Diwali 2022 : ದೀಪಾವಳಿ ಸಂದರ್ಭದಲ್ಲಿ ಶರೀರ ನಿರ್ವಿಷಗೊಳಿಸಿ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ
Weight Loss: ಪ್ರಸ್ತುತ ಭಾರತದಲ್ಲಿ ಹಬ್ಬದ ಋತು ನಡೆಯುತ್ತಿದೆ. ಹಬ್ಬದ ಋತುವಿನಲ್ಲಿ ಜನರು ವಿವಿಧ ರೀತಿಯ ಸಿಹಿ ತಿಂಡಿ ತಿನಸುಗಳನ್ನು ಸೇವಿಸುವಮೂಲಕ ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಚಳಿಗಾಲ ಆಗಮಿಸುತ್ತಿದೆ. ಹೀಗಾಗಿ ನೀವು ಕೂಡ ಈ ಅವಧಿಯಲ್ಲಿ ನಿಮ್ಮ ತೂಕವನ್ನು ಕಳೆದುಕೊಳ್ಳಲು ಯೋಚಿಸುತ್ತಿದ್ದರೆ, ನೀವು ಕೆಲ ಡಿಟಾಕ್ಸ್ ಪಾನೀಯಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿಕೊಳ್ಳಿ.
Winter Detox Drink For Weight Loss: ಎರಡು ದಿನಗಳ ಬಳಿಕ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಇದರ ಜೊತೆಗೆ ಚಳಿಗಾಲವು ಕೂಡ ಶೀಘ್ರದಲ್ಲಿಯೇ ಕದ ತಟ್ಟಲಿದೆ. ಈ ಹಬ್ಬದ ಋತುವಿನಲ್ಲಿ ಜನರು ಕರಿದ, ಹುರಿದ ಮತ್ತು ಸಿಹಿ ತಿಂಡಿ ತಿನಸುಗಳನ್ನು ತಿನ್ನುವ ಮೂಲಕ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನಂತರ ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟಸಾಧ್ಯವಾಗಿ ಪರಿಣಮಿಸುತ್ತದೆ, ಚಳಿಗಾಲದಲ್ಲಿ ಮತ್ತು ಹಬ್ಬದ ಋತುವಿನಲ್ಲಿ, ದೇಹವನ್ನು ಬೆಚ್ಚಗಾಗಲು ಮತ್ತು ಚಯಾಪಚಯವನ್ನು ವೇಗಗೊಳಿಸಲು ಸಮತೋಲಿತ ಪ್ರಮಾಣದ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ಚಳಿಗಾಲದಲ್ಲಿ ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುವ ಕೆಲವು ಡಿಟಾಕ್ಸ್ ಪಾನೀಯಗಳನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸಬಹುದು.
ಹಬ್ಭಗಳ ಋತುವಿನಲ್ಲಿ ತೂಕ ಇಳಿಸಿಕೊಳ್ಳಲು ಈ ಡಿಟಾಕ್ಸ್ ಪಾನೀಯಗಳನ್ನು ಸೇವಿಸಿ
ದಾಳಿಂಬೆ ಮತ್ತು ಬೀಟ್ ಜ್ಯೂಸ್
ಚಳಿಗಾಲದ ಋತುವಿನಲ್ಲಿ ದಾಳಿಂಬೆ ಮತ್ತು ಬೀಟ್ರೂಟ್ ಬಹಳ ಸುಲಭವಾಗಿ ಲಭ್ಯವಗುತ್ತವೆ. ದಾಳಿಂಬೆ ಮತ್ತು ಬೀಟ್ರೂಟ್ ರಸವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಚಳಿಗಾಲದಲ್ಲಿ ದಾಳಿಂಬೆ ಮತ್ತು ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುವುದಲ್ಲದೆ ಚಯಾಪಚಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ನೀವು ಈ ಜ್ಯೂಸ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ಕಿತ್ತಳೆ, ಶುಂಠಿ ಮತ್ತು ಕ್ಯಾರೆಟ್ ಜ್ಯೂಸ್
ಕಿತ್ತಳೆ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಮತ್ತೊಂದೆಡೆ, ಕ್ಯಾರೆಟ್‌ನಲ್ಲಿ ಫೈಬರ್ ಅಧಿಕವಾಗಿದ್ದು ಅದು ತೂಕ ಇಳಿಕೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೀಗಿರುವಾಗ, ನೀವು ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಪ್ರತಿದಿನ ಈ ರಸವನ್ನು ಸೇವಿಸಬಹುದು.
ಇದನ್ನೂ ಓದಿ-ಮೊಟ್ಟೆ ತಿಂದರೆ ಹೆಚ್ಚಾಗುವುದೇ ಕೊಲೆಸ್ಟ್ರಾಲ್ ? ಏನೆನ್ನುತ್ತಾರೆ ತಜ್ಞರು ?
ಆಮ್ಲಾ ರಸ
ಆಮ್ಲಾದಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ವಿಟಮಿನ್ ಸಿ ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆಮ್ಲಾ ಜ್ಯೂಸ್‌ನಲ್ಲಿರುವ ಪೋಷಕಾಂಶಗಳು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಆದ್ದರಿಂದ ನೀವು ಚಳಿಗಾಲದಲ್ಲಿ ನೆಲ್ಲಿಕಾಯಿ ರಸವನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ.
ಇದನ್ನೂ ಓದಿ-ಮಧುಮೇಹ ನಿಯಂತ್ರಿಸಲು ಈ ಮಸಾಲೆ ನೀರು ದಿವ್ಯೌಷಧ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.