ಬೆಂಗಳೂರು : ಬೇಳೆ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.  ಬೇಳೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ. ಇದಲ್ಲದೆ, ಇದು ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಮಾಂಸ ಮತ್ತು ಮೀನು ಸೇವಿಸದವರಿಗೆ, ತೊಗರಿ ಬೇಳೆ ಪ್ರೋಟೀನ್‌ನ  ಉತ್ತಮ ಮೂಲವಾಗಿದೆ. ಹೆಚ್ಚಿನ ಜನರು ಬೆಳಿಗ್ಗೆ ಎದ್ದು ಮೊಳಕೆಯೊಡೆದ  ಕಾಳುಗಳನ್ನು ತಿನ್ನುತ್ತಾರೆ. ಬೇಳೆ ಕಾಳುಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟ. ಹಾಗಂತ ಬೇಳೆಯನ್ನು ತಿನ್ನದೇ ಇರುವುದು ಸರಿಯಲ್ಲ. ಬೇಳೆ ಸೇವಿಸದೇ ಹೋದರೆ ಅದರಿಂದ ನಮ್ಮ ಆರೋಗ್ಯಕ್ಕೆ ನಷ್ಟವಾಗುವುದು. ಬೇಳೆಯನ್ನು  ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತಹ ಕೆಲವು ವಿಧಾನಗಳ ಬಗ್ಗೆ ಇಂದು ನಾವು ಹೇಳುತ್ತೇವೆ. 


COMMERCIAL BREAK
SCROLL TO CONTINUE READING

ಬೇಳೆಯನ್ನು ಮೊದಲೇ ನೆನೆಸಿಡಿ :
ಬೇಳೆಯನ್ನು ಜೀರ್ಣಿಸಿಕೊಳ್ಳಲು, ಅದನ್ನು ಸರಿಯಾಗಿ ಬೇಯಿಸುವುದು ಮುಖ್ಯ. ಇದಕ್ಕಾಗಿ, ಅಡುಗೆ ಮಾಡುವ ಮೊದಲು ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಬೇಳೆಯನ್ನು ನೆನೆಸಿಡಬೇಕು. ಇದರೊಂದಿಗೆ ಬೇಳೆ ಬೇಯಿಸುವಾಗ ಉಪ್ಪು ಹಾಕದಿರುವ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಬೇಳೆ  ಸಂಪೂರ್ಣ ಬೆಂದ ನಂತರವೇ ಅದಕ್ಕೆ ಉಪ್ಪನ್ನು ಸೇರಿಸಿ. 


ಇದನ್ನೂ ಓದಿ : Weight Loss Tips: ಈ ಪುಟ್ಟ ತರಕಾರಿಯಿಂದ ಕೇವಲ 15 ದಿನಗಳಲ್ಲಿ ಕರಗುತ್ತದೆ ಬೊಜ್ಜು!


ತಪ್ಪಾದ ಆಹಾರ ಸಂಯೋಜನೆ ಬೇಡ : 
ಮೊದಲೇ ಹೇಳಿದಂತೆ  ಬೇಳೆ ರ್ಜೀಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಬೇಳೆಯ ಜೊತೆಗೆ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಹಾಲಿನಂತಹ ಯಾವುದೇ ಆಹಾರವನ್ನು ಸೇವಿಸಬೇಡಿ. ಹಾಲು ಕೂಡಾ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.  ಇದಲ್ಲದೆ ಬೇಳೆ ಮಾಡುವಾಗ ಅದಕ್ಕೆ ಇಂಗು, ಪಲಾವ್ ಎಲೆ, ಓಮ ಕಾಳು ಮತ್ತು ತುಪ್ಪವನ್ನು ಸೇರಿಸಿ. ಹೀಗೆ ಮಾಡಿದರೆ ಬೆಲೆ ಸುಲಭವಾಗಿ ಜೀರ್ಣವಾಗುತ್ತದೆ. 


ಬೇಳೆಯನ್ನು ಚೆನ್ನಾಗಿ ತೊಳೆಯಿರಿ :
ಆಸಿಡಿಟಿ ಉಂಟು ಮಾಡುವ ಆಹಾರಗಳೊಂದಿಗೆ ಬೇಳೆಯನ್ನು ಬೇಯಿಸಬೇಡಿ. ಹುಳಿ ವಸ್ತುಗಳು ಬೇಳೆಯನ್ನು ಸರಿಯಾಗಿ ಬೇಯಲು ಬಿಡುವುದಿಲ್ಲ. ಇನ್ನು ಪ್ಯಾಕೆಜ್ದ್ ದಾಲ್ ಬಳಸುವುದಾದರೆ ಅದನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಅದರ ಮೇಲಿರುವ ನೊರೆ ಪದರ ಹೋಗುತ್ತದೆ. 


ಇದನ್ನೂ ಓದಿ : ರಕ್ತಹೀನತೆಯಿಂದ ಮಲಬದ್ಧತೆವರೆಗೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಅಲೋವೆರಾ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.