ಅಡುಗೆ ಎಣ್ಣೆಯಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು! ಯಾವ Cooking Oil ಬೆಸ್ಟ್..?
ಅಡುಗೆಗೆ ಒಂದಲ್ಲ ಒಂದು ರೀತಿಯಲ್ಲಿ ನಾವು ಅಡುಗೆ ಎಣ್ಣೆ ಬಳಸಲೇ ಬೇಕು. ಬಳಸಿಯೇ ಇರ್ತೀವಿ. ಹಾಗಾಗಿ ಅಡುಗೆಗೆ ಬೆಸ್ಟ್ ಎಣ್ಣೆ ಯಾವುದು. ಪರಿಣಿತರು ನೀಡುವ ಸಲಹೆಗಳೇನು ನೋಡೋಣ.
ಬೆಂಗಳೂರು : ಅಡುಗೆ ಎಣ್ಣೆ ಬಳಸದೇ ನಮ್ಮ ಯಾವುದೇ ಅಡುಗೆ ಸಿದ್ದವಾಗೋದೇ ಇಲ್ಲ ಅಡುಗೆಯಲ್ಲಿ ಎಣ್ಣೆ (Cooking Oil) ಆದಷ್ಟೂ ಕಡಿಮೆ ಮಾಡಬೇಕೆಂದು ಅಂದುಕೊಂಡರೂ, ಹಾಗೇ ಮಾಡಲು ಸಾಧ್ಯವೇ ಆಗುವುದಿಲ್ಲ. ಕರಿದ ತಿಂಡಿ ಆರೋಗ್ಯಕ್ಕೆ (Health) ಒಳ್ಳೆಯದ್ದಲ್ಲ ಎಂದು ಗೊತ್ತಿದ್ದರೂ ಕರಿದ ತಿಂಡಿ ಇಲ್ಲದೆ ನಮ್ಮ ಊಟ ಪೂರ್ಣವಾಗುವುದೇ ಇಲ್ಲ. ಅಡುಗೆಗೆ ಒಂದಲ್ಲ ಒಂದು ರೀತಿಯಲ್ಲಿ ನಾವು ಅಡುಗೆ ಎಣ್ಣೆ ಬಳಸಲೇ ಬೇಕು. ಬಳಸಿಯೇ ಇರ್ತೀವಿ. ಹಾಗಾಗಿ ಅಡುಗೆಗೆ ಬೆಸ್ಟ್ ಎಣ್ಣೆ ಯಾವುದು. ಪರಿಣಿತರು ನೀಡುವ ಸಲಹೆಗಳೇನು ನೋಡೋಣ.
ಯಾವ ಎಣ್ಣೆ ಅಡುಗೆಗೆ ಬಳಸ್ತೀರಿ..?
ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಎಣ್ಣೆಯನ್ನು ಅಡುಗೆಗೆ ಬಳಸ್ತಾರೆ. ಶ್ರೀಮಂತರು ಅಡುಗೆಗೆ ಆಲಿವ್ ಆಯಿಲ್ (Olive Oil) ಬಳಸ್ತಾರೆ. ಕರಾವಳಿ ಕಡೆ ಜನ ಅಡುಗೆಗೆ ತೆಂಗಿನೆಣ್ಣೆ (Coconut Oil) ಬಳಸ್ತಾರೆ. ಕೆಲವು ಕಡೆ ನೆಲಗಡಲೆ ಎಣ್ಣೆ (GroundNutOil) ಬಳಸ್ತಾರೆ. ಸೂರ್ಯಕಾಂತಿ ಎಣ್ಣೆಯನ್ನೂ(SunflowerOil) ಅಡುಗೆಗೆ ಉಪಯೋಗಿಸ್ತಾರೆ. ಸಾಸಿವೆ ಎಣ್ಣೆ (Mustard Oil),ಅವಕಾಡೋ ಎಣ್ಣೆಯನ್ನೂ ಬಳಸ್ತಾರೆ. ಯಾವ ಎಣ್ಣೆ ಬಳಸಬಹುದು ನೋಡೋಣ. ಎಲ್ಲಾ ಎಣ್ಣೆಗಳಲ್ಲಿ ಬೇರೆ ಬೇರೆ ರೀತಿಯ ಗುಣಗಳಿವೆ.
