Radish Side Effect: ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ: ವಿಷವಾಗಿ ಪರಿಣಮಿಸುತ್ತೆ ಎಚ್ಚರ
Radish Side Effect: ಆದರೆ ಕೆಲವು ಸಂದರ್ಭಗಳಲ್ಲಿ ಈ ಮೂಲಂಗಿಯು ಪ್ರಯೋಜನದ ಬದಲಾಗಿ ಹಾನಿ ಮಾಡಲು ಪ್ರಾರಂಭಿಸುತ್ತದೆ. ಅದಕ್ಕೆ ಕಾರಣ ಮೂಲಂಗಿ ಸೇವಿಸಿದ ಬಳಿಕ ಕೆಲವು ಪದಾರ್ಥಗಳನ್ನು ತಿನ್ನುವುದು. ಈ ರೀತಿ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೂಲಂಗಿಯೊಂದಿಗೆ ಅಥವಾ ಮೂಲಂಗಿ ತಿಂದ ನಂತರ ಯಾವ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಯೋಣ.
Radish Side Effect: ಕೆಲವರಿಗೆ ಮೂಲಂಗಿ ಎಂದರೆ ಬಹಳ ಪ್ರೀತಿ. ಇನ್ನೂ ಕೆಲವರಿಗೆ ಅದರ ವಾಸನೆಯೇ ಇಷ್ಟವಾಗೋದಿಲ್ಲ. ಆದರೆ ಇಷ್ಟಪಡುವವರು ಮಾತ್ರ ಸಲಾಡ್ ರೂಪದಲ್ಲಿ ಮೂಲಂಗಿಗಳನ್ನು ಸೇವಿಸುತ್ತಾರೆ. ಈ ತರಕಾರಿ ತಿನ್ನಲು ಮಾತ್ರವಲ್ಲ. ಆರೋಗ್ಯಕ್ಕೂ ಬಹಳ ಉತ್ತಮ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿ ಇರುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Asthma Symptoms: ಚಳಿಗಾಲದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಆದರೆ ಕೆಲವು ಸಂದರ್ಭಗಳಲ್ಲಿ ಈ ಮೂಲಂಗಿಯು ಪ್ರಯೋಜನದ ಬದಲಾಗಿ ಹಾನಿ ಮಾಡಲು ಪ್ರಾರಂಭಿಸುತ್ತದೆ. ಅದಕ್ಕೆ ಕಾರಣ ಮೂಲಂಗಿ ಸೇವಿಸಿದ ಬಳಿಕ ಕೆಲವು ಪದಾರ್ಥಗಳನ್ನು ತಿನ್ನುವುದು. ಈ ರೀತಿ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೂಲಂಗಿಯೊಂದಿಗೆ ಅಥವಾ ಮೂಲಂಗಿ ತಿಂದ ನಂತರ ಯಾವ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಯೋಣ.
ಮೂಲಂಗಿ ಮತ್ತು ಸೌತೆಕಾಯಿ: ಮೂಲಂಗಿ ಮತ್ತು ಸೌತೆಕಾಯಿ ಎರಡನ್ನೂ ಸಲಾಡ್ ಆಗಿ ಸೇವಿಸಲಾಗುತ್ತದೆ. ಆದರೆ ಮೂಲಂಗಿಯೊಂದಿಗೆ ಸೌತೆಕಾಯಿಯನ್ನು ತಿನ್ನುವುದು ಹಾನಿಕಾರಕ. ಸೌತೆಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನುವುದರಿಂದ, ನೀವು ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಹಾಗಲಕಾಯಿ ಮತ್ತು ಮೂಲಂಗಿ: ಹಾಗಲಕಾಯಿಯೊಂದಿಗೆ ಅಥವಾ ಹಾಗಲಕಾಯಿ ತಿಂದ ನಂತರ ಮೂಲಂಗಿಯನ್ನು ತಿಂದರೆ ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು.
ಮೂಲಂಗಿ ಮತ್ತು ಹಾಲು: ಮೂಲಂಗಿಯೊಂದಿಗೆ ಹಾಲಿನಿಂದ ಮಾಡಿದ ವಸ್ತುಗಳನ್ನು ಸೇವಿಸಬಾರದು. ಮೂಲಂಗಿಯ ನಂತರ ಹಾಲಿನಿಂದ ಮಾಡಿದ ತಿನಿಸುಗಳನ್ನು ತಿಂದರೆ ಗಂಭೀರ ಚರ್ಮದ ಕಾಯಿಲೆಗಳನ್ನು ಎದುರಿಸಬೇಕಾದೀತು.
ಕಿತ್ತಳೆ ಜೊತೆ ಮೂಲಂಗಿ: ಕಿತ್ತಳೆ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು. ಕಿತ್ತಳೆಯೊಂದಿಗೆ ಮೂಲಂಗಿಯನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಕಿತ್ತಳೆ ಜೊತೆ ಮೂಲಂಗಿಯನ್ನು ತಿನ್ನುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.
ಮೂಲಂಗಿ ಮತ್ತು ಚಹಾ: ಅನೇಕ ಜನರು ಚಹಾದೊಂದಿಗೆ ಸಲಾಡ್ ತಿನ್ನುತ್ತಾರೆ. ಸಲಾಡ್ನಲ್ಲಿ ಮೂಲಂಗಿ ಕೂಡ ಸೇರಿರುತ್ತದೆ. ಚಹಾದೊಂದಿಗೆ ಮೂಲಂಗಿಯನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೂಲಂಗಿಯ ನಂತರ ಟೀ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: Weight Loss Tips: ವ್ಯಾಯಾಮದ ನಂತರ ಈ 5 ಆಹಾರ ಸೇವಿಸಿ, 3 ತಿಂಗಳಲ್ಲಿ ತೂಕ ಇಳಿಸಿಕೊಳ್ಳಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.