Diabetes ರೋಗಿಗಳಿಗೆ ಅಮೃತಕ್ಕೆ ಸಮಾನ ಈ ಕಹಿ ಪದಾರ್ಥ, ಹಲವು ಅಪಾಯಕಾರಿ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೇಯುತ್ತೆ!

Kalmegh Health Benefits: ಕೊರೊನಾ ನಂತರದ ಕಾಲದಲ್ಲಿ ಜನರು ಆಯುರ್ವೇದ ಔಷಧಿಗಳತ್ತ ಹೆಚ್ಚು ವಾಲುತ್ತಿದ್ದಾರೆ.ಅಂತಹುದೇ ಒಂದು ಔಷಧದ ಕುರಿತು ಈ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡುತ್ತಿದ್ದು. ಈ ಆಯುರ್ವೇದ ಗಿಡಮೂಲಿಕೆ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಈ ಕಹಿ ಪದಾರ್ಥ ಹಲವು ರೋಗಗಳನ್ನು ಬುಡಸಮೇತ ನಿವಾರಿಸುತ್ತದೆ.  

Written by - Nitin Tabib | Last Updated : Feb 18, 2023, 07:35 PM IST
  • ಆಯುರ್ವೇದದ ತಜ್ಞರು ಕಾಲಮೇಘ ಅಥವಾ ಚಿರತಾ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾರೆ.
  • ಕಾಲಮೇಘ ಬಳಕೆಯಿಂದ ಜ್ವರ, ಶೀತ ಮತ್ತು ಗಂಟಲು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ.
  • ಕನ್ನಡದಲ್ಲಿ ನೆಲಬೇವು ಎಂದೂ ಕರೆಯಲಾಗುವ ಈ ಗಿಡಮೂಲಿಕೆ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
Diabetes ರೋಗಿಗಳಿಗೆ ಅಮೃತಕ್ಕೆ ಸಮಾನ ಈ ಕಹಿ ಪದಾರ್ಥ, ಹಲವು ಅಪಾಯಕಾರಿ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೇಯುತ್ತೆ! title=
ಡಯಾಬಿಟಿಕ್ ರೋಗಿಗಳಿಗೆ ರಾಮಬಾಣ ನೆಲಬೇವು!

Kalmegh Benefits For Diabetics: ಕೊರೊನಾ ನಂತರದ ಕಾಲದಲ್ಲಿ ಆಯುರ್ವೇದ ಔಷಧವನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಆಯುರ್ವೇದದ ಕಡೆಗೆ ಹೊರ ದೇಶಗಳಲ್ಲಿನ ಜನರ ವಿಶ್ವಾಸವೂ ವೇಗವಾಗಿ ಹೆಚ್ಚುತ್ತಿದೆ. ಆಯುರ್ವೇದದ ವಿಶೇಷತೆ ಎಂದರೆ ಅದರ ಔಷಧಿಗಳು ಅಲೋಪಥಿಗಳಿಗೆ ಹೋಲಿಸಿದರೆ ದೇಹದ ಮೇಲೆ ತುಂಬಾ ಕಡಿಮೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಅಥವಾ ಅವುಗಳ ಅಡ್ಡಪರಿಣಾಮಗಳು ಅತ್ಯಲ್ಪ ಎನ್ನಲಾಗುತ್ತದೆ. ಇಂತಹ ಆಯುರ್ವೇದ ಔಷಧಿಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಇದು ಅನೇಕ ಅಪಾಯಕಾರಿ ರೋಗಗಳನ್ನು ಬೇರುಸಹಿತವಾಗಿ ತೆಗೆದುಹಾಕುತ್ತದೆ. ಇದರ ಸೇವನೆಯಿಂದ ದೇಹವು ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತದೆ.

ಇದನ್ನೂ ಓದಿ-Mahashivratri ದಿನ ಮಧುಮೇಹಿಗಳು ಮರೆತೂ ಈ ತಪ್ಪುಗಳನ್ನು ಮಾಡಬಾರದು!

ಸಕ್ಕರೆ ರೋಗಿಗಳಿಗೆ 'ಅಮೃತ'ಕ್ಕೆ ಸಮಾನ
ಆಯುರ್ವೇದದ ತಜ್ಞರು ಕಾಲಮೇಘ ಅಥವಾ ಚಿರತಾ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾರೆ. ಕಾಲಮೇಘ ಬಳಕೆಯಿಂದ ಜ್ವರ, ಶೀತ ಮತ್ತು ಗಂಟಲು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ. ಕನ್ನಡದಲ್ಲಿ ನೆಲಬೇವು ಎಂದೂ ಕರೆಯಲಾಗುವ ಈ ಗಿಡಮೂಲಿಕೆ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನೆಲಬೇವಿನ  ನೀರನ್ನು ಕುದಿಸಿ ಕುಡಿಯುವುದರಿಂದ ಅಥವಾ ಅದರ ಕಷಾಯವನ್ನು ಮಾಡಿ ಸೇವಿಸುವುದರಿಂದ, ಸಕ್ಕರೆ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಸಮತೋಲನವು ಕಾಪಾಡುತ್ತದೆ.

ಇದನ್ನೂ ಓದಿ-ತೂಕ ಇಳಿಕೆಗೆ ಲವಂಗ-ಶುಂಠಿಯ ಈ ಪೇಯ ಟ್ರೈ ಮಾಡಿ ನೋಡಿ, ಕೆಲವೇ ದಿನಗಳಲ್ಲಿ ಚಮತ್ಕಾರ!

ಒತ್ತಡವನ್ನು ನಿವಾರಿಸುತ್ತದೆ
ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿ ಮತ್ತು ಕೆಲಸದ ಹೊರೆಯಿಂದಾಗಿ ಹೆಚ್ಚಿನ ಜನರಲ್ಲಿ ಒತ್ತಡದ ಸಮಸ್ಯೆ ಕಂಡುಬರುತ್ತಿಕೆ. ನೆಲಬೇವಿನ ಕಷಾಯವನ್ನು ಕುಡಿಯುವುದರಿಂದ ಒತ್ತಡವನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಸ್ವಾರ್ತಿಯಾ ಮಾರ್ಟಿನ್ ಎಂಬ ಅಂಶವು ಒತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಕಾಲಮೇಘ ಕಷಾಯವು ಯಕೃತ್ತನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಕಾಮಾಲೆಯಂತಹ ಅಪಾಯಕಾರಿ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ. ನೆಲಬೇವಿನ ಸಾರವು ಮೂತ್ರಪಿಂಡಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಮಲೇರಿಯಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹರಹಾಕಬೇಕೆ? ಇಲ್ಲಿದೆ ಒಂದು ಅದ್ಭುತ ಪಾನೀಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News