Avoid These Foods During Kidney Stone: ಭಾರತದಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೆಚ್ಚುತ್ತಿದೆ. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಕಿಡ್ನಿ ನಮ್ಮ ದೇಹದ ಬಹುಮುಖ್ಯ ಭಾಗವಾಗಿದೆ. ಅದರ ಮುಖ್ಯ ಕಾರ್ಯವೆಂದರೆ ರಕ್ತವನ್ನು ಫಿಲ್ಟರ್ ಮಾಡುವುದು, ಈ ಪ್ರಕ್ರಿಯೆಯು ನಡೆದಾಗ, ಕ್ಯಾಲ್ಸಿಯಂ, ಸೋಡಿಯಂ ಮತ್ತು ಇತರ ಅನೇಕ ಖನಿಜಗಳ ಕಣಗಳು ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತವೆ. ಈ ವಸ್ತುಗಳ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದಾಗ ಮತ್ತು ಸಂಗ್ರಹವಾದ ನಂತರ ಅವು ಕಲ್ಲು ಎಂದು ಕರೆಯಲ್ಪಡುವ ಕಲ್ಲಿನ ಆಕಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತವೆ. ಮೂತ್ರಪಿಂಡದ ಕಲ್ಲಿನ ದೂರುಗಳನ್ನು ಹೊಂದಿರುವ ಜನರು ತಮ್ಮ ಆಹಾರ ಮತ್ತು ಪಾನೀಯದಲ್ಲಿ ಬಹಳ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅಪಾಯವು ಹೆಚ್ಚಾಗಬಹುದು.


COMMERCIAL BREAK
SCROLL TO CONTINUE READING

ಕಿಡ್ನಿ ಸ್ಟೋನ್‌ ಸಮಸ್ಯೆಯ ಸಂದರ್ಭದಲ್ಲಿ, ವಿಟಮಿನ್ ಸಿ ಹೇರಳವಾಗಿ ಕಂಡುಬರುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ಈ ಕಾರಣದಿಂದಾಗಿ, ಹೆಚ್ಚಿನ ಕಲ್ಲುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಿಂಬೆ, ಪಾಲಕ್, ಕಿತ್ತಳೆ, ಸಾಸಿವೆ ಸೊಪ್ಪು, ಕಿವಿ ಮತ್ತು ಪೇರಲದಂತಹ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸುವುದು ಉತ್ತಮ.


ಇದನ್ನೂ ಓದಿ:  ಪಾದಗಳಲ್ಲಿನ ಈ ಬದಲಾವಣೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿರುವ ಸೂಚನೆ !


ಮೂತ್ರಪಿಂಡದ ಕಲ್ಲುಗಳ ದೂರುಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಡಿಹೈಡ್ರೇನ್ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕೆಫೀನ್ ದೇಹಕ್ಕೆ ಹಾನಿಕಾರಕ. ಅದಕ್ಕಾಗಿಯೇ ತಂಪು ಪಾನೀಯಗಳು ಮತ್ತು ಚಹಾ, ಕಾಫಿಗಳು ಕಿಡ್ನಿ ಸ್ಟೋನ್‌ ರೋಗಿಗಳಿಗೆ ವಿಷಕ್ಕೆ ಸಮದಂತೆ. ಏಕೆಂದರೆ ಅವುಗಳು ಬಹಳಷ್ಟು ಕೆಫೀನ್ ಅನ್ನು ಹೊಂದಿರುತ್ತವೆ.


ಮೂತ್ರಪಿಂಡದ ಕಲ್ಲುಗಳ ಬಗ್ಗೆ ದೂರುಗಳನ್ನು ಹೊಂದಿರುವ ಜನರು ಉಪ್ಪು ಮತ್ತು ಉಪ್ಪಿನಂಶದ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಅವುಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ, ಇದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.


ಮಾಂಸ, ಮೀನು ಮತ್ತು ಮೊಟ್ಟೆಗಳು ಕಿಡ್ನಿ ಸ್ಟೋನ್ ರೋಗಿಗಳಿಗೆ ಒಳ್ಳೆಯದಲ್ಲ ಏಕೆಂದರೆ ಅವುಗಳು ಬಹಳಷ್ಟು ಪ್ರೊಟೀನ್ ಅನ್ನು ಒಳಗೊಂಡಿರುತ್ತವೆ ಮತ್ತು ದೇಹಕ್ಕೆ ಈ ಪೋಷಕಾಂಶವು ಎಷ್ಟು ಮುಖ್ಯವಾದುದಾದರೂ, ಇದು ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: ಯುವಕರಲ್ಲಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಉಂಟಾಗುತ್ತಿದೆ ಈ ಸಮಸ್ಯೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.