ಇದನ್ನೂ ಓದಿ : Quit Non Veg : ಉತ್ತಮ ಆರೋಗ್ಯಕ್ಕೆ ಸಸ್ಯಾಹಾರವೇ ಮುಖ್ಯ.. ತಿಳಿದುಕೊಳ್ಳಿ ಸಸ್ಯಾಹಾರದ ಪ್ರಯೋಜನ
ಗುಣಮಟ್ಟದಲ್ಲಿ ಆಲಿವ್ ಎಣ್ಣೆ ಶ್ರೇಷ್ಠ..
ಆಲಿವ್ ಆಯಿಲ್ ಅಡುಗೆಗೆ ತುಂಬಾ ಒಳ್ಳೆಯ ಎಣ್ಣೆ ಎಂದು ಪರಿಣಿತರು ಹೇಳುತ್ತಾರೆ. ಅದರಲ್ಲೂ ಎಕ್ಸಟ್ರಾ ವರ್ಜಿನ್ ಆಲಿವ್ ಆಯಿಲ್ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದಂತೆ. ಇದು ಎಲ್ಲಾ ರೀತಿಯಲ್ಲೂ ಶುದ್ದ ಎಣ್ಣೆ ಎಂದು ಹೇಳುತ್ತಾರೆ. ಈ ಎಣ್ಣೆಯನ್ನು ರಿಫೈನ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಕ್ವಾಲಿಟಿ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಇದರಲ್ಲಿರುವ ವಿಟಮಿನ್ ಇ, ವಿಟಮಿನ್ ಕೆ, ಐಯರನ್, ಮೊನೊಸ್ಯಾಚುರೇಟೆಡ್ ಫ್ಯಾಟ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಪ್ಯಾಟ್ ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ, ಬೇರೆ ಎಣ್ಣೆಗಳಿಗೆ ಹೋಲಿಸಿದರೆ, ಆಲಿವ್ ಆಯಿಲ್ ತುಂಬಾ ದುಬಾರಿ.
ಕೊಬ್ಬರಿ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ..!
ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಕಲ್ಪವೃಕ್ಷದ ಕೊಡುಗೆ ಎಂದು ಹೇಳಲಾಗುತ್ತದೆ. ಕರಾವಳಿ ಭಾಗದ ಜನ ಅಡುಗೆಗೆ (Cooking) ಹೆಚ್ಚಾಗಿ ಬಳಸುವುದು ಕೊಬ್ಬರಿ ಎಣ್ಣೆಯನ್ನೇ. ಕೊಬ್ಬರಿ ಎಣ್ಣೆಯಲ್ಲಿ ಸೋಂಕು ನಾಶಕ ಸ್ವಭಾವೂ ಇದೆ. ಹಾಗಾಗಿ, ಸೋಂಕು ತಗುಲಿದ ಭಾಗಕ್ಕೆ ಅದನ್ನು ಹಚ್ಚಿದರೆ ಅದು ಬೇಗ ಉಪಶಮನವಾಗುತ್ತದೆ. ಪರಿಣಿತರ ಪ್ರಕಾರ ಕೊಬ್ಬರಿ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ (Cholestrol) ಕಡಿಮೆ ಇರುತ್ತದೆ. ಹಾಗಾಗಿ, ಅಡುಗೆಗೆ ಉತ್ತಮ ಎಣ್ಣೆ. ಆದರೆ, ಇದರಲ್ಲಿ ಹೈ ಸ್ಯಾಚುರೇಟೆಡ್ ಫ್ಯಾಟ್ (High Saturated Fat) ಇರುತ್ತದೆ. ಈ ವಿಷಯದಲ್ಲಿ ಆಹಾರ ಪಂಡಿತರಲ್ಲಿ ದ್ವಂದ್ವ ಇದೆ. ಹೈಸ್ಯಾಚುರೇಟೆಡ್ ಫ್ಯಾಟ್ ಹೃದಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಕೊಬ್ಬರಿ ಎಣ್ಣೆಯ ಮಿತ ಬಳಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ವಿಚಾರದಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ : Toilet ನಲ್ಲಿ ಅಪ್ಪಿತಪ್ಪಿಯೂ ಕೂಡ ಈ ಕೆಲ್ಸಾ ಮಾಡ್ಬೇಡಿ, ಗಂಭೀರ ಕಾಯಿಲೆ ಬಂದೀತು ಎಚ್ಚರ!
