ಮಹಿಳೆಯರೇ.. ಹವಾಮಾನ ಬದಲಾವಣೆಯಿಂದಾಗುವ ಸೋಂಕುಗಳಿವು, ಹೀಗಿರಲಿ ಮುನ್ನೆಚ್ಚರಿಕೆ!

Infections due to climate change: ಋತುಗಳ ಬದಲಾವಣೆ ಸಂದರ್ಭದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. 

Written by - Zee Kannada News Desk | Last Updated : Jun 15, 2023, 03:16 PM IST
  • ಹವಾಮಾನದಲ್ಲಾಗುವ ಬದಲಾವಣೆಗಳು ಆರೋಗ್ಯ ಸವಾಲುಗಳನ್ನು ತಂದೊಡ್ಡುತ್ತವೆ
  • ಹವಾಮಾನ ಬದಲಾವಣೆಯಿಂದಾಗುವ ಸೋಂಕುಗಳಿವು
  • ಅವುಗಳಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು
ಮಹಿಳೆಯರೇ.. ಹವಾಮಾನ ಬದಲಾವಣೆಯಿಂದಾಗುವ ಸೋಂಕುಗಳಿವು, ಹೀಗಿರಲಿ ಮುನ್ನೆಚ್ಚರಿಕೆ!  title=

Infections due to climate change: ಹವಾಮಾನ ಮತ್ತು ವಾತಾವರಣದ ಕಾರಣದಿಂದಾಗಿ ಬೆಂಗಳೂರು ಅನೇಕ ಜನರಿಗೆ ಅಚ್ಚುಮೆಚ್ಚಿನ ನಗರವಾಗಿದೆ. ಆದಾಗ್ಯೂ, ಹವಾಮಾನವು ಎಷ್ಟೇ ಸುಂದರವಾಗಿದ್ದರೂ ಸಹ ಆಗಾಗ್ಗೆ ಆಗುವ ಬದಲಾವಣೆಗಳು ತಮ್ಮದೇ ಆದ ವಿಶಿಷ್ಟ ಆರೋಗ್ಯ ಸವಾಲುಗಳನ್ನು ತಂದೊಡ್ಡುತ್ತವೆ. ಋತುಗಳು ಬದಲಾವಣೆಯಾದಾಗ ಎದುರಾಗಬಹುದಾದ ಸಂಭಾವ್ಯ ಆರೋಗ್ಯ ಅಪಾಯಗಳು ಅಥವಾ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅವುಗಳಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು. 

1. ಸಾಮಾನ್ಯ ಶೀತ ಮತ್ತ ಜ್ವರ : ಕಾಲೋಚಿತವಾದ ಬದಲಾವಣೆಯೊಂದಿಗೆ ಬರುವ ಸಾಮಾನ್ಯ ಆರೋಗ್ಯದ ಅಪಾಯವೆಂದರೆ ಸಾಮಾನ್ಯ ಶೀತ ಮತ್ತು ಜ್ವರ ಮಹಿಳೆಯರು ಸಾಮಾನ್ಯವಾಗಿ ಕೌಟುಂಬಿಕ ಜೀವನ ಮತ್ತು ಅವರ ವೃತ್ತಿಜೀವನದ ನಡುವೆ ತೊಳಲಾಟ ಅನುಭವಿಸುತ್ತಿರುತ್ತಾರೆ. ಅವರು ಸಾಮಾನ್ಯವಾಗಿ ತಣ್ಣೀರು ಮತ್ತು ಹವಾನಿಯಂತ್ರಿತ ಕೊಠಡಿಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇದರಿಂದಾಗಿ ಅವರಿಗೆ ಸಾಮಾನ್ಯವಾಗಿ ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ-ಆರೈಕೆ ಮಾಡಿಕೊಳ್ಳುವುದರತ್ತ ಹೆಚ್ಚಿನ ಆದ್ಯತೆ ನೀಡುವುದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು, ಸಮತೋಲಿತ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವುದು ಹಾಗೂ ತಮ್ಮ ರೋಗನಿರೋಧಕ ಶಕ್ತಿಯನ್ನು ಬಲವರ್ಧನೆಪಡಿಸಿಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.

2. ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ಸ್ (UTIs): ನಿರ್ಜಲೀಕರಣ ಮತ್ತು ಕಳಪೆ ನೈರ್ಮಲ್ಯದ ಜೊತೆಗೆ ಹವಾಮಾನ ಬದಲಾವಣೆಗಳು ಮಹಿಳೆಯರಲ್ಲಿ ಮೂತ್ರದ ಸೋಂಕಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಮೂತ್ರನಾಳವನ್ನು ಪ್ರವೇಶಿಸುವ ಯಾವುದೇ ಬ್ಯಾಕ್ಟೀರಿಯಾವನ್ನು ಹೊರ ಹಾಕಲು ಅಗತ್ಯವಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯುವುದು, ಸಮರ್ಪಕವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ:  ಎಕ್ಕದ ಎಲೆಗಳನ್ನು ಈ ರೀತಿ ಬಳಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?

3. ಅಲರ್ಜಿಗಳು ಮತ್ತು ಅಸ್ತಮಾ: ಹಲವಾರು ಹಾರ್ಮೋನ್ ಗಳ ಕಾರಣದಿಂದ ಮಹಿಳೆಯರು ಸಾಮಾನ್ಯವಾಗಿ ಅಲರ್ಜಿ ಮತ್ತು ಅಸ್ತಮಾದಂತಹ ರೋಗಗಳಿಗೆ ಬಹುಬೇಗನೆ ತುತ್ತಾಗುತ್ತಾರೆ. ಋತುಗಳಲ್ಲಿ ಬದಲಾವಣೆಯಾಗುವುದರಿಂದ ಈ ರೋಗಗಳ ಪರಿಸ್ಥಿತಿ ಬಿಗಡಾಯಿಸುತ್ತದೆ. ಇದರ ಪರಿಣಾಮ ಉಬ್ಬಸ, ಉಸಿರಾಟದ ತೊಂದರೆ ಮತ್ತು ಅಲರ್ಜಿಕ್ ರಿನಿಟಿಸ್ ನಂತಹ ಲಕ್ಷಣಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಈ ಪರಿಸ್ಥಿತಿಗಳು ಎದುರಾಗುವುದರ ಬಗ್ಗೆ ತಿಳಿದುಕೊಂಡಿರಬೇಕು ಮತ್ತು ಅಲರ್ಜಿಗಳಾಗುವುದನ್ನು ತಪ್ಪಿಸಲು ಮುಂಜಾಗ್ರತೆ ವಹಿಸಬೇಕು. ಇದಕ್ಕಾಗಿ ತಮ್ಮ ವಾಸಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಏರ್ ಪ್ಯೂರಿಫೈಯರ್ ಗಳನ್ನು ಬಳಸುವುದು ಮತ್ತು ಸೂಕ್ತ ನಿರ್ವಹಣೆಗಾಗಿ ತಜ್ಞ ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

4. ಮುಟ್ಟಿನ ಆರೋಗ್ಯ: ಋತುಮಾನದಲ್ಲಿ ಆಗುವ ಏರಿಳಿತಗಳು ಮಹಿಳೆಯರ ಋತುಚಕ್ರದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಬದಲಾವಣೆಗಳ ಸಂದರ್ಭದಲ್ಲಿ ಕೆಲವು ಮಹಿಳೆಯರು ಅನಿಯಮಿತ ಅವಧಿಯಲ್ಲಿ ಮುಟ್ಟಾಗುವುದು, ಆಕೆಯ ಮನಸ್ಥಿತಿಯಲ್ಲಿ ಏರಿಳಿತಗಳಾವುದು ಮತ್ತು ನೋವು ಹೆಚ್ಚಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ವ್ಯಾಯಾಮ, ಸಮತೋಲಿತ ಆಹಾರ ಸೇವನೆ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಇದರ ಜೊತೆಗೆ ಋತುಚಕ್ರದ ಬಗ್ಗೆ ನಿಗಾ ಇಡಬೇಕು ಮತ್ತು ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಕುರಿಉವ ಕಾಳಜಿಯನ್ನಿಟ್ಟುಕೊಂಡು ವೈದ್ಯಕೀಯ ಸಲಹೆಗಳನ್ನು ಪಡೆಯುವ ಮೂಲಕ ಉತ್ತಮ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಎಷ್ಟೇ ನೀರು ಕುಡಿದ್ರೂ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಾ? ಈ ಕಾಯಿಲೆಯ ಸಂಕೇತವಾಗಿರಬಹುದು!

