Potato Milk: ಸಾಮಾನ್ಯವಾಗಿ ಆಲೂಗಡ್ಡೆಯನ್ನು ತರಕಾರಿಯ ರೂಪದಲ್ಲಿ ಬಳಸಲಾಗುತ್ತದೆ, ಇದರಿಂದ ಅನೇಕ ರೀತಿಯ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಆಲೂಗೆಡ್ಡೆ ಚಿಪ್ಸ್ ಕೂಡ ಅವುಗಳಲ್ಲಿ ಒಂದು. ಫ್ರೆಂಚ್ ಫ್ರೈಗಳನ್ನು ತಯಾರಿಸಲಾಗುತ್ತದೆ, ಪಕೋಡಗಳು ಮತ್ತು ಇತರ ಅನೇಕ ಭಕ್ಷ್ಯಗಳನ್ನು ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ, ಆದರೆ, ನೀವು ಯಾವತ್ತಾದರೂ ಆಲೂಗಡ್ಡೆ ಹಾಲನ್ನು ಕುಡಿದಿದ್ದೀರಾ? ಎಂದು ಪ್ರಶ್ನಿಸಿದರೆ, ಬಹುಶಃ ನೀವು ಸ್ವಲ್ಪ ವಿಚಿತ್ರವಾಗಿ ಪ್ರತಿಕ್ರಿಯಿಸಬಹುದು. ಅದರಲ್ಲಿ ಹಾಲು ಕೂಡ ಇದೆಯೇ? ಎಂದು ನೀವು ಮರುಪ್ರಶ್ನಿಸಬಹುದು. ನೀವು ಬೇರೆ ಯಾವುದೇ ಯೋಚನೆ ಮಾಡುವ ಮೊದಲು, ಕೇಳಿ  ಆಲೂಗಡ್ಡೆ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ನೀವು ಅದನ್ನು ಮನೆಯಲ್ಲಿಯೂ ತಯಾರಿಸಬಹುದು.


COMMERCIAL BREAK
SCROLL TO CONTINUE READING

ಡೌಗ್ ಕಂಪನಿಯು ಆಲೂಗಡ್ಡೆ ಹಾಲನ್ನು ತಯಾರಿಸುತ್ತದೆ
ಈ ಆಲೂಗಡ್ಡೆ ಮಿಲ್ಕ್ ಅನ್ನು ಸ್ವೀಡಿಷ್ ಕಂಪನಿಯು ಉತ್ಪಾದಿಸುತ್ತದೆ. ಡೌಗ್ ಎಂಬ ಕಂಪನಿಯು ಆಲೂಗಡ್ಡೆ ಹಾಲನ್ನು ತಯಾರಿಸುತ್ತಿದೆ. ಆದರೆ, ಆಲೂಗಡ್ಡೆ ಹಾಲನ್ನು ಬಿಡುಗಡೆ ಮಾಡಿದ ಮೊದಲ ಕಂಪನಿ ಇದಲ್ಲ ಎಂಬುದು ತಜ್ಞರು ಅಭಿಪ್ರಾಯ. ಈ ಹಿಂದೆ, ವೆಗಾನ್ ಬ್ರ್ಯಾಂಡ್ 2015 ರಲ್ಲಿ ಕೆನಡಾ ಮತ್ತು ಅಮೆರಿಕದಂತಹ ದೇಶಗಳಲ್ಲಿ ಆಲೂಗಡ್ಡೆ ಹಾಲನ್ನು ಬಿಡುಗಡೆ ಮಾಡಿತ್ತು. ಈ ಕಂಪನಿ ಸೋಯಾ ಹಾಲು, ಬಾದಾಮಿ ಹಾಲು, ಓಟ್ಸ್ ಹಾಗೂ ಗೋಡಂಬಿ ಹಾಲನ್ನು ಬಿಡುಗಡೆ ಮಾಡಿದೆ. ಇದೀಗ ಆಲೂಗಡ್ಡೆ ಹಾಲು ಕೂಡ ಈ ಪಟ್ಟಿಯಲ್ಲಿ ಸೇರಿದೆ. ಆಲೂಗೆಡ್ಡೆಯನ್ನು ತರಕಾರಿಯಾಗಿ ಸೇವಿಸುವುದರಿಂದ ಜನರಲ್ಲಿ ಹಾಲಿನ ಹಸಿವನ್ನು ಕಡಿಮೆ ಮಾಡುತ್ತದೆ. ಇದನ್ನು ಡೈರಿ ಹಾಲಿನ ಪರ್ಯಾಯ ಎಂದು ಕೂಡ ನೀವು ಕರೆಯಬಹುದು.