ಯಾವುದೇ ಸ್ವಾದ ನೀಡುವುದಿಲ್ಲ ಸೂರ್ಯಕಾಂತಿ ಎಣ್ಣೆ :
ಸಾಮಾನ್ಯವಾಗಿ ಸೂರ್ಯಕಾಂತಿ ಎಣ್ಣೆಯನ್ನು (Sun Flower Oil) ತುಂಬಾ ಹೆಚ್ಚಾಗಿ ಬಳಸಲಾಗುತ್ತದೆ. ಈ ಎಣ್ಣೆಯಲ್ಲಿ (Oil) ವಿಟಮಿನ್ ಇ ಹೆಚ್ಚಾಗಿ ಇರುತ್ತದೆ. ಇದರಲ್ಲಿ ಒಮೆಗಾ -6 ಫ್ಯಾಟಿ ಆಸಿಡ್ ಇದೆ. ಈ ಎಣ್ಣೆಯ ಮತ್ತೊಂದು ವಿಶೇಷ ಗುಣವೆಂದರೆ, ಈ ಎಣ್ಣೆ ಆಹಾರಕ್ಕೆ ಯಾವುದೇ ರುಚಿ ಅಥವಾ ಸುವಾಸನೆ ಕೊಡುವುದಿಲ್ಲ. ಸೂರ್ಯಕಾಂತಿ ಎಣ್ಣೆ ಬಳಸುವಾಗ ಆದಷ್ಟೂ ಜಿಪುಣತನ ಪ್ರದರ್ಶನ ಮಾಡಬೇಕು. ಯಾಕಂದರೆ, ಸೂರ್ಯಕಾಂತಿ ಎಣ್ಣೆಯ ಅತಿ ಹೆಚ್ಚು ಬಳಕೆ ಒಳ್ಳೆಯದಲ್ಲ ಎನ್ನುತ್ತಾರೆ ಆಹಾರ ಪಂಡಿತರು..!
ನೆಲಗಡಲೆ ಎಣ್ಣೆ ಯಾಕೆ ಒಳ್ಳೆಯದು..?
ನೆಲಗಡಲೆ ಎಣ್ಣೆ ((GroundNutOil) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ಮಾಡಿದ ಆಡುಗೆ ಆರೋಗ್ಯಕ್ಕೆ ತುಂಬಾ ಹಿತಕರ ಎಂದು ಆಹಾರ ಪಂಡಿತರು ಹೇಳುತ್ತಾರೆ. ನೆಲಗಡಲೆ ಎಣ್ಣೆಯಲ್ಲಿ ಮೋನೋಸ್ಯಾಚುರೇಟೆಡ್ ಆಯಿಲ್ ತುಂಬಾ ಹೆಚ್ಚಾಗಿರುತ್ತದೆ. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯವರಿಗೆ ಇದು ಅತ್ಯುತ್ತಮ ಎಣ್ಣೆ ಎನ್ನುವುದು ಪುಡ್
ಎಕ್ಸ್ ಪರ್ಟ್ ಅಭಿಮತ
ಇದನ್ನೂ ಓದಿ : ನಗಬೇಡಿ..! ಹೃದಯಾಘಾತ ಬಾತ್ ರೂಮಿನಲ್ಲೇ ಹೆಚ್ಚು.! ಏನದು ಲಿಂಕ್..?
ಇನ್ನು ಹಲವರು ವನಸ್ಪತಿಯನ್ನು ಅಡುಗೆಗೆ ಬಳಸುತ್ತಾರೆ. ವನಸ್ಪತಿ ಕಡಿಮೆ ದರದಲ್ಲಿ ಸಿಗುತ್ತದಾದರೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.