Weight Loss Diet: ಇಂದಿನ ದಿನಗಳಲ್ಲಿ ನಾವು ಮಾಡುವ ಕೆಲಸಗಳು ಯಂತ್ರಗಳ ಸಹಾಯದಿಂದ ಸುಲಭವಾಗುತ್ತಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ಆರಾಮದಾಯಕ ಜೀವನವು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದರ ಬಗ್ಗೆಯೂ ಸಂದೇಹ ಬೇಡ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಪ್ರಮುಖ ಸಮಸ್ಯೆ ಎಂದರೆ ತೂಕ ಹೆಚ್ಚಳ. ತೂಕ ಹೆಚ್ಚಾಗಲು ಹಲವು ಕಾರಣಗಳಿರಬಹುದು. ಆದರೆ, ತಪ್ಪು ದಿನಚರಿ ಮತ್ತು ಅತಿಯಾದ ಎಣ್ಣೆಯುಕ್ತ ಆಹಾರ ಸೇವನೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನೀವು ಸಹ ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಮೊದಲು ನೀವು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಬೇಕು. ಇದಲ್ಲದೆ, ತೂಕವನ್ನು ಕಡಿಮೆ (Weight Loss) ಮಾಡಲು ಸಹಾಯ ಮಾಡುವ ಕೆಲವು ಹಣ್ಣುಗಳಿವೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು.


ತೂಕ ನಷ್ಟಕ್ಕೆ ಅಗತ್ಯವಾದ ಹಣ್ಣುಗಳು:
ತೂಕ ಇಳಿಸುವ ಯೋಜನೆಯನ್ನು ಮಾಡುವಾಗ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು. ಯಾವುದೇ ವಸ್ತುವನ್ನು ಸೇವಿಸುವ ಮೊದಲು, ಅದು ಹಣ್ಣು ಅಥವಾ ತರಕಾರಿಯಾಗಿರಲಿ, ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಬಲ್ಲ ಇಂತಹ ಹಣ್ಣುಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.


ಇದನ್ನೂ ಓದಿ- Weight Loss: ಈ 5 ಆಹಾರ ಪದಾರ್ಥಗಳ ಸೇವನೆಯಿಂದ ಬೇಗ ತೂಕ ಕಡಿಮೆಯಾಗುತ್ತಂತೆ


ಕಿವಿ :
ಕಿವಿ ತೂಕ ನಷ್ಟಕ್ಕೆ ಸೂಪರ್ ಫುಡ್ (Weight Loss Super Food) ಆಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಕಿವಿಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಫೈಬರ್ ಸಮೃದ್ಧವಾಗಿರುವ ಅನೇಕ ಪೋಷಕಾಂಶಗಳಿವೆ. ಕಿವಿಯ ಸೇವನೆಯಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದಂತಾಗುತ್ತದೆ. ಅಲ್ಲದೆ, ಕಿವಿಯು ಹಸಿವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. 


ಕಿತ್ತಳೆ :
ಕಿತ್ತಳೆ ಸಿಟ್ರಿಕ್ ಹಣ್ಣು. ಇದು ದೇಹದ ಕ್ಯಾಲೊರಿಗಳನ್ನು ಅತ್ಯಂತ ವೇಗವಾಗಿ ಸುಡುತ್ತದೆ. ಹೆಚ್ಚಿನ ಕ್ಯಾಲೊರಿಗಳನ್ನು ಸುಡುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಥಯಾಮಿನ್, ವಿಟಮಿನ್ ಸಿ ಮತ್ತು ಫೋಲೇಟ್‌ನಂತಹ ಅನೇಕ ಪೋಷಕಾಂಶಗಳು ಕಿತ್ತಳೆಯಲ್ಲಿ ಕಂಡುಬರುತ್ತವೆ. ಅದರ ಸೇವನೆಯಿಂದ ಚಯಾಪಚಯವು ವೇಗಗೊಳ್ಳುತ್ತದೆ ಮತ್ತು ಸಿಹಿ ಆಹಾರಕ್ಕಾಗಿ ಕಡುಬಯಕೆ ಕೊನೆಗೊಳ್ಳುತ್ತದೆ, ತೂಕವನ್ನು ಹೆಚ್ಚಿಸುವಲ್ಲಿ ಸಿಹಿ ಪ್ರಮುಖ ಪಾತ್ರ ವಹಿಸುತ್ತದೆ.


ಇದನ್ನೂ ಓದಿ- How To Lose Weight: ತೂಕ ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿ ಈ 3 ಪದಾರ್ಥಗಳು


ಸೀಬೆಹಣ್ಣು : 
ಸೀಬೆಹಣ್ಣು ಕಡಿಮೆ ಕ್ಯಾಲೋರಿ ಹಣ್ಣುಗಳಲ್ಲಿ ಒಂದಾಗಿದೆ, ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ ಹಾಗೆಯೇ ಕ್ಯಾಲೋರಿಗಳು ಹೆಚ್ಚಾಗುವುದಿಲ್ಲ. ಮ್ಯಾಂಗನೀಸ್, ಫೋಲೇಟ್ ನಂತಹ ಅನೇಕ ಖನಿಜಗಳು, ಪ್ರೋಟೀನ್ ಮತ್ತು ಫೈಬರ್  ಸೀಬೆಹಣ್ಣಿನಲ್ಲಿ ಕಂಡುಬರುತ್ತವೆ. ಪ್ರೋಟೀನ್ ಮತ್ತು ನಾರಿನಂಶ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಇದಲ್ಲದೆ, ನೀವು ಆಹಾರದಲ್ಲಿ ನಿಂಬೆ ಮತ್ತು ಎಳನೀರನ್ನು ಸಹ ಸೇವಿಸಬಹುದು. ಇವೆರಡೂ ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