Lemon Water: ಪ್ರತಿನಿತ್ಯ ಕೇವಲ ಒಂದು ಲೋಟ ಈ ವಿಶೇಷ 'ನೀರು' ಕುಡಿದು ಪಡೆಯಿರಿ ಹಲವು ಪ್ರಯೋಜನ

Lemon Water: ನಿಂಬೆ ನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದ್ದು, ನಿತ್ಯ ಇದರ ಸೇವನೆಯು ಹೊಳೆಯುವ ಚರ್ಮದ ಜೊತೆಗೆ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇದರೊಂದಿಗೆ, ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಪ್ರತಿದಿನ ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ...

Written by - Yashaswini V | Last Updated : Sep 30, 2021, 10:10 AM IST
  • ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ
  • ಇದರ ಹೊರತಾಗಿ, ನಿಂಬೆ ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ
  • ಇದು ಸುಲಭವಾಗಿ ತಯಾರಿಸಬಹುದಾದ ಪಾನೀಯವಾಗಿದ್ದು ಅದು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ
Lemon Water: ಪ್ರತಿನಿತ್ಯ ಕೇವಲ ಒಂದು ಲೋಟ ಈ ವಿಶೇಷ 'ನೀರು' ಕುಡಿದು ಪಡೆಯಿರಿ ಹಲವು ಪ್ರಯೋಜನ title=
Hot Lemon Water: ಪ್ರತಿದಿನ ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ಸಿಗುತ್ತೆ ಅದ್ಭುತ ಲಾಭ

Lemon Water: ನಮ್ಮ ದೇಹಕ್ಕೆ ಆಹಾರಕ್ಕಿಂತ ನೀರು ಬಹಳ ಮುಖ್ಯ. ನಮ್ಮ ದೇಹವು ಸುಮಾರು 60 ಪ್ರತಿಶತದಷ್ಟು ನೀರಿನಿಂದ ಕೂಡಿದ್ದು, ದೇಹವನ್ನು ಆರೋಗ್ಯವಾಗಿಡಲು ನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಾತ್ರವಲ್ಲ, ದೇಹದಿಂದ ವಿಷವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ನೀವು ಎಷ್ಟು ಹೆಚ್ಚು ನೀರು ಕುಡಿಯುತ್ತೀರೋ ಅಷ್ಟು ಆರೋಗ್ಯವಾಗಿರುತ್ತೀರಿ. ಜೊತೆಗೆ ನಿಮ್ಮ ಚರ್ಮ ಮತ್ತು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ದಿನವಿಡೀ ಆಗಾಗ್ಗೆ ನೀರು ಕುಡಿಯುವ ಮೂಲಕ ನಿಮ್ಮನ್ನು ಹೈಡ್ರೇಟ್ ಆಗಿರಿಸುವುದು ಬಹಳ ಮುಖ್ಯ. ಇಂದು ನಾವು ನಿಮಗೆ ಅಂತಹ 'ವಿಶೇಷ ನೀರಿನ' ಬಗ್ಗೆ ಹೇಳಲಿದ್ದೇವೆ, ಇದರ ಮೂಲಕ ನೀವು ದಿನವನ್ನು ಪ್ರಾರಂಭಿಸಿದರೆ ಹಲವು ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು.  ಇದರಿಂದ ಅನೇಕ ರೋಗಗಳು ನಿಮ್ಮಿಂದ ದೂರ ಉಳಿಯುತ್ತವೆ ಎಂದು ಹೇಳಲಾಗುತ್ತದೆ. 

ನೀವು ದಿನವನ್ನು ಸರಳವಾದ ನಿಂಬೆರಸದಿಂದ ಆರಂಭಿಸಬಹುದಾದರೂ, ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನಿಂಬೆರಸವನ್ನು ಕುಡಿಯುವುದರಿಂದ ನಿಮಗೆ ಇನ್ನೂ ಅನೇಕ ಅದ್ಭುತವಾದ ಲಾಭಗಳು ಸಿಗುತ್ತವೆ. 

ಒಂದು ಲೋಟ ಬೆಚ್ಚಗಿನ ನಿಂಬೆರಸ ಕುಡಿಯುವುದರಿಂದ ಆಗುವ ಲಾಭಗಳು: 
1. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ:

ನಿಂಬೆಯಲ್ಲಿ ವಿಟಮಿನ್ ಸಿ (Vitamin C) ಹೇರಳವಾಗಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಪ್ರಯೋಜನಕಾರಿ. ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ- High Blood Pressure: ಈ ಆಹಾರಗಳನ್ನು ಎಂದಿಗೂ ಕೂಡ ಅತಿಯಾಗಿ ಸೇವಿಸಬೇಡಿ, ಇಲ್ಲವೇ ಹೆಚ್ಚಾಗುತ್ತೆ Blood Pressure

2. ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ:
ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು (Hot Lemon Water Benefits) ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಇದರ ಹೊರತಾಗಿ, ನಿಂಬೆ ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ನೀರು ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ.

3. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:
ಕೆಲವರಿಗೆ ನಿಂಬೆರಸವನ್ನು ಸಕ್ಕರೆಯೊಂದಿಗೆ ಬೆರೆಸುವ ಅಭ್ಯಾಸವಿದೆ. ಆದರೆ ನೆನಪಿಡಿ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಸಕ್ಕರೆ ಬೆರೆಸಿದ ನಿಂಬೆ ನೀರನ್ನು ಕುಡಿಯುವುದನ್ನು ತಪ್ಪಿಸಿ. ಸಕ್ಕರೆ ಇಲ್ಲದೆ ನಿಂಬೆ ಪಾನೀಯವನ್ನು ಸೇವಿಸುವುದರಿಂದ ಇದು ಕೊಬ್ಬನ್ನು ಸುಡಲು ಕೆಲಸ ಮಾಡುತ್ತದೆ. ಆದ್ದರಿಂದ, ಮಲಗುವ ಮುನ್ನ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದು ತೂಕ ನಿಯಂತ್ರಣಕ್ಕೆ (Weight Loss) ಸಹಾಯ ಮಾಡುತ್ತದೆ. 

ಇದನ್ನೂ ಓದಿ- ಹೃದಯವನ್ನು ಆರೋಗ್ಯವಾಗಿಡಲು ಈ ಐದು ಆಹಾರಗಳು ಸಾಕು

4. ಪಿಎಚ್ ಮಟ್ಟವನ್ನು ನಿರ್ವಹಿಸುತ್ತದೆ:
ನಿಂಬೆ ನೀರಿನಲ್ಲಿ ಸಿಟ್ರಿಕ್ (Citric) ಮತ್ತು ಆಸ್ಕೋರ್ಬಿಕ್ (Ascorbic) ಆಮ್ಲಗಳು ಕಂಡುಬರುತ್ತವೆ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸರಿಯಾಗಿ ಇರಿಸಿಕೊಳ್ಳಲು ಹಾಗೂ pH ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. 

5. ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ:
ಇದು ಸುಲಭವಾಗಿ ತಯಾರಿಸಬಹುದಾದ ಪಾನೀಯವಾಗಿದ್ದು ಅದು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದು ಹೈಡ್ರೇಟಿಂಗ್ ಪಾನೀಯವಾಗಿದ್ದು ಅದು ಬಾಯಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಹಿಂದೂಸ್ಥಾನ ಕನ್ನಡ ಇದನ್ನು ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ನೀವು ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News