ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಈ ರಾಶಿಗಳ ಜನರ ಖಾತೆಯಲ್ಲಿ ಅಪಾರ ಧನವೃಷ್ಟಿ!

Trigrahi Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಸೂರ್ಯನ ಗೋಚರದಿಂದ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಕೆಲ ರಾಶಿಗಳ ಜಾತಕದವರ ಪಾಲಿಗೆ ವಿಶೇಷವಾಗಿ ಅತ್ಯಂತ ಶುಭವಾಗಿರಲಿದೆ.  

Written by - Nitin Tabib | Last Updated : Jan 28, 2023, 01:57 PM IST
  • ಈ ರಾಶಿಯವರಿಗೆ ಈ ಯೋಗದಿಂದ ಶುಭ ದಿನಗಳು ಪ್ರಾರಂಭವಾಗಲಿವೆ.
  • ವೃಷಭ ರಾಶಿಯ ದಶಮ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ.
  • ಈ ಸ್ಥಳವನ್ನು ಕೆಲಸ ಮತ್ತು ನೌಕರಿಯ ಮನೆ ಎಂದು ಪರಿಗಣಿಸಲಾಗುತ್ತದೆ.
ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಈ ರಾಶಿಗಳ ಜನರ ಖಾತೆಯಲ್ಲಿ ಅಪಾರ ಧನವೃಷ್ಟಿ! title=
ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗ

Sun Transit To Aquarius: ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ನಿಗದಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಈ ಅವಧಿಯಲ್ಲಿ ಕೆಲವು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಫೆಬ್ರವರಿ 14 ರಂದು, ಸೂರ್ಯನು ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. ಇನ್ನೊಂದೆಡೆ ಬುಧ ಕೂಡ ಇದರಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಇದು ತ್ರಿಗ್ರಹಿ ಯೋಗವನ್ನು ರೂಪಿಸುತದೆ. ಕುಂಭ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಹಿ ಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಜೀವನದ ಮೇಲೆ ಕಂಡುಬರಲಿದೆ. ಆದರೆ ಈ 3 ರಾಶಿಗಳ ಜನರ ಮೇಲೆ ಇದು ಅಪಾರ ಧನವೃಷ್ಟಿ ಸುರಿಸಲಿದೆ. ಈ ಅವಧಿಯಲ್ಲಿ, ಈ ರಾಶಿಗಳ ಜನರ ಪ್ರಗತಿಯಾಗಲಿದ್ದು, ಅಪಾರ ಧನಸಂಪತ್ತು ಹರಿದುಬರುವ ಸಾಧ್ಯತೆ ಇದೆ.

ಮಕರ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಕರ ರಾಶಿಯವರಿಗೆ ತ್ರಿಗ್ರಹಿ ಯೋಗವು ಪ್ರಯೋಜನಕಾರಿಯಾಗಿದೆ. ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದನ್ನು ಸಂಪತ್ತು ಮತ್ತು ವಾಣಿಯ ಸ್ಥಳವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹಠಾತ್ ಲಾಭದ ಎಲ್ಲಾ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ನೀವು ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುವಿರಿ . ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಸಂಭಾಷಣೆಯ ಶೈಲಿಯೂ ಸುಧಾರಿಸಲಿದೆ. ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು.

ಸಿಂಹ ರಾಶಿ
ಈ ರಾಶಿಯವರಿಗೆ ತ್ರಿಗ್ರಹಿ ಯೋಗವು ಮಂಗಳಕರ ಮತ್ತು ಸಾಕಷ್ಟು ಫಲಪ್ರದ ಸಾಬೀತಾಗಲಿದೆ. ವ್ಯಕ್ತಿಯ ಒಳ್ಳೆಯ ದಿನಗಳು ಪ್ರಾರಂಭವಾಗಳಿವೆ. ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಯೋಗವನ್ನು ಪಾಲುದಾರಿಕೆ ಮತ್ತು ವೈವಾಹಿಕ ಜೀವನದ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪಾಲುದಾರಿಕೆ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದೇ ವೇಳೆ, ಈ ಸಮಯವು ಉದ್ಯೋಗಿಗಳಿಗೆ ಅದ್ಭುತವಾಗಿದೆ. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು.  ಅವಿವಾಹಿತರಿಗೆ ಸಂಬಂಧಗಳು ಕೂಡಿ ಬರಲಿವೆ.

ಇದನ್ನೂ ಓದಿ-Rath Saptami 2023: ಈ ರಾಶಿಗಳ ಜನರ ಮೇಲಿರುತ್ತೆ ಸೂರ್ಯನ ವಿಶೇಷ ಕೃಪೆ, ಧನ-ಧಾನ್ಯ ವೃದ್ಧಿಗೆ ಈ ಸಣ್ಣ ಉಪಾಯ ಮಾಡಿ

ವೃಷಭ ರಾಶಿ
ಈ ರಾಶಿಯವರಿಗೆ ಈ ಯೋಗದಿಂದ ಶುಭ ದಿನಗಳು ಪ್ರಾರಂಭವಾಗಲಿವೆ. ವೃಷಭ ರಾಶಿಯ ದಶಮ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಸ್ಥಳವನ್ನು ಕೆಲಸ ಮತ್ತು ನೌಕರಿಯ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ಉದ್ಯೋಗ ಪ್ರಸ್ತಾಪವು ಬರಬಹುದು. ನೀವು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. ಮತ್ತೊಂದೆಡೆ, ಕೆಲಸ ಮಾಡುವ ಜನರಿಗೆ ಈ ಅವಧಿಯಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ-Mercury Transit 2023: 8 ರಾಶಿಗಳ ಜನರ ಆದಾಯದಲ್ಲಿ ಭಾರಿ ವೃದ್ಧಿ, ಹೊಸ ಉದ್ಯೋಗಾವಕಾಶದ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News