ಮಜ್ಜಿಗೆಗೆ ಉಪ್ಪು ಹಾಕಿ ಕುಡಿಯುತ್ತಿರಾ? ಖಂಡಿತಾ ಆ ತಪ್ಪು ಮಾಡಲೇ ಬೇಡಿ
Do not add salt in buttermilk:ಆಹಾರ ತಜ್ಞರ ಮಾತನ್ನು ಕೇಳುವುದಾದರೆ ಮಜ್ಜಿಗೆಗೆ ಉಪ್ಪು ಸೇರಿಸಬಾರದು. ಏಕೆಂದರೆ ಉಪ್ಪು ಬೆರೆಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.
Do not add salt in buttermilk : ಮಜ್ಜಿಗೆ ನಮ್ಮ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾನೀಯಗಳಲ್ಲಿ ಒಂದಾಗಿದೆ. ಬೇಸಿಗೆಯಲ್ಲಿ ಮಜ್ಜಿಗೆ ಸೇವನೆ ಪ್ರಮಾಣ ಹೆಚ್ಚಾಗಿರುತ್ತದೆ. ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿಸಲು ಮಜ್ಜಿಗೆ ಸಹಾಯ ಮಾಡುತ್ತದೆ. ಇದು ನಮ್ಮ ಚರ್ಮದ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಮೂಳೆಗಳನ್ನು ಸದೃಢವಾಗಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಜ್ಜಿಗೆಗೆ ಉಪ್ಪು ಸೇರಿಸಬಾರದು :
ಬೇಸಿಗೆಯಲ್ಲಿ ಹೆಚ್ಚಿನವರು ಆಹಾರ ಜೀರ್ಣವಾಗಲು ಮೊಸರು, ಮಜ್ಜಿಗೆ ಸೇವಿಸುತ್ತಾರೆ. ಅನೇಕ ಮನೆಗಳಲ್ಲಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ಮಜ್ಜಿಗೆ ಕುಡಿಯುವ ಪರಿಪಾಠ ಇರುತ್ತದೆ. ಮಜ್ಜಿಗೆ ಸೇವನೆ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಮಜ್ಜಿಗೆಗೆ ಮಸಾಲೆ, ಉಪ್ಪು, ಪುದೀನ ಚಟ್ನಿ ಮತ್ತು ಬ್ಲಾಕ್ ಸಾಲ್ಟ್ ಇತ್ಯಾದಿಗಳನ್ನು ಸಹ ಬೆರೆಸಲಾಗುತ್ತದೆ. ಇದರಿಂದ ಮಜ್ಜಿಗೆಯ ರುಚಿ ಹೆಚ್ಚುತ್ತದೆ. ಆದರೆ ಆಹಾರ ತಜ್ಞರ ಮಾತನ್ನು ಕೇಳುವುದಾದರೆ ಮಜ್ಜಿಗೆಗೆ ಉಪ್ಪು ಸೇರಿಸಬಾರದು. ಏಕೆಂದರೆ ಉಪ್ಪು ಬೆರೆಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ : ತುಳಸಿ ಎಲೆಯಿಂದಾಗುವ ಸೌಂದರ್ಯ ಪ್ರಯೋಜನಗಳಿವು..!
