Peanuts For Diabetes: ಮಧುಮೇಹಿಗಳು ಕಡಲೆಕಾಯಿಯನ್ನು ತಿನ್ನಬಹುದೇ? ಇಲ್ಲಿದೆ ಮಹತ್ವದ ಮಾಹಿತಿ

Peanuts For Diabetes: ಮಧುಮೇಹದಲ್ಲಿ ಮೂತ್ರಪಿಂಡ ಕಾಯಿಲೆ, ಹೃದ್ರೋಗ ಮತ್ತು ದೃಷ್ಟಿ ದುರ್ಬಲಗೊಳ್ಳುವ ಅಪಾಯವಿರುತ್ತದೆ. ಅಂತಹ ಸಂದರ್ಭದಲ್ಲಿ ಮಧುಮೇಹಿಗಳಿಗೆ ಕಡಲೆಕಾಯಿ ಒಳ್ಳೆಯದೇ?

Peanuts For Diabetes: ಡಯಾಬಿಟಿಸ್ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸುವುದು ಅತ್ಯಗತ್ಯ. ಮಧುಮೇಹಿಗಳ ತಪ್ಪಾದ ಆಹಾರ ಕ್ರಮವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇಂತಹ ಸಂದರ್ಭದಲ್ಲಿ ಮಧುಮೇಹಿಗಳು ಬಡವರ ಬಾದಾಮಿ ಕಡಲೆಕಾಯಿಯನ್ನು ತಿನ್ನಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕಡಲೆಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಬಿ 6, ವಿಟಮಿನ್ ಬಿ 9, ವಿಟಮಿನ್-ಬಿ ಕಾಂಪ್ಲೆಕ್ಸ್, ಪ್ಯಾಂಟೊಥೆನಿಕ್ ಆಮ್ಲ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದನ್ನು ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

2 /5

ಅಧ್ಯಯನವೊಂದರ ಪ್ರಕಾರ ಮಧುಮೇಹಿಗಳಿಗೆ ಕಡಲೆಕಾಯಿ ಸೇವನೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅದರಲೂ ಬೆಳಿಗ್ಗೆ ಸಮಯದಲ್ಲಿ ಕಡಲೆಕಾಯಿ ತಿನ್ನುವುದರಿಂದ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿಡಲು ಸಹಾಯಕ. ಕಡಲೆಕಾಯಿ ಬೆಣ್ಣೆ ಅಂದರೆ ಪೀನಟ್ ಬಟರ್ ನಲ್ಲಿ  ಕಂಡು ಬರುವ ಮೆಗ್ನೀಸಿಯಮ್ ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 

3 /5

ಬಡವರ ಬಾದಾಮಿ ಕಡಲೆಕಾಯಿ ಫೈಬರ್, ಪ್ರೋಟೀನ್ ಮತ್ತು ಏಕಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ನಮ್ಮ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡಬಹುದು.

4 /5

ಕಡಲೆಕಾಯಿಯು  ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿದೆ, ಇದನ್ನು ತಿನ್ನುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ ಮತ್ತು ಇದು ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಪ್ರಯೋಜಕಾರಿ ಆಗಿದೆ.

5 /5

ಮಧುಮೇಹ ಇರುವವರಿಗೆ ಮಾತ್ರವಲ್ಲ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೂ ಕೂಡ ಕಡಲೆಕಾಯಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.