Egg Side Effects: ಸೂಪರ್ ಫುಡ್ ಎಂದು ಪರಿಗಣಿಸಲ್ಪಟ್ಟಿರುವ ಮೊಟ್ಟೆಯು ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕಾಗಿಯೇ ವೈದ್ಯರು ಪ್ರತಿಯೊಬ್ಬರಿಗೂ ಮೊಟ್ಟೆ ಸೇವಿಸಲು ಸಲಹೆ ನೀಡುತ್ತಾರೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಮೊಟ್ಟೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ಯಾವ ಆರೋಗ್ಯ ಸಮಸ್ಯೆ ಇರುವವರು ಮೊಟ್ಟೆ ಸೇವಿಸಬಾರದು ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ನಿಮಗೂ ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಮೊಟ್ಟೆಯನ್ನು ತಿನ್ನಲೇಬೇಡಿ:
ಅತಿಸಾರ:

ಅತಿಸಾರದಂತಹ ಸಮಸ್ಯೆ ಇರುವವರಿಗೆ ಮೊಟ್ಟೆ ಸೇವನೆಯಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ, ಅತಿಸಾರ ಉಂಟಾದಾಗ ಮೊಟ್ಟೆ ಸೇವನೆಯನ್ನು ತಪ್ಪಿಸಿ.


ಅಜೀರ್ಣ:
ಸಾಮಾನ್ಯವಾಗಿ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೆಲವರಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆ ಸುಲಭವಾಗಿ ಜೀರ್ಣವಾಗದ ಕಾರಣ, ಉದರ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು.


ಇದನ್ನೂ ಓದಿ- ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಲ್ಲ ಮನೆಮದ್ದುಗಳಿವು


ಕೊಲೆಸ್ಟ್ರಾಲ್:
ಪ್ರಸ್ತುತ ಕೊಲೆಸ್ಟ್ರಾಲ್ ಅತಿ ಹೆಚ್ಚು ಅಪಾಯಕಾರಿ ಕಾಯಿಲೆಯಾಗಿ ಹೊರ ಹೊಮ್ಮುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೊಟ್ಟೆಯ ಸೇವನೆ, ಅದರಲ್ಲಿಯೂ ಮೊಟ್ಟೆಯ ಹಳದಿ ಭಾಗದ ಸೇವನೆಯು ನಿಮ್ಮ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೆಚ್ಚಿಸಬಹುದು.


ಹೃದ್ರೋಗ:
ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರಿಗೆ ಮೊಟ್ಟೆ ಒಳ್ಳೆಯ ಆಹಾರವಲ್ಲ. ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ರಕ್ತನಾಳದಲ್ಲಿ ರಕ್ತ ಪರಿಚಲನೆಗೆ ಅಡಚಣೆಯನ್ನುಂಟು ಮಾಡಬಹುದು. 


ಇದನ್ನೂ ಓದಿ- Peanuts For Diabetes: ಮಧುಮೇಹಿಗಳು ಕಡಲೆಕಾಯಿಯನ್ನು ತಿನ್ನಬಹುದೇ? ಇಲ್ಲಿದೆ ಮಹತ್ವದ ಮಾಹಿತಿ 


ಕ್ಯಾನ್ಸರ್:
ವರದಿಯೊಂದರ ಪ್ರಕಾರ, ಅಧಿಕ ಮೊಟ್ಟೆ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದು 
ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.