Do Not Store These vegetables In The Fridge During Winter: ರೆಫ್ರಿಜರೇಟರ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನದಲ್ಲಿ ಆಹಾರವನ್ನು ಸಂಗ್ರಹಿಸುವುದು ಸುಲಭವಾಗಿದೆ. ವಾರಾಂತ್ಯದಲ್ಲಿ ವಾರಪೂರ್ತಿಗಾಗಿ ಬೇಕಾಗುವ ತರಕಾರಿ ಖರೀದಿಸಿ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ ಏಕೆಂದರೆ, ಅವು ತಮ್ಮ ಗುಣಧರ್ಮವನ್ನು ಬದಲಾಯಿಸುತ್ತವೆ ಮತ್ತು ನಂತರ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಆ ತರಕಾರಿಗಳು ಯಾವುವು ಎಂದು ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ನಿಂದ ದೂರವಿಡಿ


1. ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವೆಂದರೆ ಅಡುಗೆಮನೆಯಲ್ಲಿ ಸಣ್ಣ ಬುಟ್ಟಿಯಲ್ಲಿ ಇಡುವುದು. ಕೋಣೆಯ ಉಷ್ಣಾಂಶದಲ್ಲಿಯೂ ಇದು ಹಲವು ದಿನಗಳವರೆಗೆ ತಾಜಾತಾಣದಿಂದ ಕೂಡಿರುತ್ತದೆ. ಸಿಪ್ಪೆ ಸುಲಿದು ಅಥವಾ ಪುಡಿ ಮಾಡಿ ಫ್ರಿಡ್ಜ್ ನಲ್ಲಿಟ್ಟರೆ ಅದರ ಪೋಷಣೆ ಕಡಿಮೆಯಾಗುತ್ತದೆ.


2. ಸೌತೆಕಾಯಿ
ನಾವು ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಹೆಚ್ಚು ಸೇವಿಸುತ್ತೇವೆ, ಏಕೆಂದರೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನೀವು ಅದನ್ನು ಚಳಿಗಾಲದಲ್ಲಿ ಖರೀದಿಸಿದರೆ, ಅದನ್ನು ಫ್ರಿಜ್ನಲ್ಲಿ ಇಡಬೇಡಿ, ಬದಲಿಗೆ ಕೋಣೆಯ ಉಷ್ಣಾಂಶದಲ್ಲಿ ಇರಿಸಿ, ಇಲ್ಲದಿದ್ದರೆ ಫ್ರಿಡ್ಜ್ ನಲ್ಲಿಟ್ಟ ಸೌತೆಕಾಯಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.


3. ಟೊಮೆಟೊ
ಇದರಂತೆಯೇ, ಚಳಿಗಾಲದಲ್ಲಿ ತಾಪಮಾನವು ಹೆಚ್ಚಾಗಿರುವುದಿಲ್ಲ, ಆದ್ದರಿಂದ ನೀವು ಈ ಸಮಯದಲ್ಲಿ ಕೋಣೆಯ ಉಷ್ಣಾಂಶದಲ್ಲಿ ಟೊಮೆಟೊಗಳನ್ನು ಇಡಬಹುದು. ನೀವು ಅದನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿದರೆ ಅದರ ರುಚಿ ಮತ್ತು ಸುವಾಸನೆಯು ಬದಲಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ-Hair Fall Control Tips: ಕೂದಲುದುರುವಿಕೆ ನಿಲ್ಲುತ್ತಿಲ್ಲವೇ? ಬಿಳಿ ಈರುಳ್ಳಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ


4. ಆಲೂಗಡ್ಡೆ
ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಯಾವುದೇ ತರಕಾರಿಗಳೊಂದಿಗೆ ಬೆರೆಸಬಹುದು. ಆಲೂಗಡ್ಡೆಯನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು ಏಕೆಂದರೆ ಅದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ, ಇದರಿಂದಾಗಿ ಬೊಜ್ಜು ಮತ್ತು ಗ್ಲೂಕೋಸ್ ಮಟ್ಟವು ಹೆಚ್ಚಾಗುವ ಅಪಾಯವಿದೆ.


ಇದನ್ನೂ ಓದಿ-Health News: ನೀವೂ ಕೂಡ ಮೊಳಕೆಯೊಡೆದ ಮೆಂತ್ಯ ಹಾಗೂ ಹೆಸರುಬೇಳೆ ಸೇವಿಸುತ್ತೀರಾ? ಹಾಗಾದ್ರೆ ಈ ವರದಿ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.