Night Food Tips: ನಮ್ಮ ತಪ್ಪು ಆಹಾರ ಪದ್ಧತಿಯಿಂದ ಹಾಗೂ ಜೀವನಶೈಲಿಯ ಕಾರಣ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ.  ಇನ್ನೊಂದೆಡೆ ನೀವು ಆರೋಗ್ಯಕರ ಆಹಾರವನ್ನೆ ಸೇವಿಸುತ್ತಿರುವಿರಿ. ಆದರೂ ಕೂಡ ಕಾಯಿಲೆಗಳು ನಿಮ್ಮನ್ನು ಸುತ್ತುವರೆದಿವೆ ಎಂದರೆ, ನಿಮ್ಮ ಹೊಟ್ಟೆಯಲ್ಲಿ ಯಾವುದೋ ಒಂದು ಸಮಸ್ಯೆ ಇದೆ ಅಥವಾ ನೀವು ಏನಾದರೂ ತಪ್ಪಾಗಿ ತಿನ್ನುತ್ತಿದ್ದೀರಿ ಎಂದು ಅರ್ಥ. ಹೌದು ಸರಿಯಾಗಿಲ್ಲದ ವೇಳೆಯಲ್ಲಿ ನೀವು ಒಳ್ಳೆಯ ಆಹಾರವನ್ನು ಸೇವಿಸಿದರು ಕೂಡ ಅದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಇನ್ನೊಂದೆಡೆ ನಿಮಗೆ ರಾತ್ರಿಯ ಊಟದ ಬಳಿಕವೂ ಕೂಡ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದರೆ ಅದರ ಕಾರಣವೂ ನೀವು  ರಾತ್ರಿ ಸೇವಿಸುವ ಆಹಾರ ಅಥವಾ ಪಾನೀಯ ಕೂಡ ಆಗಿರಬಹುದು. ರಾತ್ರಿ ಮಲಗುವಾಗ ಅಸಿಡಿಟಿ, ಗ್ಯಾಸ್, ಎದೆಯುರಿ ಮತ್ತು ನಿದ್ರಾಹೀನತೆ, ನಿಮಗೆ ಅಡ್ಡಿಪಡಿಸಿದರೆ, ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು, ಇಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ನೀವು ಯಾವ ಆಹಾರ ಸೇವನೆಯನ್ನು ನೀವು ತಪ್ಪಿಸಬೇಕು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಮಲಗುವ ಮುನ್ನ ಈ ಆಹಾರವನ್ನು ಸೇವಿಸಬೇಡಿ
ಭಾರವಾದ ಆಹಾರ ಸೇವನೆಯನ್ನು ತಪ್ಪಿಸಿ

ಭಾರವಾದ ಆಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ತಿಳಿದಿರಬೇಕು. ಅದಕ್ಕಾಗಿಯೇ ರಾತ್ರಿಯಲ್ಲಿ ಎಣ್ಣೆಯುಕ್ತ ಆಹಾರ ಮತ್ತು ಕೊಬ್ಬಿನ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ರಾತ್ರಿಯಲ್ಲಿ ಎಣ್ಣೆಯುಕ್ತ ಮತ್ತು ಭಾರವಾದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿಯೇ ರಾತ್ರಿ ಮಲಗುವ ಮುನ್ನ ಭಾರವಾದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಕೆಫೀನ್
ಚಹಾ ಮತ್ತು ಕಾಫಿಯಲ್ಲಿ ಬಹಳಷ್ಟು ಕೆಫೀನ್ ಇರುತ್ತದೆ, ಹೀಗಾಗಿ ನೀವು ರಾತ್ರಿ ಮಲಗುವ ಮೊದಲು ಕೆಫೀನ್ ಹೊಂದಿರುವ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈ ವಸ್ತುಗಳು ನಿಮ್ಮ ನಿದ್ದೆಯನ್ನು ಹಾಳುಮಾಡುವುದಲ್ಲದೆ, ಇವುಗಳ ಸೇವನೆಯಿಂದ ನಿಮ್ಮ ಹೊಟ್ಟೆಯೂ ಕೆಡಬಹುದು.


ಇದನ್ನೂ ಓದಿ-Circadian Rhythm Fasting: ಸ್ಥೂಲಕಾಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ, ಈ ವಿಧಾನದಿಂದ ತೂಕ ಇಳಿಕೆ ಮಾಡಿ ನೋಡಿ!

ಸಿಹಿ ವಸ್ತುಗಳು
ರಾತ್ರಿ ಮಲಗುವ ಮುನ್ನ ಸಿಹಿ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ಹೊಟ್ಟೆಯನ್ನು ಸಹ ತೊಂದರೆಗೊಳಗಾಗಬಹುದು. ಹೀಗಾಗಿ ರಾತ್ರಿ ಮಲಗುವ ಮೊದಲು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.


ಇದನ್ನೂ ಓದಿ-Fruit Eating Rules: ಹಣ್ಣುಗಳನ್ನು ಸೇವಿಸುವ ಈ ಮೂರು ನಿಯಮಗಳನ್ನು ತಪ್ಪದೆ ಅನುಸರಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.