5. ಮೂಳೆ ಆರೋಗ್ಯ: ಆಸ್ಟಿಯೋಪೊರೋಸಿಸ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ವಿಶೇಷವಾಗಿ ಋತುಬಂಧದ ಸಂದರ್ಭದಲ್ಲಿ ಮತ್ತು ನಂತರ ದುರ್ಬಲ ಹಾಗೂ ಸುಲಭವಾಗಿ ಮೂಳೆಗಳಿಂದ ಗುಣಲಕ್ಷಣಗಳನ್ನು ಹೊಂದಿರುವ ಅಸ್ವಸ್ಥತೆ ಉಂಟಾಗುತ್ತದೆ. ಶೀತದ ತಿಂಗಳುಗಳಲ್ಲಿ ಕಡಿಮೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಕೊರತೆಯ ಪ್ರಮಾಣ ಹೆಚ್ಚಿರುತ್ತದೆ. ಮೂಳೆ ಆರೋಗ್ಯದ ತೊಂದರೆಗಳಿಗೆ ಇದು ಕಾರಣವಾಗಬಹುದು. ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶಗಳಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅದೇ ರೀತಿ ತೂಕ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಆಗಾಗ್ಗೆ ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ.

ಬೆಂಗಳೂರಿನ ಏರಿಳಿತದ ಋತುಗಳು ಮಹಿಳೆಯರ ಆರೋಗ್ಯದ ಮೇಲೆ ಬಹು ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಈ ಬದಲಾವಣೆಗಳಿಗೆ ಪೂರ್ವಭಾವಿಯಾಗಿ ಮತ್ತು ಗಮನಹರಿಸುವ ಮೂಲಕ ಹಾಗೂ ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ತಡೆಗಟ್ಟಲು ಅಥವಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಸುಲಭವಾಗಿದೆ. ಋತುಗಳ ಬದಲಾವಣೆ ಸಂದರ್ಭದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಅದರ ಜೊತೆಗೆ ನಿಯಮಿತವಾಗಿ ನೀರಿನ ಸೇವನೆ, ಸುತ್ತಮುತ್ತಲಿನ ವಾತಾವರಣವನ್ನು ನೈರ್ಮಲ್ಯವಾಗಿಟ್ಟುಕೊಳ್ಳುವುದು, ಉತ್ತಮ ಆಹಾರ ಪದ್ಧತಿ ಅನುಸರಿಸುವುದು, ಕಾಲಕಾಲಕ್ಕೆ ವೈದ್ಯರ ಸಲಹೆಗಳನ್ನು ಪಡೆಯುವುದರಿಂದ ಈ ಋತುಮಾನದ ಬದಲಾವಣೆಗಳಿಂದ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.

ಲೇಖಕರು - ಡಾ. ಆರತಿ ಭರತ್, ಕನ್ಸಲ್ಟೆಂಟ್ ಒಬ್ ಸ್ತೆಟ್ರಿಷಿಯನ್ & ಗೈನಾಕಾಲಾಜಿಸ್ಟ್, ಮದರ್ ಹುಡ್ ಹಾಸ್ಪಿಟಲ್, ಬನಶಂಕರಿ, ಬೆಂಗಳೂರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News