Ayurvedic Rules of Drinking Water: ಕುಡಿಯುವ ನೀರಿಗೂ ನಿಯಮವಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?ಹೌದು, ಸರಿಯಾಗಿ ನೀರು ಕುಡಿಯುವುದಕ್ಕೂ ನಿಯಮವಿದೆ. ನೀವು ಸರಿಯಾದ ರೀತಿಯಲ್ಲಿ ನೀರನ್ನು ಕುಡಿದರೆ, ನಂತರ ನೀವು ಸರಿಯಾದ ರೀತಿಯಲ್ಲಿ ಅದರ ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ದೇಹವನ್ನು ಸರಿಯಾಗಿ ಹೈಡ್ರೇಟ್ ಆಗಿ ಇರಿಸುವುದು ತುಂಬಾ ಮುಖ್ಯ, ಇದಕ್ಕಾಗಿ ಸಾಕಷ್ಟು ನೀರನ್ನು ಕುಡಿಯಬೇಕು. ದೇಹದಲ್ಲಿ ಜೀರ್ಣಕ್ರಿಯೆಗೆ ನೀರು ಅತ್ಯಗತ್ಯ. ಹೀಗಾಗಿ ವೈದ್ಯರು ಕೂಡ ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಲು ಸಲಹೆ ನೀಡುತ್ತಾರೆ.


COMMERCIAL BREAK
SCROLL TO CONTINUE READING

ಒಂದು ವೇಳೆ ನೀವು ನೇರವಾಗಿ ಬಾಟಲಿಯಿಂದ ನೀರು ಕುಡಿಯುತ್ತಿದ್ದರೆ, ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಿದ್ದರೆ, ಕಡಿಮೆ ನೀರು ಕುಡಿಯುತ್ತಿದ್ದರೆ ಅಥವಾ ನಿಂತ ಭಂಗಿಯಲ್ಲಿ ನೀರು ಕುಡಿಯುತ್ತಿದ್ದರೆ ಅಥವಾ ತಣ್ಣೀರು ಕುಡಿಯುತ್ತಿದ್ದರೆ ಈ ಎಲ್ಲಾ ವಿಧಾನಗಳು ನಿಮ್ಮ ದೇಹಕ್ಕೆ ಹಾನಿಕಾರಕವಾಗಿವೆ.  ಹೌದು, ಆಯುರ್ವೇದದಲ್ಲಿ ಸರಿಯಾದ ರೀತಿಯಲ್ಲಿ ನೀರನ್ನು ಕುಡಿಯುವ ಬಗ್ಗೆ ನಿಯಮಗಳನ್ನು ಹೇಳಲಾಗಿದೆ, ಇದರಿಂದ ದೇಹವು ಹಲವಾರು ಪ್ರಯೋಜನಗಳನ್ನು ಪಡೆಯುತ್ತದೆ. ಕುಡಿಯುವ ನೀರಿನ ಆ ಆಯುರ್ವೇದ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


ಕುಳಿತು ನೀರು ಕುಡಿಯಿರಿ
ನಿಂತಿರುವ ಭಂಗಿಯಲ್ಲಿ ಎಂದಿಗೂ ನೀರನ್ನು ಕುಡಿಯಬೇಡಿ. ಅದರ ಬದಲಾಗಿ ಕುಳಿತುಕೊಂಡು ನೀರು ಕುಡಿಯಿರಿ. ವಾಸ್ತವದಲ್ಲಿ, ಕುಳಿತು ನೀರು ಕುಡಿಯುವುದರಿಂದ, ನೀರನ್ನು ನಿಮ್ಮ ದೇಹದಲ್ಲಿ ಸರಿಯಾಗಿ ಹೀರಿಕೊಳ್ಳುತ್ತದೆ.


ಒಂದೊಂದೇ ಗುಟುಕು ನೀರು ಕುಡಿಯಿರಿ
ನೀರನ್ನು ಕುಡಿಯುವಾಗ ಒಂದೇ ಸಲಕ್ಕೆ ಕುತಿಯಬೇಡಿ. ಒಂದು ಲೋಟದಲ್ಲಿ ನೀರು ಹಾಕಿ, ಒಂದು ಜಾಗದಲ್ಲಿ ಆರಾಮವಾಗಿ ಕುಳಿತು ಒಂದೊಂದೇ  ಗುಟುಕು  ನೀರನ್ನು ಕುಡಿಯಿರಿ. ನಿರಂತರವಾಗಿ ಒಂದೇ ಬಾರಿಗೆ ಬಾಯಿಗೆ ನೀರನ್ನು ಸುರಿದುಕೊಳ್ಳುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ನೀವು ನೀರನ್ನು ಸ್ಲೈಡ್ ಮಾಡಲು ಬಿಡುತ್ತೀರಿ ಎಂಬುದನ್ನು ನೀವು ಗಮನಿಸಬಹುದು, ಆದರೆ, ಅದು ನಿಮಗೆ ತೊಂದರೆ ನೀಡುತ್ತದೆ. ವಾಸ್ತವವಾಗಿ ನೀರನ್ನು ಆರಾಮವಾಗಿ ಕುಳಿತುಕೊಂಡು ನೆಮ್ಮನಿಯಿಂದ ಕುಡಿಯಬೇಕು. 


ತಣ್ಣೀರು ಕುಡಿಯುವುದನ್ನು ತಪ್ಪಿಸಿ
ರೆಫ್ರಿಜರೇಟರ್ ನೀರನ್ನು ಕುಡಿಯುವುದರಿಂದ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿಯನ್ನು ತಲುಪಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಆದ್ದರಿಂದ, ರೂಮ್ ಟೆಂಪೆರೆಚರ್ ನಲ್ಲಿರುವ ನೀರನ್ನು ಮಾತ್ರ  ಕುಡಿಯಿರಿ ಅಥವಾ ಉಗುರು ಬೆಚ್ಚಗಿನ ನೀರನ್ನು ಸೇವಿಸಿ.


ಇದನ್ನೂ ಓದಿ-Todays Horoscope 29 January 2023: ಮೇಷ ರಾಶಿಯವರಿಗೆ ಚಂದ್ರ ಬಲ, ಇತರ ರಾಶಿಗಳ ಜನರ ಪಾಲಿಗೆ ಹೇಗಿದೆ ದಿನ?


ಹರಿಯುವ ನೀರನ್ನು ಕುಡಿಯಬೇಡಿ
ಹರಿಯುವ ನೀರನ್ನು ಎಂದಿಗೂ ಕುಡಿಯಬೇಡಿ. ನೀರನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಮತ್ತು ಸೇವಿಸಿ ಅಥವಾ ನಿಂತ ನೀರನ್ನೇ ಕುಡಿಯಬೇಕು.


ಇದನ್ನೂ ಓದಿ-ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಈ ಸ್ಪೆಷಲ್ ಚಹಾ, ಒಮ್ಮೆ ಟ್ರೈ ಮಾಡಿ ನೋಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು  ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.