ಆಹಾರ ಹಾಗೂ ಪೌಷ್ಟಿಕಾಂಶ ತಜ್ಞರು ಹೇಳುವುದೇನು ? :
ಮಜ್ಜಿಗೆ ಅಥವಾ ಹಾಲಿಗೆ ಉಪ್ಪು ಬೆರೆಸಿ ಸೇವಿಸಿದರೆ ಆರೋಗ್ಯ ಕೆಡುತ್ತದೆ ಎನ್ನುತ್ತಾರೆ ಆಹಾರ ಹಾಗೂ ಪೌಷ್ಟಿಕಾಂಶ ತಜ್ಞರು. ಉಪ್ಪುಸಹಿತ ಮಜ್ಜಿಗೆ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಸರು ಸಾಮಾನ್ಯವಾಗಿ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮೊಸರಿನ ಹೊರತಾಗಿ, ಈ ಗುಣಲಕ್ಷಣಗಳು ಮಜ್ಜಿಗೆ ಮತ್ತು ಅದರಿಂದ ತಯಾರಿಸಿದ ಲಸ್ಸಿಯಲ್ಲಿಯೂ ಕಂಡುಬರುತ್ತವೆ. ಆದರೆ, ಉಪ್ಪನ್ನು ಮಜ್ಜಿಗೆಗೆ ಸೇರಿಸಿದಾಗ, ಅದು ಪ್ರೋಬಯಾಟಿಕ್‌ಗಳ ಸಕ್ರಿಯಗೊಳಿಸುವಿಕೆ ಮತ್ತು ಪರಿಣಾಮಕಾರಿ ತತ್ವವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಉಪ್ಪು ಬೆರೆಸಿದ ಮಜ್ಜಿಗೆಯನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಸಾಮಾನ್ಯವಾಗಿ, ಬಿಳಿ ಉಪ್ಪು ಸೇರಿಸಿದ ನಂತರ, ಮಜ್ಜಿಗೆಯಲ್ಲಿರುವ ಬ್ಯಾಕ್ಟೀರಿಯಾಗಳು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತವೆ ಮಾತ್ರವಲ್ಲ ಆ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಈ ಕಾರಣಕ್ಕಾಗಿ ಮಜ್ಜಿಗೆಗೆ ಉಪ್ಪು ಹಾಕಿ ಕುಡಿಯುವುದರಿಂದ ದೇಹದಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ ಮತ್ತು ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ : ಬಾಳೆಹಣ್ಣನ್ನು ಚರ್ಮಕ್ಕಾಗಿ ಬಳಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಮಜ್ಜಿಗೆ ಕುಡಿಯಲು ಸರಿಯಾದ ಮಾರ್ಗ ಯಾವುದು? :
ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಹೌದು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಅದರ ಪ್ರಯೋಜನ ದೇಹಕ್ಕೆ ಸಿಗುತ್ತದೆ. ಮಜ್ಜಿಗೆ ಕುಡಿಯುವ ಮುನ್ನ ಅದು ಎಷ್ಟು ತಂಪಾಗಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅವಶ್ಯಕ. ಮಜ್ಜಿಗೆಯನ್ನು ಫ್ರಿಜ್ ನಲ್ಲಿಟ್ಟು ಕುಡಿಯುವ ಅಭ್ಯಾಸ ಬೇಡ. ಫ್ರಿಜ್ ನಲ್ಲಿಟ್ಟು ತಣ್ಣಗಾದ ಮಜ್ಜಿಗೆ ಕುಡಿದರೆ ತಂಪಿನ ಅನುಭವ ಸಿಗುತ್ತದೆ ನಿಜ, ಆದರೆ ಮಜ್ಜಿಗೆ ಕುಡಿದ ಖುಷಿ ಬಹಳ ಹೊತ್ತು ಇರುವುದಿಲ್ಲ. ಇರುವುದಿಲ್ಲ. ಮಜ್ಜಿಗೆಯನ್ನು ಸಾಮಾನ್ಯ ತಾಪಮಾನದಲ್ಲಿಯೇ ಇರಲು ಬಿಡಿ. ಇದಲ್ಲದೇ ಹಸಿ ತರಕಾರಿಗಳು, ಸಲಾಡ್ ಅಥವಾ ಹಣ್ಣುಗಳಂತಹ ಕೆಲವು ಆಹಾರಗಳನ್ನು ಮಜ್ಜಿಗೆಯೊಂದಿಗೆ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಈ ಆಹಾರಗಳು ಮಜ್ಜಿಗೆಯೊಂದಿಗೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ದೇಹಕ್ಕೆ ಪ್ರಯೋಜನಕಾರಿಯಾಗಿರುತ್ತದೆ.
ಬೇಸಿಗೆಯಲ್ಲಿ ನಿತ್ಯ ಸೇವಿಸಬೇಕು ಮಜ್ಜಿಗೆ :
ಮಜ್ಜಿಗೆಯಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶವಿರುತ್ತದೆ. ಒಂದು ಕಪ್ (245 ಮಿಲಿ) ಮಜ್ಜಿಗೆ 98 ಕ್ಯಾಲೋರಿಗಳು, 8 ಗ್ರಾಂ ಪ್ರೋಟೀನ್, 3 ಗ್ರಾಂ ಫೈಬರ್, 22% ಕ್ಯಾಲ್ಸಿಯಂ, 16% ಸೋಡಿಯಂ ಮತ್ತು 22% ವಿಟಮಿನ್ B12 ಅನ್ನು ಒದಗಿಸುತ್ತದೆ.
ಇದನ್ನೂ ಓದಿ : Health Tips: ಈ ಮೂರು ಕಾರಣಗಳಿಂದ ತುಂಬಾ ವಿಶೇಷವಾಗಿದೆ ಬ್ಲಾಕ್ ಕಾಫಿ ಸೇವನೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.