Eggs And Cholesterol : ಬೆಳಗಿನ ಉಪಾಹಾರದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಮೊಟ್ಟೆ ಪ್ರೋಟೀನ್‌ನ ಸಮೃದ್ಧ ಮೂಲ. ಜೊತೆಗೆ ನೈಸರ್ಗಿಕ ಕೊಬ್ಬು ಕೂಡಾ ಅದರಲ್ಲಿ ಕಂಡುಬರುತ್ತದೆ. ಪ್ರತಿಯೊಬ್ಬ ಆರೋಗ್ಯ ತಜ್ಞರು ಕೂಡಾ ಈ ಸೂಪರ್‌ಫುಡ್ ಅನ್ನು ತಿನ್ನಲು ಸಲಹೆ ನೀಡುತ್ತಾರೆ. ಆದರೆ, ಕೊಲೆಸ್ಟ್ರಾಲ್ ಮಟ್ಟವು ಈಗಾಗಲೇ ಹೆಚ್ಚಿರುವ ಜನರು ಮೊಟ್ಟೆಗಳನ್ನು ತಿನ್ನಬಹುದೇ ಎನ್ನುವ ಪ್ರಶ್ನೆ ಎದ್ದಿದೆ.
ಮೊಟ್ಟೆಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆಯೇ ? :
ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಉತ್ತಮ ಕೊಲೆಸ್ಟ್ರಾಲ್, ನಮ್ಮ ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ. ಇದು ಸ್ಯಾಚುರೇಟೆಡ್ ಅಥವಾ ಟ್ರಾನ್ಸ್ ಕೊಬ್ಬನ್ನು ಹೊಂದಿರುವುದಿಲ್ಲ. ಆದ್ದರಿಂದ LDL ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗುವುದಿಲ್ಲ. ಆದರೆ, ನೆನಪಿರಲಿ ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು. ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೇಯಿಸಿ ತಿಂದರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ : ಮಧುಮೇಹ ನಿಯಂತ್ರಿಸಲು ಈ ಮಸಾಲೆ ನೀರು ದಿವ್ಯೌಷಧ!
ಎಷ್ಟು ಮೊಟ್ಟೆಗಳನ್ನು ತಿನ್ನಬೇಕು? :
ಮೊಟ್ಟೆ ತಿಂದರೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆಹಾರ ತಜ್ಞ ಡಾ.ಆಯುಷಿ ಯಾದವ್ ಪ್ರಕಾರ, ದಿನಕ್ಕೆ 2 ಮೊಟ್ಟೆಗಳನ್ನು ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸಲು ಬಯಸಿದರೆ, ವೈದ್ಯರನ್ನು ಸಲಹೆ ಪಡೆಯುವುದು ಒಳ್ಳೆಯದು. ಭಾರೀ ವರ್ಕೌಟ್ ಮಾಡುವವರು ಹೆಚ್ಚು ಮೊಟ್ಟೆಗಳನ್ನು ತಿನ್ನಬೇಕು.
ಈ ಆಹಾರಗಳಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ :
1. ಮಾಂಸ- ಇದು ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದರೂ, ಕೊಬ್ಬು ಸಹ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
2. ಫುಲ್ ಫ್ಯಾಟ್ ಹಾಲು- ಹಾಲು ನಮಗೆ ಸಂಪೂರ್ಣ ಆಹಾರ. ಆದರೆ, ಫುಲ್ ಫ್ಯಾಟ್ ಹಾಲನ್ನು ಕುಡಿದರೆ, ಕೊಲೆಸ್ಟ್ರಾಲ್ ಹೆಚ್ಚಾಗಬಹುದು. ಹಾಲನ್ನು ಕೆನೆ ತೆಗೆದು ಸೇವಿಸಬೇಕು.
ಇದನ್ನೂ ಓದಿ : Beetroot Effects: ಈ ಸಮಸ್ಯೆ ಇರುವವರಿಗೆ ಹಾನಿಕಾರಕ ಬೀಟ್ರೂಟ್
3. ಎಣ್ಣೆಯುಕ್ತ ಆಹಾರಗಳು- ಅನೇಕ ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಡುಗೆಯಲ್ಲಿ ಹೆಚ್ಚು ಎಣ್ಣೆಯನ್ನು ಬಳಸುವುದರಿಂದ ಹಲವಾರು ರೋಗಗಳು ಬರಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.