Jaggery And Curd Health Benefits: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ. ಆದರೆ ಮೊಸರಿನ ಗುಣಧರ್ಮ ತಂಪಾಗಿರುತ್ತದೆ. ಇವೆರಡನ್ನು ಒಟ್ಟಿಗೆ ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುವುದು ಅನೇಕ ರೋಗಗಳ ಅಪಾಯವನ್ನು ತಗ್ಗಿಸುತ್ತದೆ. ಆಶ್ಚರ್ಯಕರ ಸಂಗತಿ ಎಂದರೆ, ಬೆಲ್ಲ ಮತ್ತು ಮೊಸರು ಚಳಿಗಾಲ ಮತ್ತು ಬೇಸಿಗೆಯಲ್ಲಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

1. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣದ ಅಂಶವಿದೆ. ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ.

2. ಬೆಲ್ಲದಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂ ಉತ್ತಮ ಪ್ರಮಾಣದಲ್ಲಿರುತ್ತದೆ, ಇವು ರಕ್ತದೊತ್ತಡವನ್ನು ನಿಯಂತರಿಸಲು ಸಹಾಯ ಮಾಡುತ್ತವೆ. ಬೆಲ್ಲ ಮತ್ತು ಮೊಸರು ತಿಂದರೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುವುದಿಲ್ಲ.


ಇದನ್ನೂ ಓದಿ-Diabetes ರೋಗಿಗಳಿಗೆ ಅಮೃತಕ್ಕೆ ಸಮಾನ ಈ ಕಹಿ ಪದಾರ್ಥ, ಹಲವು ಅಪಾಯಕಾರಿ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೇಯುತ್ತೆ!

3. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದು ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಕೊನೆಗೊಳಿಸುತ್ತದೆ. ಇವುಗಳನ್ನು ತಿನ್ನುವುದರಿಂದ ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವು ದೂರವಾಗುತ್ತದೆ. ಬೆಲ್ಲ ಮತ್ತು ಮೊಸರು ಅವಧಿಗಳನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Mahashivratri ದಿನ ಮಧುಮೇಹಿಗಳು ಮರೆತೂ ಈ ತಪ್ಪುಗಳನ್ನು ಮಾಡಬಾರದು!

4. ಬೆಲ್ಲ ಮತ್ತು ಮೊಸರು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಶೀತ ಮತ್ತು ಜ್ವರದ ಸಮಸ್ಯೆ ದೂರವಾಗುತ್ತವೆ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದಾಗ, ಇವೆರಡನ್ನೂ ತಿನ್ನುವುದು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-ತೂಕ ಇಳಿಕೆಗೆ ಲವಂಗ-ಶುಂಠಿಯ ಈ ಪೇಯ ಟ್ರೈ ಮಾಡಿ ನೋಡಿ, ಕೆಲವೇ ದಿನಗಳಲ್ಲಿ ಚಮತ್ಕಾರ!

5. ಮೊಸರು ಮತ್ತು ಬೆಲ್ಲವು ಹೊಟ್ಟೆ ನೋವನ್ನು ನಿವಾರಿಸಲು ಕೆಲಸ ಮಾಡುತ್ತವೆ. ಬೆಲ್ಲದಲ್ಲಿರುವ ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ಸಹಾಯ ಮಾಡುತ್ತವೆ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.


ಇದನ್ನೂ ನೋಡಿ-


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ- 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.