು ತಿಳಿದುಕೊಳ್ಳಿ. ವಯಸ್ಸಾದಂತೆ, ಪುರುಷರು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆಯಂತಹ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಈ ರೋಗಗಳನ್ನು ಕಡಿಮೆ ಮಾಡಲು, ಪುರುಷರು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ನಿಮ್ಮ ವಯಸ್ಸು ಕೂಡ 40 ದಾಟಿದ್ದರೆ, ನಿಮ್ಮ ಡಯಟ್ ಪ್ಲಾನ್ ಹೇಗಿರಬೇಕು ತಿಳಿದುಕೊಳ್ಳೋಣ ಬನ್ನಿ
40 ರ ನಂತರ ಪುರುಷರ ಆಹಾರ ಯೋಜನೆ


COMMERCIAL BREAK
SCROLL TO CONTINUE READING

ಫೈಬರ್ ಯುಕ್ತ ಆಹಾರವನ್ನು ಸೇವಿಸಿ
ಪುರುಷರಿಗೆ ತಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಇಂತಹ ಆಹಾರ ಸೇವನೆಯಿಂದ ಮಲಬದ್ಧತೆ, ಅಜೀರ್ಣವನ್ನು ನಿವಾರಿಸಿಕೊಳ್ಳಬಹುದು. ವಾಲ್ ನಟ್ಸ್, ಬ್ರೊಕೊಲಿ, ಸ್ಪ್ರೌಟ್ಸ್ ಮುಂತಾದವುಗಳು ಫೈಬರ್ ನಿಂದ ಸಮೃದ್ಧವಾಗಿರುವ ಆಹಾರಗಳಾಗಿವೆ. ಇವು ಪುರುಷರಿಗೆ ಅವಶ್ಯಕವಾಗಿವೆ.


ಪುರುಷರಿಗೆ ಒಳ್ಳೆಯ ಕೊಬ್ಬು ಅತ್ಯಗತ್ಯ
40 ರ ನಂತರ ಪುರುಷರು ತಮ್ಮ ಆಹಾರದಲ್ಲಿ ಒಳ್ಳೆಯ ಕೊಬ್ಬನ್ನು ಸೇರಿಸಿಕೊಳ್ಳಬೇಕು. ನಟ್ಸ್ , ಸೀಡ್ಸ್, ಆವಕಾಡೊಗಳಂತಹ ಆಹಾರಗಳು ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿವೆ. ಅವುಗಳ ಸೇವನೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೆ, ನೀವು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳಿಂದ ದೂರವಿರಬಹುದು.


ಧಾನ್ಯಗಳನ್ನು ಸೇವಿಸಿ
ಧಾನ್ಯಗಳು ಫೈಬರ್ ಮತ್ತು ವಿವಿಧ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಈ ಆಹಾರಗಳನ್ನು ಸೇವಿಸುವುದರಿಂದ ಬೊಜ್ಜು, ಮಲಬದ್ಧತೆ, ಅಧಿಕ ರಕ್ತದೊತ್ತಡದಿಂದ ದೂರವಿರುವಿರಿ. ನೀವು ಧಾನ್ಯಗಳ ರೂಪದಲ್ಲಿ ಓಟ್ಸ್, ಕೆಂಪು ಅಕ್ಕಿ ಮತ್ತು ಓಟ್ ಮೀಲ್ ಅನ್ನು ಸೇವಿಸಬಹುದು.


ಇದನ್ನೂ ಓದಿ-Monsoon Tips: ಮಳೆಗಾಲದ ಋತುವಿನಲ್ಲಿ ಈ ಹರ್ಬ್ ಗಳನ್ನು ಬಳಸಿ ಸುರಕ್ಷಿತವಾಗಿರಿ


ಪ್ರೋಟೀನ್ ಭರಿತ ಆಹಾರ ಸೇವಿಸಿ
ಪುರುಷರು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಸ್ನಾಯುವಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುತ್ತದೆ. ನೀವು ಪ್ರೋಟೀನ್-ಭರಿತ ಆಹಾರದಲ್ಲಿ ಹಾಲು, ಟೋಫೂ, ಮಾಂಸ, ಮೊಟ್ಟೆ ಮತ್ತು ಚಿಕನ್ ಸೇರಿಸಿಕೊಳ್ಳಬಹುದು.


ಇದನ್ನೂ ಓದಿ-Corona Research: ರೋಗಿಗಳ ಮಧ್ಯೆ ಇದ್ದೂ ಕೂಡ ಕೆಲವರಿಗೆ ಕೊರೊನಾ ಸೋಂಕು ಅಂಟಿಕೊಳ್ಳಲೇ ಇಲ್ಲ, ಇಲ್ಲಿದೆ ಸಂಪೂರ್ಣ ವರದಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