Warning Signs on face: ನೀವು ಅನಾರೋಗ್ಯಕ್ಕೆ ಒಳಗಾಗುವ ಮೊದಲು ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ. ಹಲವು ಬಾರಿ ಮುಖ ನೋಡಿಯೇ ರೋಗ ಏನೆಂದು ಗೊತ್ತಾಗುತ್ತದೆ. ಮುಖದ ಮೇಲೆ ರೋಗಲಕ್ಷಣಗಳು ಗೋಚರಿಸುವ ಕೆಲವು ಕಾಯಿಲೆಗಳಿವೆ. ನೀವು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಮುಖದಲ್ಲಿ ಗೋಚರಿಸುವ ಬದಲಾವಣೆಗಳು ನಿಮ್ಮ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಮುಖದಲ್ಲಿ ಕಂಡುಬರುವ ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ತಿಳಿಯಿರಿ.


COMMERCIAL BREAK
SCROLL TO CONTINUE READING

ಮುಖದಲ್ಲಿ ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ 


ಒಣ ತುಟಿಗಳು : ಚಳಿಗಾಲದಲ್ಲಿ ತುಟಿ ಅಥವಾ ತ್ವಚೆ ಒಣಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲೂ ಈ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಏಕೆಂದರೆ ಕೆಲವೊಮ್ಮೆ ಮಧುಮೇಹದ ಲಕ್ಷಣವಾಗಿರಬಹುದು. ಅದಕ್ಕೇ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.


ಇದನ್ನೂ ಓದಿ: Side Effects of Sugar: ಅತಿಯಾದ ಸಕ್ಕರೆ ಸೇವನೆ ಮಧುಮೇಹ ಮಾತ್ರವಲ್ಲ ಈ ಮಾರಕ ಕಾಯಿಲೆಗೂ ಕಾರಣ!!


ಮುಖದ ಕೂದಲು : ಕೆಲವೊಮ್ಮೆ ಮಹಿಳೆಯರ ಮುಖ ಅಥವಾ ದವಡೆಯ ಮೇಲೆ ಕೂದಲು ಬೆಳೆಯುತ್ತದೆ. ನೀವು ಅದನ್ನು ನಿರ್ಲಕ್ಷಿಸಿದರೆ ನಂತರದಲ್ಲಿ ಸಮಸ್ಯೆ ಉಂಟಾಗಬಹುದು. ಯಾಕೆಂದರೆ ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದ ಇಂತಹ ಸಮಸ್ಯೆ ಉಂಟಾಗುತ್ತದೆ. ಓವರಿ ಸಿಂಡ್ರೋಮ್ ಸಮಸ್ಯೆಯಿಂದಲೂ ಈ ರೀತಿಯಾಗಬಹುದು. ಅದಕ್ಕಾಗಿಯೇ ಅದನ್ನು ನಿರ್ಲಕ್ಷಿಸಬೇಡಿ,.


ಕಣ್ಣಿನ ಸುತ್ತಲೂ ಡಾರ್ಕ್‌ ಸರ್ಕಲ್ :‌ ಕೆಲವೊಮ್ಮೆ ಕಣ್ಣುಗಳ ಕೆಳಗೆ ಕಪ್ಪು ಅಥವಾ ಊತದಂತಹ ಸಮಸ್ಯೆ ಕಾಣುತ್ತದೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಕಣ್ಣುಗಳ ಕೆಳಗೆ ಊತ ಅಥವಾ ಕಪ್ಪು ಬಣ್ಣವು ನಿಮ್ಮ ಕಳಪೆ ಆರೋಗ್ಯದ ಕಾರಣದಿಂದಾಗಿರಬಹುದು. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.


ಇದನ್ನೂ ಓದಿ: ಮಹಿಳೆಯರೇ.. ಹವಾಮಾನ ಬದಲಾವಣೆಯಿಂದಾಗುವ ಸೋಂಕುಗಳಿವು, ಹೀಗಿರಲಿ ಮುನ್ನೆಚ್ಚರಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.