Summer Tips: ಬೇಸಿಗೆ ಕಾಲದಲ್ಲಿ ನಿತ್ಯ ಜಲ್ ಜೀರಾ ಸೇವನೆಯಿಂದಾಗುವ ಲಾಭಗಳು ನಿಮಗೆ ಗೊತ್ತಾ?

Summer Health Tips - ಬೇಸಿಗೆ ಕಾಲದಲ್ಲಿ ನಾವು ನಮ್ಮ ದೇಹವನ್ನು ತಂಪಾಗಿಡುವುದು ತುಂಬಾ ಮುಖ್ಯ. ಇದೇ ಕಾರಣದಿಂದ ಜನರು ವಿವಿಧ ರೀತಿಯ ಪಾನೀಯಗಳತ್ತ ಮೊರೆಹೋಗುತ್ತಾರೆ. ಆದರೆ ಬೇಸಿಗೆಯಲ್ಲಿ ಜಲ್ಜೀರಾ ಕುಡಿಯಲೇಬೇಕು ಎಂದು ನಿಮಗೆ ತಿಳಿದಿದೆಯೇ? ಇದರ ಸೇವನೆಯಿಂದ ನೀವು ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು.  

Written by - Nitin Tabib | Last Updated : May 2, 2023, 06:33 PM IST
  • ಬೇಸಿಗೆಯಲ್ಲಿ ಜಲ್ಜೀರಾ ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗುವುದಿಲ್ಲ ಮತ್ತು
  • ಉಷ್ಣತೆಯ ಹೊಡೆತದಿಂದ ನಿಮ್ಮನ್ನು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
  • ಮತ್ತೊಂದೆಡೆ ಇದನ್ನು ದಿನನಿತ್ಯ ಸೇವಿಸಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ.
  • ಜಲಜೀರಾ ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.
Summer Tips: ಬೇಸಿಗೆ ಕಾಲದಲ್ಲಿ ನಿತ್ಯ ಜಲ್ ಜೀರಾ ಸೇವನೆಯಿಂದಾಗುವ ಲಾಭಗಳು ನಿಮಗೆ ಗೊತ್ತಾ? title=
ಜಲ್ಜೀರಾ ಆರೋಗ್ಯ ಲಾಭಗಳು!

Summer Tips: ಬೇಸಿಗೆ ಕಾಲದಲ್ಲಿ ನಾವು ನಮ್ಮ ದೇಹವನ್ನು ತಂಪಾಗಿಡುವುದು ತುಂಬಾ ಮುಖ್ಯ. ಇದೇ ಕಾರಣದಿಂದ ಜನರು ವಿವಿಧ ರೀತಿಯ ಪಾನೀಯಗಳತ್ತ ಮೊರೆಹೋಗುತ್ತಾರೆ. ಆದರೆ ಬೇಸಿಗೆಯಲ್ಲಿ ಜಲ್ಜೀರಾ ಕುಡಿಯಲೇಬೇಕು ಎಂದು ನಿಮಗೆ ತಿಳಿದಿದೆಯೇ? ಇದರ ಸೇವನೆಯಿಂದ ನೀವು ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು. ಜಲ್ಜೀರಾ ಕುಡಿಯಲು ತುಂಬಾ ರುಚಿಯಾಗಿರುತ್ತದೆ ಮತ್ತು ಇದನ್ನು ಸೇವಿಸುವುದರಿಂದ ನಿಮ್ಮನ್ನು ನೀವು ಆರೋಗ್ಯಕರವಾಗಿರಿಸಬಹುದು. ಬೇಸಿಗೆಯಲ್ಲಿ ಜಲ್ಜೀರಾ ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗುವುದಿಲ್ಲ ಮತ್ತು ಉಷ್ಣತೆಯ ಹೊಡೆತದಿಂದ ನಿಮ್ಮನ್ನು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಮತ್ತೊಂದೆಡೆ ಇದನ್ನು ದಿನನಿತ್ಯ ಸೇವಿಸಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ. ಜಲಜೀರಾ ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.

ಬೇಸಿಗೆಯಲ್ಲಿ ಜಲ್ಜೀರಾ ಕುಡಿಯುವುದರಿಂದ ಆಗುವ ಪ್ರಯೋಜನಗಳು
ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ

ದೇಹವನ್ನು ಆರೋಗ್ಯವಾಗಿಡಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ನಾವು ಪ್ರತಿದಿನ ಒಂದು ಲೋಟ ಜಲ್ಜೀರಾವನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಏಕೆಂದರೆ ಇದು ಸಾಕಷ್ಟು ವಿಟಮಿನ್ ಸಿ ಅನ್ನು ಹೊಂದಿದ್ದು ಅದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ
ಬೇಸಿಗೆಯಲ್ಲಿ ಜೀರ್ಣಕಾರಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಜಲ್ಜೀರಾ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ.ಇನ್ನೊಂದೆಡೆ, ನೀವು ಪ್ರತಿದಿನ ಜಲ್ಜೀರಾವನ್ನು ಸೇವಿಸಿದರೆ, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರಾಗುತ್ತವೆ.

ಶಾಖದ ಸಮಸ್ಯೆ ದೂರಗುತ್ತದೆ
ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದಾಗಿ, ಜನರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ, ದೇಹವನ್ನು ತೇವಾಂಶದಿಂದ ಇಡಬೇಕು. ಇದಕ್ಕಾಗಿ ನೀವು ಪ್ರತಿದಿನ ಜಲ್ಜೀರಾವನ್ನು ಸೇವಿಸಬಹುದು. ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು ಇದು ಸನ್ ಸ್ತ್ರೋಕ್ ನಿಂದ ರಕ್ಷಿಸುವ ಕೆಲಸ ಮಾಡುತ್ತದೆ.

ಇದನ್ನೂ ಓದಿ-Deadly Disease: ಈ ಒಂದೇ ಒಂದು ಟೆಸ್ಟ್ ಮಾಡಿಸಿ ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯಗಳಿಂದ ಪಾರಾಗಿ!

ತೂಕ ಇಳಿಕೆ
ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದಾರೆ, ಜಲ್ಜೀರಾವನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ. ಏಕೆಂದರೆ ಇದರಲ್ಲಿ ಕ್ಯಾಲೋರಿಗಳ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಆದ್ದರಿಂದಲೇ ಇದನ್ನು ಕುಡಿದರೆ ಬೊಜ್ಜು ಹೆಚ್ಚಾಗುವುದಿಲ್ಲ, ಇದರೊಂದಿಗೆ ಹಸಿವೆಯೂ ಆಗುವುದಿಲ್ಲ.

ಇದನ್ನೂ ಓದಿ-Fat Reducing Tips: ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ, ಹೊಟ್ಟೆ ಬೊಜ್ಜು ಕರಗಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News