ಆಲೂಗೆಡ್ಡೆ ಹಾಲಿನ ಪ್ರಯೋಜನಗಳು
ಆರೋಗ್ಯ ತಜ್ಞರ ಪ್ರಕಾರ ಆಲೂಗೆಡ್ಡೆ ಹಾಲಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ12 ಇದೆ. ಇದಲ್ಲದೆ, ಇದು ಹಸುವಿನ ಹಾಲಿನಂತೆ ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ ಮತ್ತು ಇದು ಕ್ಯಾಸಿನ್ ಮುಕ್ತ, ಕೊಬ್ಬು ಮುಕ್ತ ಮತ್ತು ಅಂಟು ಮುಕ್ತವಾಗಿದೆ. ಈ ಹಾಲು ಅನೇಕ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡಲು ಸಮರ್ಥವಾಗಿದೆ. ಆಲೂಗಡ್ಡೆ ಹಾಲು ಸಸ್ಯಾಹಾರಿ ಸ್ನೇಹಿಯಾಗಿದೆ, ಇದು ಸೋಯಾ ಅಲರ್ಜಿ ಇರುವವರಿಗೆ ಪ್ರಯೋಜನಕಾರಿಯಾಗಿದೆ.ಆಲೂಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.ಆಲೂಗಡ್ಡೆ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ನೀವು ಅದನ್ನು ಮನೆಯಲ್ಲಿಯೇ ತಯಾರಿಸಬಹುದು.


ಇದನ್ನೂ ಓದಿ-Blue Tea: ನೀವು ನೀಲಿ ಚಹಾ ಎಂದಾದರೂ ಸೇವಿಸಿದ್ದೀರಾ? ಸ್ವಾದ-ಆರೋಗ್ಯ ಎರಡಕ್ಕೂ ಬೆಸ್ಟ್


ಮನೆಯಲ್ಲಿ ಆಲೂಗೆಡ್ಡೆ ಹಾಲು ತಯಾರಿಸುವುದು ಹೇಗೆ?
1. ಮೊದಲು ಆಲೂಗಡ್ಡೆಯ ಸಿಪ್ಪೆಯನ್ನು ಸುಲಿದುಕೊಳ್ಳಿ
2. ಬಳಿಕ ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ
3. ಕತ್ತರಿಸಿದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿ.
4. ಆಲೂಗೆಡ್ಡೆಗಳು ಸಂಪೂರ್ಣ ಬೆಂದಾಗ, ಅದನ್ನು ಮತ್ತು ನೀರನ್ನು ಮಿಕ್ಸಿಗೆ ಹಾಕಿ ರುಬ್ಬಿದ ಬಾದಾಮಿ, ಉಪ್ಪು, ಸಿಹಿಕಾರಕವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
5. ಈಗ ಹಾಲನ್ನು ಫಿಲ್ಟರ್ ಮಾಡಿ ಮತ್ತು ನಿಮ್ಮ ಆಲೂಗಡ್ಡೆ ಹಾಲು ಈಗ ಸಂಪೂರ್ಣವಾಗಿ ಸಿದ್ಧವಾಗಿದೆ.


ಇದನ್ನೂ ಓದಿ-Health Tips: ಸದಾ ಯಂಗ್ ಹಾಗೂ ಹೆಲ್ದಿಯಾಗಿರಲು ಯಾವ ವಯಸ್ಸಿಯಲ್ಲಿ ಏನು ಸೇವನೆ ಮಾಡಬೇಕು?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.